ಎಸ್‌. ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಶಸ್ತಿ ವಿತರಣೆ

S. S.L.C. Farewell and prize distribution of students

 ಎಸ್‌. ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಶಸ್ತಿ ವಿತರಣೆ

ಗೋಕಾಕ 22  : ಸತತ ಪ್ರಯತ್ನವಿಲ್ಲದೆ ಸಾಧನೆ ಮಾಡಲಾಗದು. ವಿದ್ಯಾರ್ಥಿಗಳು ಪ್ರಯತ್ನಶೀಲರಾಗಿದ್ದುಕೊಂಡು ಸಾಧಿಸಬೇಕು.  ಚಿಂತನಶೀಲತೆ ಮತ್ತು ಕ್ರಿಯಾಶಿಲತೆಯಿಂದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬೆಳೆದ ಊರು, ಕಲಿತ ಶಾಲೆ, ಕಲಿಸಿದ ಗುರುಬಳಗಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಕವಿ ಶಿಕ್ಷಕ ಈಶ್ವರ ಮಮದಾಪೂರ ಹೇಳಿದರು. ಅವರು ತವಗದ  ಮಲ್ಲಮ್ಮದೇವಿ ತವಗಮಠ ಪ್ರೌಢಶಾಲೆಯ ವಾರ್ಷಿಕೋತ್ಸವ, ಎಸ್‌. ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದು  ಕೇವಲ ಅಂಕ ಗಳಿಸುವಿಕೆಯ ಒತ್ತಡದ ಭರಾಟೆಯಲ್ಲಿ ನೀತಿ ಮತ್ತು ಮೌಲ್ಯಗಳು ಕುಸಿದು ಹೋಗುವ ಅಪಾಯ ಕಾಣುತ್ತಿದ್ದು ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಜಾಗೃತೆ ವಹಿಸಬೇಕಿದೆ. ಅನಗತ್ಯ ಮೊಬೈಲ್ ಗಿಳಿನಿಂದ ಮಕ್ಕಳು ಹಾಳಾಗುವ ಅಪಾಯವಿದ್ದು ಉತ್ತಮ ನೀತಿಯುಕ್ತ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಶ್ರೀ ಆನಂದ ಮಹಾಸ್ವಾಮಿಗಳು ತವಗಮಠ ಇವರು ಮಾತನಾಡುತ್ತಾ -  ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯುವುದರ ಮೂಲಕ ಬಡ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ತಮ್ಮ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು ಮುಖ್ಯೋಪಾಧ್ಯಯರಾದ ಎ. ಜಿ. ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.  ಶ್ರೀ ಎಸ್‌. ಎಸ್‌. ದೊಡಮನಿ ವರದಿ ವಾಚನ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಾಲಾಶ್ರೀ ರಾ ಮರೆಪ್ಪಗೋಳ, ಉಪಾಧ್ಯಕ್ಷರಾದ ಬಾಳಪ್ಪ ಸ ಖನ್ನವನ ಪೂಜೇರಿ, ಪಿ. ಕೆ. ಪಿ. ಎಸ್‌. ಅಧ್ಯಕ್ಷರಾದ ಸಿದ್ಲಿಂಗಪ್ಪ ಬಡಕುರಿ, ಉಪಾಧ್ಯಕ್ಷರಾದ ದ್ಯಾಮಪ್ಪ ಮೇತ್ರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಯರಾದ  ಎಸ್‌. ಎಸ್‌. ಡಬ್ಬನವರ,  ಕೃಷ್ಣಮೂರ್ತಿ ಗಂಜಿ, ರಾಮನಗೌಡ ಪಾಟೀಲ್, ಭೀರ​‍್ಪ ಸಿ ಪೂಜೇರಿ, ಲಕ್ಷ್ಮಣ ಪ್ರಧಾನಿ, ಸತ್ತೆಪ್ಪ ಹರಿಜನ, ನಿಂಗಪ್ಪ ಟಗರಿ, ಕಲ್ಲಪ್ಪ ಹತ್ತರಕಿ, ಲಕ್ಕಪ್ಪ ಸುಲಧಾಳ, ಕೆಂಪಣ್ಣ ಚಿಕ್ಕಲದಿನ್ನಿ, ಸುಭಾಸ ಮಲಕನ್ನವರ, ರಾಜು ಗಸ್ತಿ, ಶ್ರೀಕಾಂತ ದೊ. ಸಿ. ದಂಡು, ಲಕ್ಷ್ಮಣ ನಾಯ್ಕ ವೇದಿಕೆಯ ಮೇಲೆ ಉಪಸ್ಥಿತರಿದ್ದರು.     ಬಹುಮಾನ ವಿತರಣೆಯನ್ನು ಪಿ ಬಿ ಭಜಂತ್ರಿ, ಶ್ರೀಮತಿ ಎಲ್ ಕೆ ಹುಣಶ್ಯಾಳ ನಡೆಸಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಎಂ ಎಂ ಮುಜಾವರ ಮಾಡಿದರು. ಎಸ್‌. ವಿ. ಮಗದುಮ್ ವಂದಿಸಿದರು.