ಹುಬ್ಬಳ್ಳಿ 03: ಧಾರವಾಡ ಅವಳಿನಗರದ ಮಧ್ಯ ಹೊಸದಾಗಿ ಮಾಡುತ್ತಿರುವ ಬಿಆರ್ಟಿಎಸ್ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳ ಕುರಿತು ಧಾರವಾಡ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಡಿಡಿಸಿಸಿಐ) ವತಿಯಿಂದ ಸಂಸ್ಥೆಯ ಅಧ್ಯಕ್ಷ ನಾಗನಗೌಡ ನೀರಲಗಿ ಉಫರ್್ ಪಾಟೀಲ ಅವರ ನೇತೃತ್ವದಲ್ಲಿ 31 ಅಕ್ಟೋಬರ್ ರಂದು ಮನವಿ ಸಲ್ಲಿಸಲಾಯಿತು.
ಧಾರವಾಡ ಗಾಂಧಿನಗರದಿಂದ ನವಲೂರವರೆಗೆ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಸಾರ್ವಜನಿಕರು ಹಾಗೂ ಉದ್ಯೋಗಸ್ಥರು ಮತ್ತು ಇತರೆ ವಾಹನಗಳು ಸಂಚರಿಸಲು ಸಂಪರ್ಕ ರಸ್ತೆಯನ್ನು ಕಡಿತಗೊಳಿಸಿದ್ದರಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿದೆ. ಧಾರವಾಡ ಟೋಲನಾಕಾದಿಂದ ನವನಗರದವರೆಗೆ ಬರತಕ್ಕ ಬಿಆರ್ಟಿಎಸ್ ರಸ್ತೆಗೆ ನಗರದ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ವೈಜ್ಞಾನಿಕವಾಗಿ ಸರಿಪಡಿಸಬೇಕಾದ ತುತರ್ು ಅಗತ್ಯವಿದೆ.
ಧಾರವಾಡ ಗಾಂಧಿನಗರದಿಂದ ನವಲೂರವರೆಗೆ ಬಿಆರ್ಟಿಎಸ್ ರಸ್ತೆಯಿಂದ, ಕೆ.ಎಮ್.ಎಫ್ ಎದುರಗಡೆ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಹೋಗುವ ಸಂಪರ್ಕ ರಸ್ತೆಯನ್ನು ಕಡಿತುಗೊಳಿಸಿದ್ದರಿಂದ ಲಕಮನಹಳ್ಳಿಯಲ್ಲಿ ಇರುವ ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಹಾಗೂ ಡಿ.ಜಿ. ಶೆಟ್ಟಿ ಕಾಲೇಜ್ ಹತ್ತಿರದ ಕೆ.ಎಮ್.ಎಫ್ ಮಿಲ್ಕ್ ಡೈರಿ ಬಳಿ ಹಗಲು ರಾತ್ರಿ ಸಾಕಷ್ಟು ವಾಹನಗಳ ಸಂಚಾರ ಹಾಗೂ ಜನದಟ್ಟನೆ ಇರುವದರಿಂದ ಗಾಂಧಿನಗರದಿಂದ ನವಲೂರ ಬ್ರಿಜ್ವರೆಗಿನ ಸಂಚಾರ ದುಸ್ತರವಾಗಿದೆ. ಆದ ಕಾರಣ ಕೆ.ಎಮ್.ಎಫ್ ರಸ್ತೆಯ ಕಡೆ ಕ್ರಾಸಿಂಗ್ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಗಾಂಧಿನಗರದಿಂದ ನವಲೂರಿನವರೆಗೆ ಇರತಕ್ಕ ಎಡ ಮತ್ತು ಬಲ ವಸತಿ ಬಡಾವಣೆ ಜನರಿಗೆ ಬಹಳ ತೊಂದರೆ ಆಗುತ್ತಿದ್ದು ಇದನ್ನು ಕೂಡಲೇ ಸರಿ ಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಎಸ್.ಡಿ.ಎಮ್ ಡೆಂಟಲ್ ಕಾಲೇಜ್, ಎಸ್.ಡಿ.ಎಮ್ ಮೆಡಿಕಲ್ ಕಾಲೇಜ್, ಗೂಡ್ಶೆಡ್, ಕೆ.ಎಮ್.ಎಫ್, ರಾಯಾಪುರ ಹಾಗೂ ರಾಯಾಪುರ ಇಂಡಸ್ಟ್ರಿಗೆ ಹೋಗುವ ಮಾರ್ಗ, ರಾಯಾಪುರದಿಂದ ನವನಗರ ಎಡ ಮತ್ತು ಬಲ ಸಕರ್ಾರಿ ರಸ್ತೆಯನ್ನು ವೈಜ್ಞಾನಿಕ ರೀತಿಯಲ್ಲಿ ಸರಿಪಡಿಸಬೇಕು. ಹುಬ್ಬಳ್ಳಿ ಸಿಟಿಯಿಂದ ಧಾರವಾಡ ಸಿಟಿ ಜುಬಿಲಿ ಸರ್ಕಲ್ವರೆಗೆ ರಸ್ತೆಯ ಎರಡು ಬದಿ ಬರತಕ್ಕ ಅಡ್ಡರಸ್ತೆ ಸಂಪರ್ಕವನ್ನು ಅವೈಜ್ಞಾನಿಕವಾಗಿ ಮಾಡಿದ್ದು ಅವುಗಳ ಸಂಪರ್ಕದ ಅಡಿ 150 ಡಿಗ್ರಿ ಪ್ರಕಾರ ಸಂಪರ್ಕ ಹೊಂದುವಂತೆ ಮಾಡಿದ್ದಲ್ಲಿ, ಸಂಚಾರವು ಸುಗಮವಾಗುತ್ತದೆ. ಇದರಿಂದ ವ್ಯವಸ್ಥೆಯಲ್ಲಿ ಅಪಘಾತವಾಗುವ ಸಂಭವ ಹೆಚ್ಚಿಗೆ ಇರುತ್ತದೆ. ಅವುಗಳನ್ನು ಕೂಡಲೆ ಸರಿಪಡಿಸಬೇಕೆಂದು ಸಮಸ್ತ ಧಾರವಾಡ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ವ್ಯಾಪಾರಸ್ಥರ ವತಿಯಿಂದ ಜಿಲ್ಲಾಧಿಕಾರಿಗಳನ್ನು ಕೋರಲಾಯಿತು.
ಸಂಸ್ಥೆಯ ಪದಾಧಿಕಾರಿಗಳಾದ ಅರುಣ ಶೀಲವಂತ, ಸಿದ್ದು ಪಾಟೀಲ, ಬಿ.ಎಂ. ವೆಂಕಟೇಶ, ಡಾ. ಡಿ.ಜಿ.ಶೆಟ್ಟಿ, ಶಿವರಾಮ್ ಭಟ್, ಪ್ರಕಾಶ ಕಟ್ಟಿ ಇತರರು ಇದ್ದರು.