ಹಲರ್ಾಪೂರ ಗ್ರಾಮಸ್ಥರರಿಂದ ಜಿಲ್ಲಾಧಿಕಾರಿಗೆ ಮನವಿ

ಗದಗ: ಹಲರ್ಾಪೂರ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದಶರ್ಿ ಶರಣಪ್ಪ ದೇಸಾಯಿ ಅವರು ರೈತರ ಹೆಸರಿನಲ್ಲಿ  ಬೆಳೆವಿಮೆ, ಬೆಂಬಲ ಬೆಲೆಯಲ್ಲಿ ಹೆಸರು  ಖರೀದಿ, ಹೆಚ್ಚುವರಿ ಸಾಲ ಪಡೆದಿರುವ ಬಗ್ಗೆ ಗಮನಕ್ಕೆ ಬಂದಿದ್ದು ಈ ಅವ್ಯವಹಾರದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು  ಆಗ್ರಹಿಸಿ ಹಲರ್ಾಪೂರ ಗ್ರಾಮಸ್ಥರು  ಬುಧವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. 

ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದಶರ್ಿ ಶರಣಪ್ಪ ದೇಸಾಯಿ ಎಂಬುವರು ರೈತರಿಗೆ ಸಾಲವನ್ನು ಕೊಡುವಾಗ ಖಾಲಿ ಬಾಂಡ್ಪೇಪರ ಮತ್ತು ಖಾಲಿ ಚೆಕ್ಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ.  ಬೆಳೆವಿಮೆ ಹಣವನ್ನು ರೈತರ ಹೆಸರಿನಲ್ಲಿ ತುಂಬಿ ಹಣವನ್ನು ತಾನೆ ಪಡೆದುಕೊಂಡಿದ್ದಾನೆ. ಬೆಂಬಲ ಬೆಲೆಯಲ್ಲಿ ರೈತರ ಹೆಸರಿನಲ್ಲಿ  ಕಡಲೆ, ಹೆಸರನ್ನು ಖರೀದಿ ಮಾಡಿದ ಬಗ್ಗೆ ಕಂದಾಯ ಅಧಿಕಾರಿ, ಪೊಲೀಸ್ ಅಧಿಕಾರಿ, ಗ್ರಾಮ ಪಂಚಾಯತಿ ಅಧ್ಯಕ್ಷರ ಸಮಕ್ಷಮ 130 ಚೀಲಗಳನ್ನು ಸೀಜ್ ಮಾಡಿದ್ದರೂ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಅಲ್ಲದೇ ಅಮಾನತ್ತು ಮಾಡಿ 4 ಗಂಟೆಯಲ್ಲಿ ಮತ್ತೆ ನೌಕರಿಗೆ ಸೇರಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಬಾಬು ಸೈಪಣ್ಣವರ, ನೀಲಪ್ಪ ಕಿಂದ್ರಿ, ಬಸವರಾಜ ಅಳಗವಾಡಿ,  ಯಲ್ಲಪ್ಪ ತಾಕಲಕೋಟಿ, ದೇವಿದಾಸ ಸಲಗಾರ, ಸೋಮನಗೌಡ್ರ ಪಾಟೀಲ, ಅರುಣ ಅಗಸನಕೊಪ್ಪ, ಬಾಬುರಡ್ಡಿ ಕೊಣ್ಣೂರ,  ಜಿ.ಎನ್.ಕೊಣ್ಣೂರ, ಶಿವಾನಂದ ಪಟ್ಟೇದ, ಬಸವರಾಜ ಎಲಿಗಾರ, ರವಿಕುಮಾರ ಸಜ್ಜನ, ಕಿರಣ ಪವಾರ, ಗೋವಿಂದರಡ್ಡಿ ಕೊಣ್ಣೂರ, ಮಲ್ಲಪ್ಪ ಕರಿಯಣ್ಣವರ, ರವಿಕುಮಾರ ಸಜ್ಜನ, ನಿಂಗನಗೌಡ್ರ ಗೌಡ್ರ, ವೀರಪ್ಪ ಹಾಳಕೇರಿ, ಭೀಮಪ್ಪ ಉಮಚಗಿ, ಶರಣಪ್ಪ ಚಿಂಚಲಿ, ಸೋಮಶೇಖರ ಬಂಡಿಹಾಳ, ಈಶ್ವರಪ್ಪ ಬಂಡಿಹಾಳ, ಸುರೇಶ ಯಾಳವಾಡ, ಯಲ್ಲಪ್ಪ ಕಿಂದ್ರಿ, ಕೊಟ್ರಪ್ಪ ಕೋತಪ್ಪನವರ, ಎಂ.ಎಂ.ಯಾಳವಾಡ, ನಿಂಗಪ್ಪ ಚಿಂಚಲಿ, ಪ್ರವೀಣ ಯಲಿಗಾರ, ಮಂಜುನಾಥ ಗುಮ್ಮಗೋಳ, ಶಾಂತಯ್ಯ ರ್ಯಾವಣ್ಣವರ, ಅಶೋಕ ಶ್ಯಾನಭೋಗರ, ಸಂತೋಷ ವಡ್ಡರ, ಗೋವಿಂದರಡ್ಡಿ ಕಾತರಕಿ, ಮೋಹನ ಚಿಂಚಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.