ಲೋಕದರ್ಶನ ವರದಿ
ಮುಧೋಳ 05: ಕನರ್ಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟೆ ಬಳಗ) ಹಮ್ಮಿಕೊಂಡಿದ್ದ "ವಿಜಯಪುರ ಕನ್ನಡ ಉತ್ಸವ" ಕಾರ್ಯಕ್ರಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಅವಳಿ ಜಿಲ್ಲೆಗಳಲ್ಲಿಯ ವಿಶೇಷ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅದರಲ್ಲಿಯೂ ವಿಶೇಷವಾಗಿ ಭಾರತೀಯ ಸೇನೆಪಡೆಯ ನಿವೃತ ಸೇನಾಧಿಕಾರಿಗಳಾದ ಮೇಜರ್ ಅಪ್ಪಸಾಹೇಬ ಎಸ್ ನಿಂಬಾಳ್ಕರ,ಶೇಷಪ್ಪ ದುಂ. ಪೋತ ರಡ್ಡಿ ಹಾಗೂ ಶಂಕರ ಬಾಡಗಿಯವರನ್ನು 'ವೀರ ಯೋಧ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕನರ್ಾಟಕ ರಕ್ಷಣಾ ವೇದಿಕೆಯ ಉತ್ತರ ಕನರ್ಾಟಕದ ಅಧ್ಯಕ್ಷರಾದ ಡಾ|| ಶರಣು ಗುದ್ದುಗೆಯವರು ಮುಖ್ಯ ಅತಿಥಿಯಾಗಿ,ಸಾನಿಧ್ಯ ವಹಿಸಿದ್ದ ಶ್ರೀಗಳು ಹಾಗೂ ಮುಧೋಳ ವಸಾಪ ತಾಲೂಕಾ ಘಟಕದ ಅಧ್ಯಕ್ಷ ಸಿದ್ದಣ್ಣ ಬಾಡಗಿ ಸೇರಿದಂತೆ ಅನೇಕ ಗಣ್ಯರು ಮತ್ತು ಕನರ್ಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದರು.