ಸಾವಿಗಿಡಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಹಾರ ನೀಡಲು ಎಸ್ಎಪ್ಐ ಮನವಿ

ಲೋಕದರ್ಶನ ವರದಿ

ಯಲಬುರ್ಗಾ  19: ಜಿಲ್ಲಾ ಕೇಂದ್ರದ ವಸತಿ ನಿಲಯದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವಿಗಿಡಾದ ಐದು ಜನ ವಿದ್ಯಾರ್ಥಿ ಗಳ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಎಸ್ಎಪ್ಐ ಸಂಘಟನೆ ಒತ್ತಾಯಿಸಿದೆ.

ಪಟ್ಟಣದ ತಾಪಂನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಒತ್ತಾಯಿಸಿದರು. ಎಸ್ಎಪ್ಐ ತಾಲೂಕ  ಅಧ್ಯಕ್ಷ ಎಂ ಸಿದ್ದಪ್ಪ ಈ ಘಟನೆಗೆ ಅಧಿಕಾರಿಗಳ ಬೇಜಬ್ದಾರಿತನವೇ ಕಾರಣವಾಗಿದೆ ನಮ್ಮ ಜಿಲ್ಲೆಯಲ್ಲಿ ಹಲವಾರು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಅಲ್ಲಿ ವಿದ್ಯಾಥರ್ಿಗಳಿಗೆ ಯಾವುದೇ ಅನುಕೂಲತೆಗಳಿಲ್ಲಾ ವಿದ್ಯಾಥರ್ಿಗಳಿಗೆ ಮೂಲಭೂತ ಸೌಲಭ್ಯಗಳಿಲ್ಲಾ ತಮಗೆ ಮನಬಂದಂತೆ ಹೆಚ್ಚಿನ ವಿದ್ಯಾಥರ್ಿಗಳನ್ನು ಇಟ್ಟುಕೊಳ್ಳುತ್ತಾರೆ ವಾರ್ಡನ್ಗಳು ಯಾರು ಸರಿಯಾಗಿ ವಸತಿ ನಿಲಯಕ್ಕೆ ಬೇಟಿ ನೀಡುವದಿಲ್ಲಾ ಮಕ್ಕಳ ಬೇಕು ಬೇಡಿಕೆಗಳನ್ನ ಇಡೇರಿಸುವದಿಲ್ಲಾ ಅಲ್ಲಿ ಗಮನಕ್ಕೆ ಬಂದಂತಹ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನು ಸಂಬಂದಿಸಿದವರು ಯಾರು ಮಾಡುವದಿಲ್ಲಾ ಎಂದರು.

ಸಂಘಟನೆಯ ಮುಖಂಡ ರವಿ ಮಾತನಾಡಿ ಸ್ಥಳೀಯವಾಗಿ ಇರುವ ಹಲವಾರು ವಸತಿ ನಿಲಯಗಳು ಸಾಕಷ್ಟು ಸೌಲಭ್ಯಗಳಿಂದ ವಂಚಿತವಾಗಿವೆ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಬಹುತೇಕ ವಸತಿ ನಿಲಯಗಳು ಸಮಸ್ಯೆಯ ಸುಳಿಯಲ್ಲಿವೇ ವಿದ್ಯಾರ್ಥಿ ಗಳಿಗೆ ಓದಿಗೆ ಅನುಕೂಲವಾಗುವಂತಹ ಯಾವ ವಾತವರಣ ಇಲ್ಲಾ ಆದಷ್ಟು ಶಿಘ್ರವಾಗಿ ಪಟ್ಟಣದಲ್ಲಿರುವ ಎಲ್ಲಾ ವಸತಿ ನಿಲಯಗಳ ಸಮಸ್ಯೆಗಳನ್ನ ಬಗೆಹರಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಘ್ರ ಹೋರಾಟ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ತಾಪಂ ಇಒ ಡಾ, ಡಿ ಮೋಹನ್, ಹಿಂದುಳಿದ ವರ್ಗದ ಇಲಾಖೆಯ ಅಧಿಖಾರಿ ಎಸ್ ವಿ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಖಾ ಕುಟ್ಟಿಯವರಿಗೆ ಮನವಿ ಸಲ್ಲಿಸಿದರು. ಎಸ್ಎಪ್ಐನ ಮುತ್ತು, ಲಕ್ಷ್ಮಣ್ಣ, ಹನುಮೇಶ, ಯಮನೂರಗೌಡ, ರವಿಕುಮಾರ, ರಾಜು, ಶರಣಬಸವ, ಮಂಜುನಾಥ, ಸಂತೋಷ ಸೇರಿದಂತೆ  ಶಾಲಾ ಕಾಲೇಜೀನ ಹಲವಾರು ವಿದ್ಯಾರ್ಥಿ /ನಿಯರು ಹಾಜರಿದ್ದರು.