ಯಲಗೋಡ ಗ್ರಾ.ಪಂ ಅಧ್ಯಕ್ಷೆಯಾಗಿ ರೂಪಾ ಆಸ್ಕಿ ಅವಿರೋಧ ಆಯ್ಕೆ

Rupa Aski was elected unopposed as the President of Yelagoda Gram.Pm

ಯಲಗೋಡ ಗ್ರಾ.ಪಂ ಅಧ್ಯಕ್ಷೆಯಾಗಿ ರೂಪಾ ಆಸ್ಕಿ ಅವಿರೋಧ ಆಯ್ಕೆ

ದೇವರಹಿಪ್ಪರಗಿ: ತಾಲೂಕಿನ ಯಲಗೋಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ರೂಪಾ ಚಂದ್ರಶೇಖರ ಆಸ್ಕಿ ಅವಿರೋಧ ಆಯ್ಕೆಯಾದರು ಎಂದು ತಾ.ಪಂ ಇಒ, ಚುನಾವಣಾ ಅಧಿಕಾರಿಗಳಾದ ಭಾರತಿ ಚೆಲುವಯ್ಯ ಹೇಳಿದರು.  

ಅಧ್ಯಕ್ಷ ಸ್ಥಾನಕ್ಕೆ ಮಹಮ್ಮದ ರಫೀಕ್ ಕಣ್ಣಮೇಶ್ವರ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 14 ಜನ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಬೆಂಬಲಿತ ರೂಪಾ ಚಂದ್ರಶೇಖರ ಆಸ್ಕಿ ಆಯ್ಕೆ ಎಂದು ಘೋಷಿಸಲಾಯಿತು.   

ನೂತನ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಿಹಿ ಹಂಚಿ ಸಂಭ್ರಮಿಸಿ ಸುದ್ದಿಗಾರರ ಜೊತೆ ಮಾತನಾಡಿದ ರೂಪಾ ಆಸ್ಕಿ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಹಾಗೂ ನನ್ನ ಆಯ್ಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.   

ಮುಖಂಡರುಗಳಾದ ಸಾಹೇಬಗೌಡ ಪಾಟೀಲ ಸಾಸನೂರ, ಪ್ರಭುಗೌಡ ಪಾಟೀಲ ಡಂಬಳ, ಸಂಗನಗೌಡ ಪಾಟೀಲ, ಗೊಲ್ಲಾಳಪ್ಪಗೌಡ ಪಾಟೀಲ, ಶಾಂತಗೌಡ ಚೌದರಿ, ಗುರುನಾಥರೆಡ್ಡಿ ಪಾಟೀಲ, ರಾಜುಗೌಡ ಪಾಟೀಲ, ಸಿದ್ದು ಬುಳ್ಳಾ, ಬಸವರಾಜ ಅಸ್ಕಿ, ಎನ್‌. ಎಸ್‌. ದೇಸಾಯಿ, ಮಶಾಕಸಾಬ ಚೌದರಿ, ಬಾಬು ಖ್ಯಾತನಾಳ, ಹುಯೋಗಿ ತಳ್ಳೊಳ್ಳಿ, ಸಾಯಿಬಣ್ಣ ಬಾಗೇವಾಡಿ, ವಿಷ್ಣು ರಾಠೋಡ, ಗುರುನಾಥ ರಾಠೋಡ, ಶಿವಣ್ಣ ಮಾರಲಬಾಯಿ, ಶಿವಶಂಕರ ಬೂದಿಹಾಳ, ಶ್ರೀಶೈಲ್ ಜಾಲವಾದಿ, ಶಿವು ಪುರದಾಳ, ರಾಜುಗೌಡ ಹೊಸಗೌಡರ, ಯಂಕನಗೌಡ ಪಾಟೀಲ, ಗ್ರಾ.ಪಂ ಸರ್ವ ಸದಸ್ಯರು, ಪಿಡಿಒ ಎಸ್‌.ಕೆ. ಹಡಪದ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.