ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿಗೊಳಿಸದಂತೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬೆಳಗಾವಿ: ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿಗೊಳಿಸದಂತೆ ಆಗ್ರಹಿಸಿ  ಅಲ್ಪಸಂಖ್ಯಾತ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಕನರ್ಾಟಕ ಸರಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿ, ಕಾಪರ್ೊರೇಷನ್ ನಿವೃತ್ತ, ಸೇವಾ ನಿರತ ನೌಕರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಗುರುವಾರ ಅವರು ಪ್ರತಿಬಟಿಸುತ್ತ ಕನರ್ಾಟಕ ಸರಕಾರ 1978ರಲ್ಲಿ ಬಡ್ತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡುವುದನ್ನು ಜಾರಿ ಮಾಡಿತ್ತು. ನೀತಿ ಕೇವಲ ಲೋಯರ್ ಕ್ಲಾಸ್ 1 ಹುದ್ದೆಯವರೆಗೆ ಇರುತ್ತದೆ. ಆದರೆ ಬಡ್ತಿ ಮೀಸಲಾತಿಯಿಂದ ಬಡ್ತಿ ಹುದ್ದೆಗಳನ್ನು ಪಡೆದರೆ ಅವರುಗಳಿಗೆ ವೇಗೋತ್ಕರ್ಷಕ ಜೇಷ್ಠತೆಯನ್ನು ಸರಕಾರ ನೀಡುತ್ತ ಬಂದಿತ್ತು. ನೀತಿಯಿಂದ ಎಲ್ಲ ಬಡ್ತಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಲಭಿಸಿ ಶೇ. 82 ವರ್ಗದವರಿಗೆ ಅನ್ಯಾಯವಾಗುತ್ತ ಬಂದಿತ್ತು. ವೇಗೋತ್ಕರ್ಷ ಜೇಷ್ಠತೆಯನ್ನು ಅನುಸರಿಸುತ್ತಿರುವ ಬಗ್ಗೆ ಸಾಮಾನ್ಯ ವರ್ಗದವರಿಂದ 1992ರಿಂದ ಕನರ್ಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನೆ ಮಾಡಲಾಯಿತು. ತದ ನಂತರ ಹೈಕೋಟರ್್ ಮತ್ತು ಸುಪ್ರೀಂಕೋಟರ್್ ನಲ್ಲಿ ಮೇಲ್ಮನವಿ ಸಲ್ಲಿಸಿ 2017ರಲ್ಲಿ ಸಾಮಾನ್ಯ ವರ್ಗದವರಿಗೆ ನ್ಯಾಯ ದೊರಕಿತು. ಆದೇಶವನ್ನು ಆರು ತಿಂಗಳಲ್ಲಿ ಜಾರಿ ಮಾಡಲು ತಿಳಿಸುತ್ತ ಚನ್ನಮ್ಮ ವೃತ್ತದಲ್ಲಿ ಎಲ್ಲ ಕಾರ್ಯಕರ್ತರು ತಮ್ಮ ಕೈಗಳಿಂದ ಕೈ ಸರಪಳಿ ಕಟ್ಟಿ ಚನ್ನಮ್ಮ ಮುತರ್ಿಂನ್ನು ಸುತ್ತುವರೆದು  ಪ್ರತಿಬಟನೆ ಮಾಡಿದರು ಹಾಗೂ ಪ್ರತಿಬಟನೆ ಜಯಕಾರ ಕುಗೂತ್ತ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 26 ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಲಕ್ಷಾಂತರ ನೌಕರರು ಬಡ್ತಿಯಿಂದ ವಂಚಿತರಾಗಿದ್ದಾರೆ. ಸರಕಾರ ಎಲ್ಲ ಸತ್ಯಾಸತ್ಯತೆ ಅರಿತು ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಂದರ್ಭದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಸಾಮಾನ್ಯ ವರ್ಗಗಳ ಎಲ್ಲ ಇಲಾಖೆಗಳ ನೌಕರರು, ಬಿ. ಡಿ. ನಸಲಾಪುರೆ, ಸಿ. ಬಿ. ಯಂಕಂಚಿ, . ಎಂ. ಸುಂಕದ, ಎಸ್. ಎಸ್. ಪಟ್ಟಣಶೆಟ್ಟಿ, ಗಜಾನನ ಮಣ್ಣಿಕೇರಿ, ಉಮಾ ಸಾಲಿಗೌಡರ, ಸಯ್ಯೀದ್ ಆಫ್ರೀನ್ ಬಳ್ಳಾರಿ, . ವಿ. ಹೊಸಮನಿ, ಅರುಣ ಯಕಗುದ್ರಿ, ಎಸ್. ಸಿ. ಮಠಪತಿ, ಶಿವಾನಂದ ನಾಯಕವಾಡಿ, ಎಲ್. . ರೂಢಗಿ, ವಿ. ಜೆ. ಹಿರೇಮಠಮೋಹನ ಗಾಯಜವಾಡ ಹಾಗೂ ನೂರಾರು ನೌಕರರು ಹಾಗೂ ಉಪಸ್ಥಿತರಿದರು.