ಲೋಕದರ್ಶನ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ರಾಜ್ಯ ಸರಕಾರದ ಮತ್ಸ್ಯ ಮಹಿಳಾ ಸ್ವಾವಲಂಬಿ ಯೋಜನೆಯಡಿ ಕುಮಟಾ ತಾಲೂಕಿನ ಮೀನುಗಾರ ಮಹಿಳೆಯರ ಒಟ್ಟೂ 10 ಸಂಘಗಳಿಗೆ 10 ಲಕ್ಷ ರೂ ಗಳ ಬಡ್ಡಿ ರಹಿತ ಸಾಲದ ಚೆಕ್ಗಳನ್ನು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ವಿತರಿಸಿದರು.
ಅವರು ಬುಧವಾರ ಪಟ್ಟಣದ ಚಿತ್ತರಂಜನ ಚಿತ್ರಮಂದಿರ ಸಮೀಪದಲ್ಲಿರುವ ಮೀನುಗಾರರ ಸಹಕಾರಿ ಸಂಘದ ಆವರಣದಲ್ಲಿ ಮೀನುಗಾರ ಮಹಿಳೆಯರ ಸಂಘಗಳಿಗೆ ಚೆಕ್ಗಳನ್ನು ವಿತರಿಸಿ ಮಾತನಾಡಿ, ಮತ್ಸ್ಯ ಮಹಿಳಾ ಸ್ವಾವಲಂಬಿ ಯೋಜನೆಯಿಂದ ಮೀನುಗಾರ ಮಹಿಳೆಯರಿಗೆ ಉತ್ತಮ ಸೌಕರ್ಯ ಸಿಗುತ್ತಿದೆ. 1 ಸಂಘದಲ್ಲಿ 10 ಸದಸ್ಯರನ್ನು ಒಳಗೊಂಡಿದ್ದು, ಒಟ್ಟೂ 10 ಸಂಘದ 100 ಸದಸ್ಯರ ಅನುಕೂಲಕ್ಕಾಗಿ 10 ಲಕ್ಷ ರೂ ಈಗಾಗಲೇ ನೀಡಲಾಗಿದೆ. ಮೀನುಗಾರ ಮಹಿಳೆಯರು ಈ ಹಣದಲ್ಲಿ ಮೀನು ವ್ಯಾಪಾರ ನಡೆಸಿ, ತಮ್ಮ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು.
ಮೀನುಗಾರ ಮಹಿಳೆಯರಿಗೆ ಇನ್ನೂ ಹೆಚ್ಚಿನ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಮತ್ಸ್ಯ ಮಹಿಳಾ ಸ್ವಾವಲಂಬಿ ಯೋಜನೆಯಡಿಯಲ್ಲಿ ಸಾಲದ ಪ್ರಮಾಣ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಸದಸ್ಯರಾದ ಉಮೇಶ ಮೇಸ್ತಾ, ರಾಘವೇಂದ್ರ ಜಾದವ್, ಉಮೇಶ ಖಾವರ್ಿ, ಪರಮೇಶ್ವರ ಹರಿಕಂತ್ರ, ಕುಮಟಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ತಾಂಡೆಲ್, ಕಾರ್ಯದಶರ್ಿ ಚಂದ್ರಶೇಖರ್ ಗಾವಡಿ ಹಾಗೂ ಕುಮಟಾದ ಶಶಿಹಿತ್ತಲ್, ಅಳ್ವೇದಂಡೆ, ಹಳಕಾರ, ಶಿರಗುಂಜಿ, ಉಪ್ಪಿನಪಟ್ಟಣದ ಮೀನುಗಾರ ಮಹಿಳೆಯರ ಸಂಘದ ಸದಸ್ಯರು ಉಪಸ್ಥಿತರಿದ್ದರು.