ಹಿರಾಶುಗರ ಕಾರಖಾನೆ ಸಹಕಾರಿ ತತ್ವದಲ್ಲಿಯೇ ಮುಂದುವರೆಯುವುದು : ಮಾಜಿ ಸಂಸದ ಜೊಲ್ಲೆ ಸಂಕೇಶ್ವರ (ವರದಿ: ಎಂ.ಬಿ.ಘಸ್ತಿ)

Hirasugara factory to continue on cooperative principle : Former MP Jolle Sankeshwar (Report: MB Gh

ಹಿರಾಶುಗರ ಕಾರಖಾನೆ ಸಹಕಾರಿ ತತ್ವದಲ್ಲಿಯೇ ಮುಂದುವರೆಯುವುದು : ಮಾಜಿ ಸಂಸದ ಜೊಲ್ಲೆ ಸಂಕೇಶ್ವರ (ವರದಿ: ಎಂ.ಬಿ.ಘಸ್ತಿ) 

ಸಂಕೇಶ್ವರ 06: ಶ್ರೀ ಶಂಕರಾಚಾರ್ಯ ಮಠಕ್ಕೆ ಚಿಕ್ಕೋಡಿಯ ಮಾಜಿ ಸಂಸದ ಹಾಗೂ ಜೊಲ್ಲೆ ಸಮೂಹದ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಶಂಕರಲಿಂಗನ ದರ್ಶನ ಪಡೆದರು.  ನಂತರ ಮಾತನಾಡುತ್ತ ಸಂಕೇಶ್ವರ ಸಕ್ಕರೆ ಕಾರಖಾಯೆನ್ನು ಜೊಲ್ಲೆ ಸಮೂಹದ ತೆಕ್ಕೆಗೆ ಬಿದ್ದಿರುವ ಸುದ್ದಿಯು ಹರಡಿದ್ದು ಇದು ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆ ಲೋಕದರ್ಶನ ಕನ್ನಡ ದಿನಪತ್ರಿಕೆಯ ಪ್ರತಿನಿಧಿಗಳು ಹಾಗೂ ಇನ್ನುಳಿದ ಪತ್ರಕರ್ತರು ಮಾಜಿ ಸಂಸದರನ್ನು ಪ್ರಶ್ನಿಸಿದಾಗ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯನ್ನು ಸಹಕಾರಿ ತತ್ವದ ಅಡಿಯಲ್ಲಿ ದಿವಂಗತ ಅಪ್ಪಣ್ಣಗೌಡ ಪಾಟೀಲರು ಹುಟ್ಟುಹಾಕಿದ ಈ ಹಿರಾಶುಗರ ಸಕ್ಕರೆ ಕಾರಖಾನೆಯು ದೇಶದಲ್ಲಿಯೇ ಸಹಕಾರಿ ತತ್ವದ ಮೇಲೆ ನಡೆಯುತ್ತಿದ್ದ ಪ್ರಸಿದ್ಧ ಕಾರಖಾನೆಯಾಗಿತ್ತು.  ಈಗ ಸದ್ಯ ಈ ಸಕ್ಕರೆ ಕಾರಖಾಯನ್ನು ಲೀಜ್ ಮೇಲೆ ಕೊಡಲಾಗುತ್ತಿದೆ ಎಂಬ ಸುದ್ದಿ ಹರಡಿದ್ದು ಅದು ಸುಳ್ಳು ಸುದ್ದಿಯಾಗಿದೆ.  ತಾವು ಸಹಕಾರಿ ರಂಗವನ್ನು ಗೌರವಿಸುತ್ತಿದ್ದು, ಈ ಸಕ್ಕರೆ ಕಾರಖಾನೆಯು ಸಹಕಾರಿ ರಂಗದ ಭೀಷ್ಮ ದಿವಂಗತ ಅಪ್ಪಣ್ಣಗೌಡ ಪಾಟೀಲರು ಹಾಗೂ ಅವರ ನಂತರ ಅವರ ಅನುಯಾಯಿ ಸಹಕಾರಿ ಮಹರ್ಷಿ ದಿ. ಬಸಗೌಡಾ ಪಾಟೀಲರು ಕಾರಖಾಯನ್ನು ಉನ್ನತ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು.  ಸಹಕಾರಿ ತತ್ವದ ಮೇಲೆ ನಡೆಯುತ್ತಿರುವ ಈ ಕಾರಖಾನೆಯಲ್ಲಿ ಕಬ್ಬು ಪೂರೈಸಿದ ರೈತರಿಗೆ 15 ದಿನಗಳಲ್ಲಿ ಬಿಲ್ಲನ್ನು ಪಾವತಿ ಮಾಡಲಾಗುತ್ತಿತ್ತು.  ಇವರ ಆದರ್ಶ ಸಹಕಾರಿ ತತ್ವದ ಮಾದರಿಯಲ್ಲಿಯೇ ನಮ್ಮ ನಿಪ್ಪಾಣಿಯ ಹಾಲಸಿದ್ಧನಾಥ ಸಕ್ಕರೆ ಕಾರಖಾನೆಯಂತೆಯೇ ಸಂಕೇಶ್ವರದ ಈ ಕಾರಖಾನೆಯನ್ನು ಸಹಕಾರಿ ತತ್ವದ ಮೇಲೆಯೇ ನಡೆಸುತ್ತೇವೆ.  ಎಲ್ಲ ಸಂಚಾಲಕ ಮಂಡಳಿಗೆ ಕಾರಖಾನೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಎಲ್ಲ ರೀತಿಯ ಸಹಕಾರವನ್ನು ತಾವು ನೀಡುವುದಾಗಿ ಈ ಸಂದರ್ಭದಲ್ಲಿ ಪತ್ರಿಕರ್ತರಿಗೆ ತಿಳಿಸಿದರು.  ಹಿರಾಶುಗರ ಸಕ್ಕರೆ ಕಾರಖಾನೆಯ ಮೇಲೆ ಈಗಾಗಲೇ ರೂ. 650 ಕೋಟಿ ಸಾಲ ಹೊರೆ ಇದ್ದು ಕೆಲವು ವರ್ಷಗಳ ಅವಧಿಯಲ್ಲಿ ಈ ಕಾರಖಾನೆಯನ್ನು ಸಾಲಮುಕ್ತವಾಗಿ ಮಾಡಲಾಗುವುದು ಎಂದು ತಿಳಿಸಿದರು.  ಈ ಕಾರಖಾನೆಯಲ್ಲಿ ಸಕ್ಕರೆ ಉತ್ಪಾದನೆಯ ಜೊತೆಗೆ ಇಥೇನಾಲ್,ಕೋ ಜನರೇಶನ್, ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಮತ್ತು ಕಾರಖಾನೆಗೆ ಚಿರಾಸ್ತಿಯನ್ನು ಹೊಂದಿರುತ್ತದೆ ಎಂದು ಹೇಳಿದರು.  ಪುರಾತನ ಕಾಲದಿಂದ ಪ್ರಸಿದ್ಧವಾದ ಶಂಕರಾಚಾರ್ಯ ಮಠದ ಅಭಿವೃದ್ಧಿಗೋಸ್ಕರ ತಾವು ಕೇಂದ್ರ ಸರ್ಕಾರದಲ್ಲಿ ಅನುದಾನವನ್ನು ತರುತ್ತೇವೆ ಹಾಗೂ ಮಠದ ಅಧಿಕಾರಿ ಕಾನವಡೆ ಮತ್ತು ಪ್ರಕಾಶ ಹುದ್ದಾರ ವಿನಾಯಕ ಕುಲಕರ್ಣಿ(ನ್ಯಾಯವಾದಿ) ಇವರಿಗೆ ಅಭಿವೃದ್ಧಿಯ ಯೋಜನಾ ವರದಿಯನ್ನು ಬೇಗನೇ ಸಿದ್ಧಪಡಿಸಿ ಸಲ್ಲಿಸಬೇಕೆಂದು ಜೊಲ್ಲೆ ಇವರು ಮಠದ ಅಧಿಕಾರಿ ವೃಂದದವರಿಗೆ ತಿಳಿಸಿದರು.