ಲೋಕದರ್ಶನ ವರದಿ
ಕೊಪ್ಪಳ 20: ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಹಳ ಹಿಂದಿನಿಂದಲೂ ವಿದ್ಯಾಥರ್ಿಗಳಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ಗಳನ್ನು ನೀಡುತ್ತಾ ಬಂದಿರುತ್ತದೆ. ಕಳೆದ ವರ್ಷ 2017-18 ನೇ ಸಾಲಿನಲ್ಲಿ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥರ್ಿಗಳಿಗೆ ಮಾತ್ರ ಉಚಿತ ಬಸ್ಪಾಸ್ಗಳನ್ನು ವಿತರಿಸುವ ಯೋಜನೆಯನ್ನು ಸಕರ್ಾರ ಅನುಷ್ಠಾನಗೊಳಿಸಿದ್ದರಿಂದ, ಇತರೆ ವರ್ಗದ ವಿದ್ಯಾಥರ್ಿಗಳಿಂದಲೂ ಉಚಿತ ಬಸ್ಪಾಸ್ ವಿತರಣೆಗೆ ಬೇಡಿಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿ ಸಕರ್ಾರದ ಆದೇಶದಂತೆ ಎಲ್ಲಾ ವರ್ಗದ ವಿದ್ಯಾಥರ್ಿಗಳಿಗೆ ಉಚಿತ ಬಸ್ಪಾಸ್ ನೀಡಬೇಕೆಂದು ಕಳೆದ ಸಕರ್ಾರದ ಅವಧಿಯಲ್ಲಿ ಸದನದಲ್ಲಿ ಅನುಮೋದನೆಗೊಂಡಿರುತ್ತದೆ. ಹಲವು ವರ್ಷಗಳಿಂದ ವಿದ್ಯಾಥರ್ಿಗಳು ತಮ್ಮ ಶೈಕ್ಷಣಿಕ ವಿಚಾರವಾಗಿ ಹೋರಾಟಗಳನ್ನು ನಡೆಸುತ್ತಿದ್ದು, ಅದರಲ್ಲಿ ಉಚಿತ ಬಸ್ಪಾಸ್ ಕೂಡಾ ಒಂದಾಗಿರುತ್ತದೆ.
ಕಳೆದ ಸಿದ್ದರಾಮಯ್ಯ ಸಕರ್ಾರ ಬಜೆಟ್ನಲ್ಲಿ ಘೋಷಿಸಿದ್ದ ಉಚಿತ ಬಸ್ ಪಾಸ್ 2018-19ರ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ನೀಡಬೇಕಿತ್ತು. ಆದರೆ ಪ್ರಸ್ತುತವಿರುವ ಸಕರ್ಾರ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ನೀಡದೆ ನಿರ್ಲಕ್ಷ್ಯವಹಿಸಿದೆ. ಶಾಲಾ ಕಾಲೇಜುಗಳು ಪ್ರಾರಂಭವಾಗಿ ತಿಂಗಳುಗಳು ಕಳೆದಿದ್ದು, ವಿದ್ಯಾಥರ್ಿಗಳು ಉಚಿತ ಬಸ್ಪಾಸ್ ಯೋಜನೆಯನ್ನು ಕಾದು ಹಣ ಪಾವತಿಸಿ ಪಾಸ್ ಪಡೆದಿರುತ್ತಾರೆ ಅಲ್ಲದೆ ಇನ್ನೂ ಕೂಡಾ ಹಲವು ವಿದ್ಯಾಥರ್ಿಗಳು ಉಚಿತ ಬಸ್ ಪಾಸ್ ಗಾಗಿ ಕಾಯುತ್ತಿದ್ದಾರೆ. ಸಕರ್ಾರ ವಿದ್ಯಾಥರ್ಿಗಳ ಶಿಕ್ಷಣವನ್ನು ಉತ್ತೇಜಿಸಲು ಈ ರೀತಿಯಾದ ಯೋಜನೆಗಳನ್ನು ಆಯೋಜಿಸಿ ಸರಿಯಾದ ಸಮಯಕ್ಕೆ ಅನುಷ್ಠಾನಗೊಳಿಸದೆ ಇರುವುದು ಸಕರ್ಾರದ ಬೇಜವಾಬ್ದಾರಿಯನ್ನು ಎತ್ತಿತೋರಿಸುತ್ತದೆ. ಸಕರ್ಾರದ ಈ ನಡೆಯನ್ನು ಕ್ಯಾಂಪಸ್ ಫ್ರಂಟ್ ಖಂಡಿಸುತ್ತದೆ. ವಿದ್ಯಾಥರ್ಿಗಳಿಗೆ ಶೀಘ್ರವಾಗಿ ಉಚಿತ ಬಸ್ಪಾಸ್ ವಿತರಣೆಯನ್ನು ತಕ್ಷಣ ಜಾರಿಗೊಳಿಸಬೇಕು ಮತ್ತು ಹಣ ಪಾವತಿಸಿ ಬಸ್ಪಾಸ್ ಪಡೆದ ವಿದ್ಯಾಥರ್ಿಗಳ ಹಣವನ್ನು ತಕ್ಷಣ ಹಿಂತಿರುಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕನರ್ಾಟಕ ರಾಜ್ಯ ಸಮಿತಿಯು ಸರಕಾರವನ್ನು ಒತ್ತಾಯಿಸುತ್ತಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೊಪ್ಪಳ ತಾಲೂಕಾ ಸಮಿತಿ ಅಧ್ಯಕ್ಷರಾದ ಸೈಯದ್ ಅಲಿ ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ಸುಹೇಲ್ ಉತ್ತರ ಕನರ್ಾಟಕ ಸಮಿತಿ ಸದಸ್ಯ ಹುಸೇನ್ ಬಾಷಾ ಹಾಗೂ ಸಂಘಟನೆಯ ತಾಲೂಕಾ ಸದಸ್ಯರಾದ ವಸೀಮ್ ಉನ್ಚಿಗಿಡ, ಹುಜೈಫ್ ನಿಶಾನಿ, ಸುಫಿಯಾನ್, ಫೇರೋಜ್ ಖಾನ್ ಸೇರಿದಂತೆ ಮಹೆಬೂಬ್ ಮತ್ತು ಅನೇಕರು ಉಪಸ್ಥಿತರಿದ್ದರು.