ರಾಜಾಪೂರ ಬಸ್ ವ್ಯವಸ್ಥೆಗೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ

ಘಟಪ್ರಭಾ 01: ರಾಜಾಪೂರ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ಸಿನ ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ ಘಟಪ್ರಭಾದ ಮೃತ್ಯುಂಜಯ ಸರ್ಕಲ್ ರಾಜಾಪೂರ ಗ್ರಾಮದ ನೂರಾರು ವಿದ್ಯಾಥರ್ಿಗಳು ನಾಗರಿಕರು ಸೇರಿ ರಸ್ತೆತಡೆದು ಪ್ರತಿಭಟನೆ ನಡೆಸಿದ್ದರಿಂದ 2 ಗಂಟೆಗಳ ಸಮಯ ಸಾರ್ವಜನಿಕರು ಪರದಾಟ ಮಾಡಬೇಕಾಯಿತು.

ರಾಜಾಪೂರ ಗ್ರಾಮದಲ್ಲಿ 12 ಸಾವಿರ ಜನಸಂಖ್ಯೆ ಇದ್ದು ಪ್ರತಿನಿತ್ಯ 500ಕ್ಕೂ ಹೆಚ್ಚು ವಿದ್ಯಾಥರ್ಿಗಳು ಶಾಲಾ ಕಾಲೇಜಿಗಾಗಿ ಗೋಕಾಕ ಘಟಪ್ರಭಾಕ್ಕೆ ಹೋಗಬೇಕು. ಅಷ್ಟು ಜನಸಂಖ್ಯೆ ಇದ್ದರೂ ಜನ ಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿಲ್ಲ. ಅಲ್ಲದೆ ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ವಿದ್ಯಾಥರ್ಿಗಳು ಹಲವಾರು ಬಾರಿ ಮನವಿ ಮಾಡಿದರೂ ಅದಕ್ಕೆ ಅವರು ಕ್ಯಾರೆ ಏನ್ನದೆ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆಂದು ಆರೋಪಿಸಿದ ಪ್ರತಿಭಟನಾ ನಿರತ ವಿದ್ಯಾಥರ್ಿಗಳ ಆರೋಪವಾಗಿತ್ತು. 

ನೂರಾರು ವಿದ್ಯಾಥರ್ಿ/ವಿದ್ಯಾಥರ್ಿನಿಯರು ಹಾಗೂ ಗ್ರಾಮದ ನಾಗರಿಕರು ಘಟಪ್ರಭಾಕ್ಕೆ ಆಗಮಿಸಿ ರಸ್ತೆತಡೆ ಮಾಡಿದ್ದರಿಂದ ಘಟಪ್ರಭಾದಲ್ಲಿ ಎರಡು ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡಬೇಕಾಯಿತು. 

ಗೋಕಾಕ ವಲಯದ ಸಾರಿಗೆ ಇಲಾಖೆ ಅಧಿಕಾರಿ, ಘಟಪ್ರಭಾ ಪಿಎಸ್ಐ ಜನವರಿ 2ರಿಂದ ರಾಜಾಪೂರಕ್ಕೆ ಪ್ರತಿನಿತ್ಯ ಬೆಳಿಗ್ಗೆಯಿಂದ  7 ಬಾರಿ ಗೋಕಾಕ- ರಾಜಾಪೂರ ಬಸ್ಸಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ವಿದ್ಯಾಥರ್ಿಗಳು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ರಾಜಾಪೂರ ಗ್ರಾಮದ ಹಿರಿಯರು ಹಾಗೂ ಮೂಡಲಗಿ ಸಿಪಿಐ  ವಿದ್ಯಾಥರ್ಿಗಳ ಮನವಲಿಸಿ ಪ್ರತಿಭಟನೆಯನ್ನು ತೆರವುಗೊಳಿಸಿದರು.

ರಾಜಾಪೂರ ಗ್ರಾಮದ ಹಿರಿಯರಾದ ವಿಠಲ ಪಾಟೀಲ, ರಾಜು ಬೈರುಗೋಳ, ಬೈರಪ್ಪಯಕ್ಕುಂಡಿ, ರಾಮಚಂದ್ರ ಪಾಟೀಲ, ಸಂಗಯ್ಯ ಹೂನೂರ, ಪರಸಪ್ಪ ವಗ್ಗ, ಗೋಪಾಲ ಕೆಂಪವ್ವಗೋಳ, ಸಿದ್ದು ಯಕ್ಕುಂಡಿ ಸೇರಿ ಗ್ರಾಮದ ಹಲವಾರು ಹಿರಿಯರು, ವಿದ್ಯಾಥರ್ಿ ವಿದ್ಯಾಥರ್ಿನಿಯರು ಇದ್ದರು.