ಬಸವ ಶ್ರೀ ಪ್ರಶಸ್ತಿಗೆ ಮಹಾಂತೇಶ ಬಡ್ಲಿ ಆಯ್ಕೆ

Mahantesh Badli selected for Basava Shri award

ಬಸವ ಶ್ರೀ ಪ್ರಶಸ್ತಿಗೆ ಮಹಾಂತೇಶ ಬಡ್ಲಿ ಆಯ್ಕೆ   

ಧಾರವಾಡ,06 : ನಮ್ಮ ಬಸವ ಸೇನೆ (ರಿ) ಬೆಂಗಳೂರು ಹಾಗೂ ಧಾರವಾಡ ನ್ಯೂಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ "ಶರಣರ ಸದನ" ಎಂಬ ಪುಸ್ತಕ ಬಿಡುಗಡೆ ಹಾಗೂ “ಬಸವ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಾಂತೇಶ ಬ, ಬಡ್ಲಿ ಅವರ ಹಾಸ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ "ಬಸವ ಶ್ರೀ” ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತೀರಿ ಎಂದು ತಿಳಿಸಲು ಸಂತೋಷವೆನಿಸುತ್ತದೆ. ಆದ್ದರಿಂದ ತಾವುಗಳು ದಿನಾಂಕ 12-02-2025 ರಂದು ಬುಧವಾರ ಸಾಯಂಕಾಲ 5 ಗಂಟೆಗೆ ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನ, ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಿ “ಬಸವ ಶ್ರೀ" ರಾಷ್ಟ್ರೀಯ ಪ್ರಶಸ್ತಿ ಪಡೆಯಲು ತಿಳಿಸಲಾಗಿದೆ ಎಂದು ಧಾರವಾಡ ನ್ಯೂಸನ ಬಸವರಾಜ ಆನೆಗುಂದಿ ಹಾಗೂ ನಮ್ಮ ಬಸವ ಸೇನೆಯ ರಾಜ್ಯ ಅಧ್ಯಕ್ಷರಾದ ಲೋಕೇಶ್ ಮೂರ್ತಿ ಅವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ