ಸರಕಾರದಿಂದ 1 ರೂ. ಅನುದಾನ ಬಿಡುಗಡೆಯಿಲ್ಲ: ಮಾಮನಿ


 ಮುನವಳ್ಳಿ 23: ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಗತಿಸಿದರೂ ಅಭಿವೃದ್ಧಿಗೆ ಸರಕಾರದಿಂದ 1 ರೂ. ಅನುದಾನ ಬಿಡುಗಡೆಗೊಂಡಿಲ್ಲದೆ ಅಭಿವೃದ್ಧಿ ಯೋಜನೆಗಳೂ ಕುಂಠಿತಗೊಂಡಿವೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ದೊರಕಿಸಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ಅದನ್ನು ಸರಿಯಾಗಿ ನಿರ್ವಹಿಸಿಲ್ಲ. ಕಬ್ಬಿಗೆ ಯೋಗ್ಯ ಬೆಲೆ ದೊರಕಿಸಲು ಈಗಿನ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಶಾಸಕ ಆನಂದ ಮಾಮನಿ ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಅನುದಾನ ಹರಿದು ಬಂದಿತ್ತು. ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು ಎಂದು ಸ್ಮರಿಸಿದರು.

    ಅವರು ಸಮೀಪದ ಜಕಬಾಳ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. 

    ಗ್ರಾಮದ ದ್ಯಾಮಣ್ಣ ಹಟ್ಟಿ, ಶೆಟ್ಟೆಪ್ಪ ಹಾಡಕಾರ, ಅಪ್ಪಣ್ಣ ಮೇಟಿ, ಬಸವರಾಜ ಪೂಜೇರ, ಶಕ್ತಿಪ್ರಸಾದ ಕಾತ್ರಾಳ, ಪುಂಡಲೀಕ ಪಾಟೀಲ, ಸುರೇಶ ಬೆನಕಟ್ಟಿ, ವಿಠ್ಠಲ ಜಡಗಣ್ಣವರ, ಲಕ್ಷ್ಮಣ ನಾಯ್ಕರ, ಮಹಾದೇವ ಹಾಡಕಾರ, ಯಲ್ಲನಾಯ್ಕ ಪಾಟೀಲ, ಮಲ್ಲಪ್ಪ ಬೆನಕಟ್ಟಿ, ಮಾರುತಿ ಬಸಲಿಗುಂದಿ, ರಮೇಶ ಗೋಮಾಡಿ, ರಾಜಶೇಖರ ಶೀಲವಂತ. ಅಶೋಕ ಗೋಮಾಡಿ, ಶಿವಪ್ಪ ಬಂಡ್ರೋಳ್ಳಿ, ಇತರರು ಇದ್ದರು.