ರಾಣೇಬೆನ್ನೂರ ಏ.27: ಸ್ಥಳೀಯ ತರಳುಬಾಳು ಇಂಜನೀಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಇಂಜನೀಯರಿಂಗ್ ವಿದ್ಯಾಥರ್ಿಗಳ ಸರ್ವತೋಮುಖ ಏಳ್ಗೆಗೆ ಸಂಸ್ಥೆಯು ಬದ್ಧವಾಗಿದ್ದು, ಪ್ರಸಕ್ತ ಸಾಲಿನಿಂದ 6 ವಿದ್ಯಾಥರ್ಿಗಳಿಗೆ ಉಚಿತ ಟ್ಯೂಷನ್ ಫೀ ಮತ್ತು 100 ವಿದ್ಯಾಥರ್ಿಗಳಿಗೆ ಶೇ.25ರಷ್ಟು ರಿಯಾಯಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಬಿ.ಶಿವಕುಮಾರ ಹೇಳಿದರು.
ಶನಿವಾರ ಕಾಲೇಜಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಲೇಜಿನ ಯಾವುದೇ ವಿಭಾಗದಲ್ಲಿ ಅಭ್ಯಾಸ ಮಾಡುವ ವಿದ್ಯಾಥರ್ಿಗಳಿಗಾಗಿ ರಿಯಾಯಿತಿ ಮತ್ತು ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇಂತಹ ವಿದ್ಯಾಥರ್ಿಗಳನ್ನು ಗುರುತಿಸಿ ಅವರಿಗೆ ಸಿಇಟಿ ಮಾದರಿಯಲ್ಲಿ ಪರೀಕ್ಷೆ ಕೈಗೊಂಡು ಆಯ್ಕೆ ಮಾಡುವ ಕೆಲಸವನ್ನು ಆಡಳಿತ ಮಂಡಳಿ ಮತ್ತು ಉಪನ್ಯಾಸಕ ಸಿಬ್ಬಂಧಿಗಳಿಗೆ ವಹಿಸಲಾಗಿದೆ. ಇದರಲ್ಲಿ ಪಾಸಾದ ವಿದ್ಯಾಥರ್ಿಗಳನ್ನು ಈ ಮೇಲಿನ ಟ್ಯೂಷನ್ ಫೀ ಮತ್ತು ರಿಯಾಯಿತಿ ದರಕ್ಕೆ ಅನ್ವಯಿಸುವಂತೆ ಆಯ್ಕೆ ಮಾಡಲಾಗುವುದು ಎಂದರು.
ಈ ಕಾಲೇಜಿನಲ್ಲಿ ಅಭ್ಯಸಿಸಿ ಉತ್ತೀರ್ಣಗೊಂಡ 205ಕ್ಕೂ ಅಧಿಕ ವಿದ್ಯಾಥರ್ಿಗಳು 2017-18 ರಲ್ಲಿ ಮತ್ತು 83 ವಿದ್ಯಾಥರ್ಿಗಳು ಪ್ರಸಕ್ತ ಸಾಲಿನಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಮಹಿಳಾ ಮತ್ತು ಪುರುಷ ವಿದ್ಯಾಥರ್ಿಗಳಿಗೆ ಪ್ರತ್ಯೇಕ ಹಾಸ್ಟೇಲ್ ಸೌಲಭ್ಯ ಮತ್ತಿತರ ಸೌಲತ್ತುಗಳನ್ನು ಕಲ್ಪಿಸಲಾಗಿದೆ ಎಂದರು.
ಇಂತಹ ಸುವ್ಯವಸ್ಥೆ ಹೊಂದಿರುವ ಕಾಲೇಜಿನಲ್ಲಿ ಉತ್ತಮ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳಿದ್ದು, 52 ಎಕರೆ ವಿಸ್ತೀರ್ಣದಲ್ಲಿ ಕಾಲೇಜ್ ಕ್ಯಾಂಪಸ್ನ್ನು ನಿಮರ್ಿಸಲಾಗಿದೆ ಎಂದರು. ಎಂ.ವಿ.ಶಿವಕುಮಾರ, ಉಪನ್ಯಾಸಕರಾದ ಪೂಣರ್ಿಮಾ, ಕೆ.ರಾಜೇಶ, ಕೃಷ್ಣಮೂತರ್ಿ, ದಿನೇಶ ಮಾಗನೂರ, ಕಿರಣ, ಬಿ.ಮಹೇಶ್ವರಪ್ಪ, ಟಿ ಚಂದ್ರಪ್ಪ, ಡಾ.ಎಸ್.ಜಿ ಮಾಕನೂರ ಸೇರಿದಂತೆ ಮತ್ತಿತರರು ಇದ್ದರು.