ಲೋಕದರ್ಶನ ವರದಿ
ವಿಜಯಪುರ 14: ತಾಲೂಕಿನ ಜಂಬಗಿ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಮಾಜಿ ಶಾಸಕ ವಿಠ್ಠಲ ಕಟಕದೊಂಡ ನೇತೃತ್ವದಲ್ಲಿ ಜಂಬಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಅವರು ಮಾತನಾಡಿ, ಜಂಬಗಿ ಕೆರೆಯು ವಿಜಯಪುರ ಮೇನ್ ಕ್ಯಾನಲ್ ಮುಖಾಂತರ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಒಳಪಟ್ಟಿಲ್ಲ, ಈ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ತೊಂದರೆಯಾಗುತ್ತಿದೆ, ಜಂಬಗಿ ಗ್ರಾಮದ ಕೆರೆಗಳಿಗೆ ನೀರು ತುಂಬುವುದರಿಂದ ಜಂಬಗಿ, ಹೊನ್ನಳ್ಳಿ ಹಾಗೂ ಆಹೇರಿ ಗ್ರಾಮದ ಜನರಿಗೆ ಅಂದರೆ ಸರಿಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದಂತಾಗುತ್ತದೆ, ದನ ಕರುಗಳಿಗೆ ನೀರಿನ ತೊಂದರೆ ಆಗುವುದು ತಪ್ಪಿಸಿದಂತಾಗುತ್ತದೆ ಎಂದರು.
ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಕೂಡಲೇ ಸಭೆ ಕರೆದು ಇದರ ಬಗ್ಗೆ ಸೂಕ್ತವಾಗಿ ವಿಚಾರಣೆ ಮಾಡಿ ಜಂಬಗಿ (ಆ) ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ವಿಜಯಪುರ ಜಿಲ್ಲೆಯ ಎಲ್ಲಾ ಕೆರೆಗಳು ಭತರ್ಿಯಾಗಿದ್ದು ನಮ್ಮ ಕೆರೆಗು ನೀರು ಬರಬೇಕು ಎನ್ನುವುದು ನಮ್ಮ ಮನವಿ. ನಮ್ಮ ಕರೆಗೆ ನೀರು ಬರದೆ ಹೋದರೆ ಇದೇ ದಿನಾಂಕ 14 ರಂದು ಕಗ್ಗೋಡ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ಮಾಡಲಾಗುವುದು. ಇದು ಸಮಸ್ತ ರೈತರ ಎಚ್ಚರಿಕೆ ಗಂಟೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಸಿದ್ದು ಗೋರಡೆ, ಸಂಗಮೇಶ ಔರಸಂಗ ತಾಲೂಕ ಪಂಚಾಯತ ಅದ್ಯಕ್ಷರು, ವಿಠ್ಠಲ ಪೂಜಾರಿ, ಪೈಗಂಬರ್ ಮುಲ್ಲಾ, ಸಾಯಬಣ್ಣ ಲೋಗಾವಿ, ಮಲ್ಲು ಮಾಲೂರ, ಮಾಳಪ್ಪ ಪೂಜಾರಿ, ಅಜೀಜ ಮುಲ್ಲಾ, ದುಂಡಪ್ಪ ಸವಳಿ, ರವಿ ದೇಶಮುಖ ಪಾಲ್ಗೊಂಡಿದ್ದರು