ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ: ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಶ್ರಮದಾನ ಕಾರ್ಯಕ್ರಮ

ಬೆಳಗಾವಿ 18: ರಾಷ್ಟ್ರೀಯ ಸೇವಾಯೋಜನೆಯಲ್ಲಿ ಶ್ರಮದಾನವು ಶ್ರಮದ ಮಹತ್ವವನ್ನು ವಿದ್ಯಾಥರ್ಿಗಳಲ್ಲಿ ತಿಳಿಸುವ ಒಂದು ಸಾಧನವಾಗಿದೆ.  ಇಂದಿನ ಸಮಾಜದಲ್ಲಿ ಚಿಕ್ಕ ಚಿಕ್ಕ ಕುಟುಂಬದ ಪರಿಕಲ್ಪನೆಯಿಂದ ಶ್ರಮದ ಕೆಲಸಗಳನ್ನು ತಮ್ಮ ಮಕ್ಕಳಿಗೆ ಪಾಲಕರು ಕಲಿಸುತ್ತಿಲ್ಲವಾದ್ದರಿಂದ ಶ್ರಮದ ಕಲ್ಪನೆ ಇಂದಿನ ಮಕ್ಕಳಿಗೆ ಆಗುತ್ತಿಲ್ಲ. ಆದ್ದರಿಂದ ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬರಿಗೂ ತಮ್ಮ ದುಡಿಮೆಯ ಶ್ರಮದ ಅರಿವಾಗುತ್ತದೆ ಎಂದು ಶಿವಬಸವ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಎಸ್.ಕೆ.ತಲ್ಲೂರ ಹೇಳಿದರು.

ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುತ್ತಿರುವ ವಿಶೇಷ ವಾಷರ್ಿಕ ಶಿಬಿರ -2019ರ ನಾಲ್ಕನೆ ದಿನದ ಕಾರ್ಯಕ್ರಮದ ಅಂಗವಾಗಿ ದಿ. 17ರಂದು ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಯಂಸೇವಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಗ್ರಾಮದ ಯುವಕರಿಗೆ ಇನ್ನು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಕಾರ್ಯಕ್ರಮ ಪ್ರೇರಣೆಯಾಗುತ್ತಿದೆ. ಪುರಾತನವಾದ ಕಲ್ಮೇಶ್ವರ ದೇವಾಸ್ಥಾನವು ಐತಿಹ್ಯವನ್ನು ಹೊಂದಿದ್ದು ಇಲ್ಲಿ ಚೆನ್ನಬಸವಣ್ಣನವರು ಭೇಟಿ ಇತ್ತಿದ್ದರೆಂಬ ಇತಿಹಾಸವಿದೆ.  ಈ ರೀತಿಯ ಪವಿತ್ರ ಸ್ಥಳದಲ್ಲಿ ಆವರಣದ ಪುನರುಜ್ಜೀವನ ಕಾರ್ಯಕೈಗೊಂಡಿರುವುದು ಶ್ಲಾಘನೀಯವೆಂದು ಬಣ್ಣಿಸಿದರು.

ಗ್ರಾಮದ ದೇವಸ್ಥಾನದ ಕಮೀಟಿಯ ಸದಸ್ಯರಾದ ಗಂಗಪ್ಪ ತಲ್ಲೂರ, ಸಂಗಪ್ಪ ತಲ್ಲೂರ, ದೊಡ್ಡನಾಯಕ ಇಂಚಲ, ಗೂಳಪ್ಪ ತಲ್ಲೂರ, ಚಂದ್ರಶೇಖರ ಮುದ್ದೇನಗುಡಿ, ವೀರನಾಯ್ಕ ಪಾಟೀಲ, ಪ್ರಕಾಶ ಚ. ನಾಯ್ಕರ, ಇತರ ಪ್ರಮುಖರು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ವೀರಣ್ಣ.ಡಿ.ಕೆ, ಪ್ರೊ.ಪ್ರಸಾದ ಕಲ್ಲೋಳಿಮಠ, ಪ್ರೊ. ರಾಹುಲ್ ಬನ್ನೂರ, ವಿದ್ಯಾಥರ್ಿ ಸ್ವಯಂಸೇವಕರು, ಊರಿನ ಇತರ ನಾಗರೀಕರು, ಮಠದ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.