'ಉತ್ಸವ'ದಲ್ಲಿ ಗ್ರಾಮೀಣ ಜೀವನ ದರ್ಶನ

ಲೋಕದರ್ಶನ ವರದಿ

ಶಿಗ್ಗಾವಿ31 : ಇಂದಿನ ಮಕ್ಕಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಸಬೇಕಾದರೆ ಒಮ್ಮೆ 'ಉತ್ಸವ ರಾಕ್ ಗಾರ್ಡನ್ಗೆ ಭೇಟಿ ನೀಡಬೇಕು ಎಂದು ಹಾವೇರಿಯ ಎಂ.ವಿ.ವಿಶ್ವೇಶರಯ್ಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಜರತ ಅಲಿ ಹೇಳಿದರು.

ಶೈಕ್ಷಣಿಕ ಪ್ರವಾಸದನ್ವಯ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್ಗೆ ಶನಿವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದರು.

   ಇಲ್ಲಿನ ಸಹಸ್ರಾರು ಶಿಲ್ಪಗಳು ವಿದ್ಯಾಥರ್ಿಗಳನ್ನು ರೋಮಾಂಚನಗೊಳಿಸಿದವು. ಅಲ್ಲದೇ ಗ್ರಾಮೀಣ ಸಾಮ್ರಾಜ್ಯದ ನೈಜ ದೃಶ್ಯಗಳ ಬಗ್ಗೆ ತಮ್ಮೊಂದಿಗಿದ್ದ ಶಿಕ್ಷಕರಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ಮಾಡಿದವು. ಇದು ಅಕ್ಷರಶ: ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ಕೇಂದ್ರ ಎಂದು ಹೇಳಿದರು.

  ರಾಕ್ ಗಾರ್ಡನ್ನ ಅನುಭವ ಸ್ಮರಣೀಯವಾದುದು ಎಂದ ಹಜರತ್ ಅಲಿ, ಇಂಡಿಯನ್ ಗಾರ್ಡನ್ನ ಸಾಹಸಮಯ ಆಟಗಳು, ಮಳೆ ಸ್ನಾನ, ಎತ್ತಿನ ಗಾಡಿ-ಟಾಂಗಾ ಸವಾರಿ,ದೋಣಿ ವಿಹಾರ ಹಾಗೂ ನೀರಿನ ಆಟಗಳು ಮಕ್ಕಳನ್ನು ಭರಪುರ ರಂಜಿಸಿದವು ಎಂದು ವಿವರಿಸಿದರು. ಶಿಲ್ಪಗಳ ರೂಪದಲ್ಲಿರುವ ಗ್ಯಾಲರಿಗಳನ್ನು ನೋಡಿದ ವಿದ್ಯಾಥರ್ಿಗಳು, ಒಂದು ಕ್ಷಣ ಹೌಹಾರಿದರಲ್ಲದೆ, ಅವುಗಳನ್ನು ಮುಟ್ಟಿ ನೋಡುವ ಇಂಗಿತ ವ್ಯಕ್ತಪಡಿಸಿದರು ಎಂದು ಸಹ ಶಿಕ್ಷಕ ಗುರುರಾಜ ಶಿಗ್ಗಾಂವ ಅಭಿಪ್ರಾಯಪಟ್ಟರು. ಇಲ್ಲಿ ಗಾಂಧೀಜಿಯವರ ಸುಭೀಕ್ಷ ಗ್ರಾಮೀಣ ಸಾಮ್ರಾಜ್ಯದ ಕನಸು ನನಸಾಗಿದೆ ಎನ್ನುವಷ್ಟರ ಮಟ್ಟಿಗೆ ಶಿಲ್ಪಗಳು ನೈಜತೆ ಹೊಂದಿವೆ ಎಂದು ಸಹ ಶಿಕ್ಷಕಿ ಜ್ಯೋತಿ ಕೆ. ಹೇಳಿದರು.