ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ ಮಾಧ್ಯಮ ಆರಂಭಿಸುವ ನಿಧರ್ಾರ ಕೈ ಬಿಡಲು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಮೂಡಲಗಿ 21: ರಾಜ್ಯದ ನಾಡು ನುಡಿ ರಕ್ಷಣೆಯ ಹೊಣೆ ಹೊರಬೇಕಿದ್ದ ಸಕರ್ಾರವೇ ನಾಡಿನ ಭಾಷೆಯ ಮೇಲೆ ಅನ್ಯಭಾಷೆಯನ್ನು ಹೇರುತ್ತಿರುವುದು ಕನ್ನಡ ಭಾಷೆಗೆ ಸಕರ್ಾರ ಮಾಡಿದ ದೊಡ್ಡ ಅನ್ಯಾಯ ಎಂದು ಕನರ್ಾಟಕ ನವನಿಮರ್ಾಣ ಸೇನೆ ತಾಲೂಕಾಧ್ಯಕ್ಷ ಸಚಿನ ಲೆಂಕೆನ್ನವರ ಹೇಳಿದರು. 

   ಅವರು ದಿ.20ರಂದು ಮೂಡಲಗಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ ಮಾಧ್ಯಮ ಆರಂಭಿಸುವ ಸಕರ್ಾರ ಚಿಂತನೆಯನ್ನು ಕೈ ಬಿಡುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು  ಈಗಾಗಲೇ ಅಳಿವಿನ ಅಂಚಿನತ್ತ ಸಾಗುತ್ತಿರುವ ಕನ್ನಡ ಶಾಲೆಗಳ ಉಳಿವಿಗೆ ಶ್ರಮೀಸಿಬೇಕಿದ ಸಕರ್ಾರವೇ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾದ್ಯಮ ಭೋದನೆಗೆ ಮುಂದಾಗಿದು ನಿಜಕ್ಕೂ  ಖಂಡನೀಯ ಬಾಲ್ಯದಲೇ ಮಾತೃಭಾಷೆಯ ಅಮೃತದ ಬದಲು ಅನ್ಯಭಾಷೆಯ ಹಾಲಾಹಲವನ್ನಿಸಿದರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ದೊಡ್ಡ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಮಾತೃಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಳಿಸುವ ಜಾಗತಿಕ ಸತ್ಯಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತೀರುವ ಸಕರ್ಾರದ ನಡೆ ಕನ್ನಡ ಭಾಷೆಗೆ ಕನ್ನಡ ಭಾಷಿಕರಿಗೆ ಮಾಡಿದ ದೊಡ್ಡ ದ್ರೋಹವೆಂದರು ತಪ್ಪಿಲ್ಲ.

      ಒಂದು ವೇಳೆ ವ್ಯವಹಾರ ಜ್ಞಾನಕ್ಕಾಗಿ ಇಂಗ್ಲಿಷ ಕಲಿಕೆ ಅವಶ್ಯಕತೆ ಇದೆ ಎಂಬುದು ಸಕರ್ಾರದವಾದವಾದರೆ. ಕನ್ನಡ ಮಾಧ್ಯಮದಲ್ಲೇ ಮಾತೃಭಾಷೆಯ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಭೋದಿಸುವುದರಲ್ಲಿ ಯಾವುದೇ ಕನ್ನಡಿಗರ ಅಭಿಯಂತರವಿಲ್ಲ.

     ಈ ಹಿಂದೆಯೂ ಸಕರ್ಾರ ಇಂಗ್ಲಿಷ ಮಾಧ್ಯಮ ಭೋದನೆಗೆ ಮುಂದಾದಾಗ ಸೇನೆಯ ರಾಜ್ಯ ಸಮಿತಿ ಆದೇಶದಂತೆ ಕನರ್ಾಟಕ ನವನಿಮರ್ಾಣ ಸೇನೆ ಮೂಡಲಗಿ ತಾಲ್ಲೂಕಾ ಘಟಕ  ಪ್ರತಿಭಟನೆ ನಡೆಸಿತ್ತು ಆಗ ಪ್ರಸ್ತಾಪ ಕೈ ಬಿಟ್ಟಿದ ಸಕರ್ಾರ ಕನ್ನಡ ಭಾಷೆಯ ಶಾಲೆಗಳ ಪರವಾಗಿ ನಿಂತಿತ್ತು. ಈಗ ಮತ್ತೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳೆ ಇಂತಹ ಭಾಷಾ ವಿರೋಧಿ ನಿಲುವು ತಾಳಿದ್ದು ನಿಜಕ್ಕೂ ದುರದೃಷ್ಟಕರ ಸಂಗತಿ.ಒಂದು ವೇಳೆ ಇಂಗ್ಲಿಷ ಮಾದ್ಯಮ ಆರಂಭವಾದರೆ ಸಕರ್ಾರವೇ ಪರೋಕ್ಷವಾಗಿ ಕನ್ನಡ ಶಾಲೆಗಳನ್ನು ಮುಂಚಿಸಿದಂತಾಗುತ್ತದೆ.

      ಈಗಾಗಲೇ ಮೂಲಭೂತ ಸೌಕರ್ಯಗಳಿಲ್ಲದೆ ಮತ್ತು ಶಿಕ್ಷಣ ವಿಚಾರವಾಗಿ ಸಾಕಷ್ಟು ಸಮಸ್ಯೆಗಳನ್ನು ರಾಜ್ಯದ ಸಕರ್ಾರಿ ಕನ್ನಡ ಮಾಧ್ಯಮಗಳನ್ನು  ಎದುರಿಸುತ್ತಿದು. ವಿದ್ಯಾಥರ್ಿಗಳಲ್ಲದೆ ಅಳಿವು ಉಳಿವಿನ ಅಂಚಿನಲ್ಲಿವೆ ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಇಂಗ್ಲೀಷ ಮಾಧ್ಯಮ ಪ್ರಸ್ತಾಪ ಕೈಬಿಡುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಶಾಲೆಗಳಿಗೆ ಇಗಿರುವ ಮೂಲಭೂತ ಸೌಕರ್ಯಗಳ ಸಮಸ್ಯೆ ತೋಲಗಿಸಿ ಶಾಲೆಗಳನ್ನು ಮತ್ತು ಶಿಕ್ಷಣ ಗುಣಮಟ್ಟವನ್ನು ಅಗ್ರಗಣ್ಯ ಸ್ಥಾನಕ್ಕೆ ತೆಗೆದುಕೊಂಡು ಹೊಗುವಲ್ಲಿ ಸಕರ್ಾರದ ಶ್ರಮಿಸಿಬೇಕೆಂದು ಕನರ್ಾಟಕ ನವನಿಮರ್ಾಣ ಸೇನೆ ಮನವಿ ಮಾಡಿಕೊಳ್ಳುತ್ತದೆ ಎಂದು ಮನವಿಯಲ್ಲಿ ಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾಂತೇಶ ಮುಗಳಖೋಡ.ಸುಭಾಸ ಒಡ್ಡೋಡಗಿ. ಇನ್ನೂಸ ನಾಗರಾಳ. ಗಜಾನಂದ ಪೂಜೇರಿ. ರಾಜು ಹುಬ್ಬಳ್ಳಿ. ಮೀರಾಸಾಬ ಮುಲ್ಲಾ. ಕಲ್ಲಪ್ಪ ನಾಯಕ. ಲಕ್ಕಪ್ಪ ನಾಯಕ. ಗಜಾನನ ಹೀರೆಹೊಳಿ.ಸುರೇಶ ಮಾವಿನಕಟ್ಟಿ. ಉಪಸ್ಥಿತಿ.