ಸಮರ್ಪಕ ಬಸ್ ವ್ಯವಸ್ಥೆಗೆ ಒತ್ತಾಯಿಸಿ ರಸ್ತೆ ತಡೆ ಪ್ರತಿಭಟನೆ

ರಾಯಬಾಗ 06: ತಾಲೂಕಿನ ಸುಟ್ಟಟ್ಟಿ ಗ್ರಾಮದ ವಿದ್ಯಾಥರ್ಿಗಳು ತಮಗೆ ಕಾಲೇಜಿಗೆ ತೆರಳಲು ಖೆಮಲಾಪೂರ-ಸುಟ್ಟಟ್ಟಿ-ರಾಯಬಾಗ ಮಾರ್ಗದಲ್ಲಿ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಶನಿವಾರಂದು ಬೆಳಿಗ್ಗೆ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಸುಟ್ಟಟ್ಟಿ ಗ್ರಾಮದಿಂದ ರಾಯಬಾಗ ಪಟ್ಟಣಕ್ಕೆ ವಿದ್ಯಾಭ್ಯಾಸ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ತೆರಳುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಈ ಮಾರ್ಗದಲ್ಲಿ ಹೆಚ್ಚಿನ ಬಸ್ಗಳು ಇರುವುದಿಲ್ಲ. ಇದರಿಂದ ಉನ್ನತವ್ಯಾಸಂಗ ಮಾಡಲು ವಿದ್ಯಾಥರ್ಿಗಳಿಗೆ ತೊಂದರೆ ಆಗುತ್ತಿದೆ. ಸುಟ್ಟಟ್ಟಿ ಗ್ರಾಮದಿಂದ ಸುಮಾರು 100 ಕ್ಕೂ ಹೆಚ್ಚು ವಿದ್ಯಾಥರ್ಿಗಳು ತೆರಳುತ್ತಾರೆ. ಬಸ್ನ ಸೌಲಭ್ಯ ಇಲ್ಲದ ಕಾರಣ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದು ವಿದ್ಯಾಥರ್ಿಗಳು ತಮ್ಮ ತೊಂದರೆಯನ್ನು ತೊಡಿಕೊಂಡರು. 

ಬಸ್ ಬಿಡುವಂತೆ ಸಾಕಷ್ಟು ಸಲ ರಾಯಬಾಗ ಸಾರಿಗೆ ಘಟಕಕ್ಕೆ ತೆರಳಿ ಮನವಿ ಮಾಡಿಕೊಂಡರು ಸಾರಿಗೆ ಅಧಿಕಾರಿಗಳು ತಮ್ಮ ಮನವಿಗೆ ಸರಿಯಾಗಿ ಸ್ಪಂದಿಸದೇ ಹಾರಿಕೆ ಉತ್ತರ ನೀಡುತ್ತಾರೆಂದು ವಿದ್ಯಾಥರ್ಿಗಳು ಆಕ್ರೋಶವ್ಯಕ್ತಪಡಿಸಿದರು.

ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಅಧಿಕಾರಿ ವಿದ್ಯಾಥರ್ಿಗಳಿಗೆ ಬಸ್ ಬಿಡುವ ಭರವಸೆ ನೀಡಿದ ಬಳಿಕ ವಿದ್ಯಾಥರ್ಿಗಳು ಪ್ರತಿಭಟನೆ ಹಿಂಪಡೆದರು. ಬೆಳಿಗ್ಗೆಯಿಂದ ಸುಮಾರು 3-4 ಗಂಟೆಗಳ ಕಾಲ ರಸ್ತೆ ಬಂದ, ಬಸ್ಗಳನ್ನು ತಡೆದು ಮಾಡಿ ಪ್ರತಿಭಟನೆ ನಡೆಸಿದರು.  

ಪ್ರತಿಭಟನೆಯಲ್ಲಿ ಸಿದ್ದು ಒಡೆಯರ, ಗಣೇಶ ಪಾಟೋಳೆ, ಪ್ರಜ್ವಲ ಕೋಳೆಕರ, ಕೋಮಲ ಪಾಟೀಲ, ಮಹಾನಂದ ಹಳಿಂಗಳಿ ಸೇರಿದಂತೆ ಅನೇಕ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.