ಮುನವಳ್ಳಿ 11: ವಿದ್ಯಾಥರ್ಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ನನಸಾಗಿಸುವ ಗುರಿಯೊಂದಿಗೆ ಅಭ್ಯಸಿಸಬೇಕು. ಪರೀಕ್ಷೆಗಳು ಶಿಕ್ಷಣದ ಒಂದು ಭಾಗವಾಗಿದ್ದು ಧೈರ್ಯದಿಂದ ಎದುರಿಸಬೇಕು ಎಂದು ಸಂಸ್ಥೆಯ ಕೋಶಾಧ್ಯಕ್ಷ ಹಾಗೂ ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ರವೀಂದ್ರ ಯಲಿಗಾರ ಹೇಳಿದರು.
ಪಟ್ಟಣದ ಜೆ.ಎಸ್. ಪಿ. ಸಂಘದ ಎಸ್.ಪಿ.ಜೆ.ಜಿ ಪ್ರೌಢಶಾಲೆಯಲ್ಲಿ ಜ.9 ರಂದು ಮುನವಳ್ಳಿ ವಲಯ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಶೀಷರ್ಿಕೆಯಡಿ ಪಿಕನಿಕ್ ಪಜಲ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಮಾತನಾಡಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಎನ್ನುವುದು ವಿದ್ಯಾಥರ್ಿ ಜೀವನದ ಸಾಧನೆಯ ಮೊದಲ ಮೆಟ್ಟಿಲಾಗಿದ್ದು ಅದನ್ನು ಸವಾಲಾಗಿ ಸ್ವೀಕರಿಸಿ ನಿರಂತರ ಅಧ್ಯಯನ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆ ಪಾಸಾಗಬೇಕು. ಪರೀಕ್ಷೆ ಎನ್ನುವುದು ಒಂದು ಹಬ್ಬ ಅದನ್ನು ಸಂಭ್ರಮಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ವಿದ್ಯಾಥರ್ಿಗಳಿಗೆ ಧೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಟಕಾಯಿ, ಸುಬ್ಬಾಪೂರಮಠ, ಗರಸಂಗಿ, ರಾಠೋಡ, ಚಲವಾದಿ ಶಿಕ್ಷಕರಿಂದ ವಿದ್ಯಾಥರ್ಿಗಳಿಗೆ ಪರೀಕ್ಷಾ ಎದುರಿಸುವದು, ಒತ್ತಡ ನಿರ್ವಹಣೆ, ಆತ್ಮಸೈರ್ಯ ಕುರಿತು ಮಾರ್ಗದರ್ಶನ ಮಾಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಎಂ.ಆರ್. ಗೋಪಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆಯ ಗೌರವಕಾರ್ಯದಶರ್ಿ ವಿ ಎಸ್.ಯಕ್ಕುಂಡಿ, ಎಸ್.ಎ.ರೇಣಕೆ ಮುಖ್ಯೋಪಾಧ್ಯಾಯ ಎಂ.ಆರ್.ಗಂಟಿ. ಶಿಕ್ಷಕರಾದ ಬಿ.ಬಿ.ನಾವಲಗಟ್ಟಿ. ಆನ್ನಪೂರ್ಣ ಲಂಬೂನವರ, ಎಂ.ಎಸ್. ಕಲಾದಗಿ, ಟಿ.ಕೆ. ಮಳಗಲಿ, ಎಸ್.ಬಿ.ಹಿರಲಿಂಗನ್ನವರ, ಮೋಹನ ಕಾಮಣ್ಣವರ, ವಾಯ್. ಪಿ. ಮಾದರ. ಎ.ಎಸ್. ಯಲಿಗಾರ. ಎಸ್. ಜಿ. ಮುಂಜೆ, ವಿ.ಎಫ್. ಚಿಕ್ಕಮಠ ಎಸ್.ಎಸ್.ಕಾಮಣ್ಣವರ ಇತರರು ಇದ್ದರು.