ಎಸ್‌ಡಿಎಂಸಿ ಸದಸ್ಯರು: ಗಂಗಮ್ಮ ದಂಪತಿಗಳಿಗೆ ಸನ್ಮಾನ

SDMC members: Tribute to Gangamma couple

ಎಸ್‌ಡಿಎಂಸಿ ಸದಸ್ಯರು: ಗಂಗಮ್ಮ ದಂಪತಿಗಳಿಗೆ ಸನ್ಮಾನ 

ರಾಣಿಬೆನ್ನೂರ 06:  ತಾಲೂಕಿನ  ಐರಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಮಹೇಶಪ್ಪ ಲಗುಬಿಗಿ ಇವರು ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ 24,000 ರೂಗಳನ್ನು ಶಾಲೆಯ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಿ ಮಾದರಿಯಾಗಿದ್ದಾರೆ. 

   ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ  ಕರಿಯಪ್ಪ ಕಂಬಳಿ, ಸದಸ್ಯರಾದ ಮಂಜುನಾಥ ತಳವಾರ, ಹನುಮಂತಪ್ಪ ಹಂಚಿನಮನಿ,  ನಾಗೇಂದ್ರ​‍್ಪ ನಡುವಿನಮನಿ, ಹಿರಿಯ ಶಿಕ್ಷಕ ಎಂ ಎನ್ ಬಲ್ಲೂರ, ಪ್ರಭಾರಿ ಮುಖ್ಯೋಪಾಧ್ಯಾಯಿನಿ ಅನ್ನಪೂರ್ಣ ಎನ್ ಬಣಕಾರ ಸೇರಿದಂತೆ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಶಾಲಾ ಸಿಬ್ಬಂದಿಗಳು ಗಂಗಮ್ಮ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. 

ಫೋಟೊ:6ಆರ್‌ಎನ್‌ಆರ್01ರಾಣಿಬೆನ್ನೂರ: ತಾಲೂಕಿನ  ಐರಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ 24,000 ರೂಗಳನ್ನು ಶಾಲೆಯ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಿದ  ಗಂಗಮ್ಮ ದಂಪತಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.