ಮ್ ಎಸ್ ಆಯ್ ಎಲ್ ಮಧ್ಯದ ಮಳಿಗೆ ತೆರೆಯಬಾರದೆಂದು ಜಿಲ್ಲಾಧಿಕಾರಿಗೆ ಮನವಿ

ಲೋಕದರ್ಶನ ವರದಿ

ಬೆಳಗಾವಿ : ಜಿಲ್ಲೆಯ ಹುಕ್ಕೆರಿ ತಾಲೂಕಿನ ನಾಗನೂರ ಕೆಎಸ್ ಗ್ರಾಮದಲ್ಲಿ ಬಡ ಕೂಲಿ ಕಾಮರ್ಿಕರಿದ್ದು ಯಾವುದೇ ಕಾರಣಕ್ಕೂ ಎಮ್ ಎಸ್ ಆಯ್ ಎಲ್ ಮಧ್ಯದ ಮಳಿಗೆ 11ಸಿ ಹಾಗೂ ಇನ್ನಿತರ ಮಧ್ಯದ ಸನ್ನದಗಳನ್ನು ಹೊಸದಾಗಿ ತೆರೆಯಬಾರದೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತ ಈ ಗ್ರಾಮವು ಬಹಳಷ್ಟು ಹಿಂದಳಿದ ಪ್ರದೇಶವಾಗಿದೆ. ಈ ಗ್ರಾಮದಲ್ಲಿ  ಬಡ ಕುಲಿ ಕಾಮರ್ಿಕರು ಸಾಕಷ್ಟು ಇದ್ದು ಈಗಾಗಲೇ ಒಂದು ಸಿಎಲ್2 ಮಧ್ಯದ ಅಂಗಡಿ ಇದ್ದು ಮತ್ತೊಂದು ಎಮ್ ಎಸ್ ಆಯ್ ಎಲ್ ಅಂಗಡಿಯನ್ನು ತೆರೆಯಬಾರದೆಂದು ಆಗ್ರಹಿಸಿದರು. 

 ಈ ಗ್ರಾಮದ ಜನಸಂಖ್ಯೆ 2011ನೆ ಸಾಲಿನಲ್ಲಿ ಸೂಮಾರು 3379 ಇದ್ದು ಹುಕ್ಕೇರಿ ತಹಶಿಲ್ದಾರರಿಂದ ಪ್ರಮಾಣ ಪತ್ರ ಪಡೆದಿದೆ. ಈಗ ಹೊಸದಾಗಿ ಪ್ರಾರಂಭ ಮಾಡುತ್ತಿರುವ ಎಮ್ ಎಸ್ ಆಯ್ ಎಲ್ ಅಂಗಡಿಯ ಹತ್ತಿರದಲ್ಲಿ  ಶಾಲೆ ಇದ್ದು ಮಕ್ಕಳಿಗೆ ಬಹಳಷ್ಟು ತೋಂದರೆಯಾಗುತ್ತದೆ ಅಷ್ಟೇ ಅಲ್ಲದೆ ಪಕ್ಕದಲ್ಲೆ ಗಿರಿಜನ, ಹರಿಜನ ಶೋಷಿತ ಜನರು ವಸತಿ ಕಾಲೋನಿ  ವಾಸಮಾಡುವ ಸ್ಥಳವು ಕೂಡ ಇರುವ ಕಾರಣದಿಂದ ಇದನ್ನು ಪ್ರಾರಂಭಿಸಬಾರದು ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

ಈ ಸಂದರ್ಭದಲ್ಲಿ ಶಿವಾಜಿ, ಜಯವಂತ,ರಾಮಚಂದ್ರ, ಸುಬ್ಬರಾವ್ ಪಾಟೀಲ್,ತುಕಾರಮ ಕಾಂಬ್ಳೆ, ಆಧಿನಾಥ ಕುಲಕಣರ್ಿ,ಶಿಮ್ರಾನ ಪವಾರ,ದತ್ತಾ ಕಾಂಬ್ಳೆ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.