ಲೋಕದರ್ಶನ ವರದಿ
ಬ್ಯಾಡಗಿ01: ನೂತನ ಶಾಲಾ ಕಟ್ಟಡಗಳಿಗಾಗಿ ನಮ್ಮ ಕ್ಷೇತ್ರಕ್ಕೆ 13 ಕೋಟಿ ರೂ.ಗಳು ಮಂಜೂರಿಯಾಗಿದ್ದು, ಉತ್ತಮ ಗುಣಮಟ್ಟದಲ್ಲಿ ಶಾಲಾ ಕಟ್ಟಡಗಳನ್ನು ನಿಮರ್ಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ 21 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ 63 ಕ್ಕೂ ಹೆಚ್ಚಿನ ಶಾಲಾ ಕಟ್ಟಡಗಳಿಗೆ ಅನುದಾನ ತರಲಾಗಿದ್ದು, ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತ ಶಾಲಾ ಕಟ್ಟಡಗಳ ನಿಮರ್ಾಣಕ್ಕೆ ಕ್ರಮ ಕೈಕೊಂಡಿದೆ.
ಅಲ್ಲದೇ ಶಾಲೆಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳಿಗೂ ಹೆಚ್ಚಿನ ಆಧ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ಅನುದಾನ ಒದಗಿಸುವ ಮೂಲಕ ಶಾಲಾ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿದರು.
ಬಿಜೆಪಿ ಧುರೀಣ ಶಿವಬಸಪ್ಪ ಕುಳೇನೂರ ಮಾತನಾಡಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುತ್ತಲಿದ್ದಾರೆ.
ಸತತ ಪ್ರಯತ್ನದಿಂದ ಕ್ಷೇತ್ರಕ್ಕೆ ಹೆಚ್ಚು ಅನುದಾನ ಲಭ್ಯವಾಗಿದ್ದು, ಕೇಂದ್ರ ಸರಕಾರದಿಂದಲೂ ಸಹ ನೂರಾರು ಕೋಟಿ ಅನುದಾನ ದೊರೆಯುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಅನುಸೂಯಾ ಕುಳೇನೂರ, ಗ್ರಾ.ಪಂ.ಉಪಾಧ್ಯಕ್ಷ ರವಿ ಹೊಸಮನಿ, ಸುರೇಶ ಯತ್ನಳ್ಳಿ, ಯಲ್ಲನಗೌಡ ಪಾಟೀಲ, ರಾಜು ಪಾಟೀಲ, ಹರಿಶ್ಚಂದ್ರ ಲಮಾಣಿ, ನಾಗರಾಜ ಹಾವನೂರ, ಕುಮಾರ ವರೂರ, ಮಲ್ಲಿಕಾಜರ್ುನ ವೀರಾಪುರ, ಚೌಡಪ್ಪ ಹರಮಗಟ್ಟಿ, ವಿಜಯಭರತ ಬಳ್ಳಾರಿ, ಎಎಇ ಪಿ.ಎಂ.ಶೆಟ್ಟಿಕೇರಿ, ಸಹಾಯಕ ಅಭಿಯಂತರರಾದ ರಾಜಶೇಖರ ಹರಮಗಟ್ಟಿ, ಕೆ. ರಾಜಪ್ಪ, ಪಿಡಿಓ ರಹಮತ್ಬಿ ಕಾರ್ಯದಶರ್ಿ ಫಕ್ಕೀರಪ್ಪ ಯತ್ನಳ್ಳಿ ಗುತ್ತಿಗೆದಾರ ಹನುಮಂತಪ್ಪ ಹಾದಿಮನಿ ಹಾಗೂ ಇತರರಿದ್ದರು.