ಶಾಸಕ ಕುಮಠಳ್ಳಿಯವರಿಂದ 17 ಲಕ್ಷ ರೂ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಅಥಣಿ17:  ಸ್ಥಳಿಯ ಪುರಸಭೆಯ ವಾರ್ಡ ನಂ 4 ರ ಗವಿಸಿದ್ದಮಡ್ಡಿಯಲಿ,್ಲ ಶಾಸಕ ಮಹೇಶ ಕುಮಠಳ್ಳಿಯವರ ಹಸ್ತದಿಂದ  17 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಅಭಿವೃದ್ಧಿಗಾಗಿ ಸತತ ಪ್ರಯತ್ನ ನಡೆಯುದೆಂದರು.  

      ಈ ವಾಡರ್ಿನ  ಗವಿಸಿದ್ದ ದೇವಸ್ಥಾನದ ಆವರಣದ ಸುತ್ತ ಗೋಡೆ ನಿಮರ್ಾಣ ಮತ್ತು ನೆಲಹಾಸು ಅಳವಡಿಕೆ ಕಾಮಗಾರಿ ಮತ್ತು ಎಪಿಎಂಪಿಸಿ ಗೇಟ್ ವರೆಗೆ ಸಿಸಿ ರಸ್ತೆ ನಿಮರ್ಾಣ ಕಾಮಗಾರಿಗಳನ್ನು ಪುರಸಭೆ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.ವಾರ್ಡನ ಸಮಗ್ರ ಅಭಿವೃದ್ಧಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ ಸೌಲಭ್ಯ ಒದಗಿಸಲಾಗುತ್ತದೆ.

      ಈ ಸಮಯದಲ್ಲಿ  ಪುರಸಭೆ ಅಧ್ಯಕ್ಷ ರಾವಸಾಬ ಐಹೋಳೆ ಮಾತನಾಡಿ, ವಾರ್ಡ ಪ್ರತಿನಿಧಿಯಾದ ತಮಗೆ ಅಭಿವೃದ್ಧಿಗೆ ಅನುದಾನ ಕೊರೆತೆ ಇತ್ತು. ಹೆಚ್ಚಿನ ಅಭಿವೃದ್ಧಿಗಾಗಿ ಸದ್ಯ ಶಾಸಕರ ಮಾರ್ಗದರ್ಶನದಲ್ಲಿ ಸುಮಾರು 50 ಲಕ್ಷ ರೂ ಅನುದಾನ ಬಳಕೆ ಮಾಡಿ ಹೆಚ್ಚಿನ ಅಭಿವೃದ್ಧಿಕೈಗೊಳ್ಳಲಾಗುವದು ಎಂದು ಹೇಳಿದರು.

   ಪುರಸಭೆಯ ಹದ್ದಿಯಲ್ಲಿಯ ಈ   ವಾರ್ಡ ನಾಲ್ಕರಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವುದರಿಂದ ಪಡಿತರ ಅಂಗಡಿ ವ್ಯವಸ್ಥೆ ಕಲ್ಪಸಬೇಕು. ಅಕ್ರಮ ಸಕ್ರಮದಲ್ಲಿ ಮನೆಗಳ ಹಕ್ಕುಪತ್ರ, ಮೂಲ ಸೌಲಭ್ಯ ಒದಗಿಸಬೇಕು ಎಂದು ವಾರ್ಡ ನಿವಾಸಿಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಶಾಸಕರು, ಅಧಿಕಾಗಳೊಂದಿಗೆ ಚಚರ್ಿಸಿ ಸಮಸ್ಯೆ ಪರಿಸಹರಿ ಸಲಾಗುದು ಆಶ್ವಾಸನೆ ನೀಡಿದರು. 

       ಪುರಸಭೆ ಉಪಾಧ್ಯಕ್ಷೆ ಶೈಲಾ ಹಳ್ಳದಮಳ, ಮುಖಂಡರಾದ ಬಸವರಾಜ ಬುಟಾಳೆ, ಅನಿಲ ಸುಣಧೋಳಿ, ಸಂಗಪ್ಪ ಅಲಿಬಾದಿ, ರಾಜು ಹಳ್ಳದಮಳ, ಅಭಿಯಂತ ವರ್ಧಮಾನ ಹುದ್ದಾರ ಹಾಗು ಪುರಸಭೆ ಸದಸ್ಯರು ನಾಗರಿಕರು ಉಪಸ್ಥಿತರಿದ್ದರು.