ಮಹಿಳೆಯನ್ನು ಗೌರವಿಸಿ ಸಮಾನತೆಯಿಂದ ಕಾಣಿ: ಕಾದ್ರೋಳಿ
ಚಿಕ್ಕೋಡಿ 09: ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶ ಮತ್ತು ಸಮಾನ ಗೌರವ ದೊರೆತರೆ ದೇಶ ಸಮೃದ್ಧಿ ನಾಡಾಗುತ್ತದೆ ಹಾಗೂ ದೇಶದ ಆರ್ಥಿಕ ಪ್ರಗತಿಯ ಸಾಧನೆಗಾಗಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತೊಡಿಗಿಸಿಕೊಂಡಿದ್ದಾಳೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್ ಕಾದ್ರೋಳಿ ಹೇಳಿದರು.
ತಾಲೂಕ ಪಂಚಾಯತ ಸಭಾಂಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಪರಿಶ್ರಮ, ತ್ಯಾಗ ಸಹನೆೆ ಗುರುತಿಸುವುದರ ಜೊತೆ ಮಹಿಳೆಯನ್ನು ಗೌರವಿಸಿ ಸಮಾನತೆಯಿಂದ ಕಾಣಬೇಕು. ಇಂದಿನ ತಾಯಂದಿರು ಮನೆಯ ಮಂತ್ರಾಲಯಂದು ತಿಳಿದು ಮನೆ ಜವಾಬ್ದಾರಿ ವಹಿಸಿಕೊಂಡು ಹೋಗಬೇಕು ಎಂದರು.
ಪಂ.ರಾ ಸಹಾಯಕ ನಿರ್ದೇಶಕರಾದ ಎಸ್ ಎಸ್ ಮಠದ ಮಾತನಾಡಿ ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ಮನೆಯ ಬೆಳಗುವ ದೀಪ. ನಾಲ್ಕು ಗೋಡೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಕೈಯಾಡಿಸದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ನಿಂತಿದ್ದಾಳೆ. ತನ್ನದೇ ಛಾಪು ಮೂಡಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಭೀತು ಪಡಿಸಿದ್ದಾಳೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸುವ ಮತ್ತು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ವನ್ನು ಆಚರಿಸಲಾಗುತ್ತದೆ ಎಂದರು.
ನರೇಗಾ ಯೋಜನೆ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ ಮಾತನಾಡಿ ದುಡಿಯುವ ಕೈಗಳಿಗೆ ಕೆಲಸ ನೀಡುವುದು ಮಹಾತ್ಮ ಗಾಂಧಿ ನರೇಗಾ ಯೋಜನೆ ಮಾತ್ರ ಇಂದು ಎಷ್ಟೋ ಕುಟುಂಬಗಳು ಈ ಯೋಜನೆ ಮೇಲೆ ಅವಲಂಬಿತವಾಗಿವೆ ನಮ್ಮ ಚಿಕ್ಕೋಡಿ ತಾಲೂಕಿನಲ್ಲಿ ನರೇಗಾ ಯೋಜನೆ ಮಹಿಳೆಯರು ಹೆಚ್ಚಾಗಿ ಭಾಗವಹಿಸಬೇಕು ಎಂದರು.
ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸುಭಲಕ್ಷ್ಮೀ ದಾಬೂಳೆ, ನರೇಗಾ ಯೋಜನೆಯ ಐಇಸಿ ಸಂಯೋಜಕರು ರಂಜೀತ ಕಾರ್ಣಿಕ ಎಮ್.ಐ.ಎಸ್ ಸಂಯೋಜಕರು ಚೇತನ್ ಶಿರಹಟ್ಟಿ, ಆಡಳಿತ ಸಹಾಯಕರು,ಅಕ್ಷಯ ಠಕ್ಕಪ್ಪಗೊಳ ಮುಂತಾದವರು ಇದ್ದರು.