ವಾ.ಕ.ರ.ಸಾ.ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರ, ಹುಬ್ಬಳ್ಳಿಯಲ್ಲಿ ಎಲುಬು ಸಾಂದ್ರತೆ ತಪಾಸಣಾ ಶಿಬಿರ
ಹುಬ್ಬಳ್ಳಿ 06: ದಿನಾಂಕ: 06-02-2025 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕರ್ಯಾಗಾರ, ಹುಬ್ಬಳ್ಳಿಯಲ್ಲಿ ಕಚಿಡಿಟಜಜ ಐಣಜ, ಬೆಂಗಳೂರು ಇವರ ವತಿಯಿಂದ ಉಚಿತ ಎಲುಬು ಸಾಂದ್ರತೆ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಪ್ರಾದೇಶಿಕ ಕಾರ್ಯಾಗಾರದ ಕಾರ್ಯನಿರತ ಎಲ್ಲ ಅಧಿಕಾರಿ/ಸಿಬ್ಬಂದಿಗಳು ತಪಾಸಣೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವುದರ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಲಾಯಿತು. ಶಿಬಿರದಲ್ಲಿ ಪ್ರಾದೇಶಿಕ ಕಾರ್ಯಾಗಾರದ ತಾಂತ್ರಿಕ/ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸದರಿ “ಸುದ್ದಿ” ಯನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಜಿಲ್ಲೆಯ ಎಲ್ಲಾ ಜನಪ್ರಿಯ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಸಾರ್ವಜನಿಕ “ಸುದ್ದಿ” ಎಂದು ಪ್ರಕಟಿಸಲು ಈ ಮೂಲಕ ಕೋರಲಾಗಿದೆ.