ಎಸ್ಸಿಪಿ, ಟಿಎಸ್ಪಿ ಪ್ರಗತಿ ಪರಿಶೀಲನಾ ಸಭೆ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ ಸಲ್ಲದು: ಡಿಸಿ ಶಾಂತಾರಾಮ

ಬಾಗಲಕೋಟೆ 11: ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ, ಯೋಜನೆ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ ತೋರುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನೆ, ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆ ಹಾಗೂ ಸಫಾಯಿ ಕರ್ಮಚಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಅವಧಿಯೊಳಗೆ ಖಚರ್ು ಮಾಡಬೇಕು. ಯಾವುದೇ ರೀತಿಯ ಸಬೂಬು ಹೇಳದೇ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಸಿದರು.

ಪರಿಶಿಷ್ಠ ಜಾತಿ ಮತ್ತು ಪಂಗಡದ ವರ್ಗದ ಫಲಾನುಭವಿಗಳ ಸವರ್ೆ ಮಾಡಿ ವಿವರ ನೀಡಲು ಈಗಾಗಲೇ ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆ, ಕೃಷಿ, ರೇಷ್ಮೇ, ಸಾರ್ವಜನಿಕ ಶಿಕ್ಷಣ, ತೋಟಗಾರಿಕೆ, ಮೀನುಗಾರಿಕೆ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಗಗೆ ಸೂಚಿಸಲಾಗಿತ್ತು. ಆದರೆ ಕೆಲವೊಂದು ಇಲಾಖೆಯವರು ಪೂರ್ಣ ಮಾಹಿತಿ ನೀಡಿರುವದಿಲ್ಲ. ಈ ಡಾಟಾ ಬೇಸ್ ಮೂಲಕ ಎಸ್ಸಿ, ಎಸ್ಟಿ ಜನಾಂಗದವರನ್ನು ಮುಖ್ಯವಾಹಿನಿಗೆ ತರಲು ಅಗತ್ಯವಾಗಿದ್ದು, ಡಿಸೆಂಬರ ಅಂತ್ಯಕ್ಕೆ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು. 

ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಕೊರೆಯಿಸಲಾದ ಬೋರ್ವೆಲ್ಗಳಿಗೆ ಬಾಕಿ ಉಳಿದ ವಿದ್ಯುತ್ ಸಂಪರ್ಕ ಒದಗಸಿದುವಂತೆ ಕಳೆದ ಸಭೆಯಲ್ಲಿ ಸೂಚಿಸಿದರು ಕೆಲಸವಾಗಿಲ್ಲ. ಇನ್ನು 3 ದಿನಗಳೊಳಗೆ ಕೆಲಸವಾಗದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಅಂಬೇಡ್ಕರ ಅಭಿವೃದ್ಧಿ ನಿಗದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕೃಷಿ ಇಲಾಖೆಯವರು ಪ್ರೂಟ್ಸ್ ಪೋರ್ಟಲ್ನಲ್ಲಿ ಎಸ್ಸಿ, ಎಸ್ಟಿ ಜನಾಂಗದ ಕೃಷಿ ಭೂಮಿ ಹೊಂದಿರುವ ರೈತರ ಮಾಹಿತಿಯನ್ನು ನೋಂದಣಿ ಕಾರ್ಯ ಪೂರ್ಣಗೊಳಿಸಬೇಕು. 

ಸಹಕಾರ, ಖಾದಿ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಆಯುಷ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಗಳು ಪ್ರತಿ ಶೂನ್ಯವಾಗಿದ್ದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಇಲ್ಲಿಯವರೆಗೆ ಆಗಬೇಕಾದ ಕಾರ್ಯಗಳನ್ನು ಅನುಷ್ಟಾನಗೊಳಿಸಿ ಮುಂದಿನ ಸಭೆಯಲ್ಲಿ ವಿವರಗಳೊಂದಿಗೆ ಹಾಜರಾಗಬೇಕೆಂದು ಸೂಚಿಸಿದರು. ಅಲ್ಲದೇ ಸಭೆಗೆ ಗೈರು ಹಾಜರಾದ ಮೇಲೆ ಶೋಕಾಸ್ ನೋಟಿಸ್ ನೀಡುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಯಿಂದ ಬಂದ ಮಾಹಿತಿಯನ್ನು ಪರಿಶೀಲಿಸಲು ತಿಳಿಸಿದರು.

ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂಬೇಡ್ಕರ ಅಭಿವೃದ್ದಿ ನಿಗಮದಿಂದ ಕೊರೆಯಲಾದ ಬೋರವೆಲ್ಗಳ ಚಚರ್ೆ ನಡೆಯಿತು. ಜಿಲ್ಲೆಯಲ್ಲಿ ಪರಿಶಿಷ್ಠ ಜಾತಿಯಲ್ಲಿ 19 ಹಾಗೂ ಪರಿಶಿಷ್ಟ ಪಂಗಡದಲ್ಲಿ 13 ಸೇರಿ ಒಟ್ಟು 32 ಕೊಳವೆಬಾವಿ ಕೊರೆಯಿಸಲು ಬಾಕಿ ಉಳಿದಿದ್ದು, ಡಿಸೆಂಬರ ಅಂತ್ಯದಲ್ಲಿ ಬಾಕಿ ಬೋರವೆಲ್ಗಳನ್ನು ಕೊರೆಯಿಸಬೇಕು. ಅಲ್ಲದೇ ಬಾಕಿ ಉಳಿದಿರುವ ಬೋರವೆಲ್ಗಳಿಗೆ ವಿದ್ಯುತ್ತೀಕರಣಕ್ಕೆ ಕ್ರಮಕೈಗೊಳ್ಳಲು ಸೂಚಿಸಲಾಯಿತು.

ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಮೀಸಲಿರಿಸಲಾದ ಎಸ್ಎಫ್ಸಿ ಅನುದಾನ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಮೀಸಲಿರಿಸಲಾದ ಅನುದಾನವನ್ನು ಸಂಪೂರ್ಣವಾಗಿ ಖಚರ್ು ಮಾಡಬೇಕು. ಈ ಅನುಧಾನದಲ್ಲಿ ಲ್ಯಾಪ್ಟಾಪ್, ಸ್ಕಾಲರ್ಶಿಫ್, ಹೊಲಿಗೆ ಯಂತ್ರ ಇವುಗಳಿಗೆ ಆದ್ಯತೆ ನೀಡುವಂತೆ ಸಮಿತಿಯ ಸದಸ್ಯರು ಸಭೆಗೆ ತಿಳಿಸಿದಾಗ ಇತರೆ ಇಲಾಖೆಯವರು ನೀಡುವ ಸೌಲಭ್ಯಗಳನ್ನು ಬಿಟ್ಟು ಇವುಗಳಿಗೆ ಆಧ್ಯತೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಅಲ್ಲದೇ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದವರಿಗೆ ನೀಡಲಾದ ಸೌಲಭ್ಯಗಳ ಮಾಹಿತಿಯನ್ನು ನೋಟಿಸ್ ಬೋರ್ಡ ಮೇಲೆ ಪ್ರದಶರ್ಿಸಬೇಕು. ಅಲ್ಲದೇ ಒಬ್ಬನೇ ಫಲಾನುಭವಿಗಳಿಗೆ ಪದೇ ಪದೇ ಸೌಲಭ್ಯಗಳು ಹೋರದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಏಪ್ರೀಲ್ ದಿಂದ ನವೆಂಬರ ವರೆಗೆ ದೌರ್ಜನ್ಯ ಪ್ರಕರಣಗಳಿಗೆ 33.87 ಲಕ್ಷ ಪರಿಹಾರ ಧನ ನೀಡಲಾಗಿದೆ. ಅಲ್ಲದೇ 27 ದೌರ್ಜನ್ಯ ಘಟನೆಗಳಿಗೂ ಸಹ ಪರಿಹಾರ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ನೋಂದ ಸಂತ್ರಸ್ತರಿಗೆ ವರ್ಷವಾರು ಒಟ್ಟು 423.34 ಲಕ್ಷ ಪರಿಹಾರ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ದೌರ್ಜನ್ಯ ಪ್ರಕರಣಗಳಿಗೆ ಒಟ್ಟು 95.19 ಲಕ್ಷ ಅನುದಾನ ಬಿಡುಗಡೆಯಾಗಿದೆ. ನವೆಂಬರ ಅಂತ್ಯಕ್ಕೆ 27 ಪ್ರಕರಣಗಳು ದಾಖಲಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕರು ಸಭೆಗೆ ತಿಳಿಸಿದರು.  

ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ: ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ ಮಾಹಿತಿಯನ್ನು ಸಂಗ್ರಹಿಸಬೇಕು. ಅವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜಿಲ್ಲೆಯಲ್ಲಿ ಒಂದು ಕಾಯರ್ಾಗಾರ ಹಮ್ಮಿಕೊಳ್ಳುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಕಾಯರ್ಾಗಾರದಲ್ಲಿ ಸರಕಾರದಿಂದ ಸಿರುಗ ಎಲ್ಲ ರೀತಿಯ ಸೌಲಭ್ಯಗಳ ಮಾಹಿತಿಯ ಪಾಂಪ್ಲೇಟ್ಸ್ ಪ್ರೀಂಟ್ ಮಾಡಿ ಹಂಚಬೇಕು. ಅಂಬೇಡ್ಕರ ಅಭಿವೃದ್ದಿ ನಿಗದಿಂದ ಈಗಾಗಲೇ 3 ಜನ ಸಫಾಯಿ ಕರ್ಮಚಾರಿಗಳ ಫಲಾನುವಿಗಳಿಗೆ ಸ್ವೀಪ್ಟ್ ವಾಹನ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಜಗದೀಶ ಹೆಬ್ಬಳ್ಳಿ, ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಡಾ.ಎಮ್.ಎಚ್.ಚಲವಾದಿ, ದುಂಡಪ್ಪ ಸಾವಳಗಿ, ಯಲ್ಲಪ್ಪ ಮೈತ್ರಿ, ಸಂಭುಗೌಡ ಪಾಟೀಲ, ಸುಭಾಸ ಗಸ್ತಿ, ಸಫಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ಸೂಗುರಯ್ಯ ಸ್ವಾಮಿ, ಹನಮಂತ ಛಲವಾದಿ, ಶಾರದಾ ಬಾದಾಮಿ, ಲಲಿತಾ ಗೋವಿಂದಕೋರೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.