ಬೈಲಹೊಂಗಲ 09: ಹಿರೇಬಾಗೇವಾಡಿ ಮೂಲಕ ಬೈಲಹೊಂಗಲದಿಂದ ಸವದತ್ತಿಗೆ ಸಂಪಕರ್ಿಸುವ ರಾಜ್ಯ ಹೆದ್ದಾರಿಗೆ ಆಳವಡಿಸಿದ ಟೋಲ್ ನಾಕಾ ರದ್ದುಗೊಳಿಸುವಂತೆ ಆಗ್ರಹಿಸಿ ತಾಲೂಕ ಕೃಷಿಕ ಸಮಾಜದ ಸದಸ್ಯರು ಉಪವಿಭಾಗಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಹಿರೇಬಾಗೇವಾಡಿ ಮೂಲಕ ಬೈಲಹೊಂಗಲದಿಂದ ಸವದತ್ತಿಗೆ ಸಂಪಕರ್ಿಸುವ ರಾಜ್ಯ ಹೆದ್ದಾರಿ ಸುಮಾರು ವರ್ಷಗಳಿಂದ ಅಭಿವೃದ್ದಿ ಕಾಣದೆ ಹದಗೆಟ್ಟ ಸ್ಥಿತಿಯಲ್ಲಿ ಇತ್ತು. ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಜನತೆ ಸಾಕಷ್ಟು ತೊಂದರೆ ಅನುಭವಿಸಿ ಉತ್ತಮ ರಸ್ತೆಗಾಗಿ ಸಾಕಷ್ಟು ಹೋರಾಟ ಮಾಡಿದರ ಫಲಫ್ರದವಾಗು ರಾಜ್ಯ ಸರಕಾರ ಈ ರಸ್ತೆಯನ್ನು ಅಭಿವೃದ್ದಿಗೊಳಿಸುವತ್ತ ದಿಟ್ಟ ಕ್ರಮ ಕೈಗೊಂಡಿರುವುದು ಈ ಭಾಗದ ಜನತೆಯಲ್ಲಿ ಮಂದಹಾಸ ಮೂಡಿತ್ತು. ಈ ಭಾಗದ ರೈತರು ತಾವು ಬೆಳೆದ ಕಾಳು, ಕಾಯಿಪಲ್ಲೆ ಬೆಳೆಗಳನ್ನು ಮಾರಾಟ ಮಾಡಲು ಬೆಳಗಾವಿಗೆ ಕೊಂಡೊಯ್ಯುತ್ತಾರೆ. ರೈತಾಪಿ ವರ್ಗ ಬೆಳವಡಿಯ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆ, ಕರೀಕಟ್ಟಿ ಹಷರ್ಾ ಶುಗರ್ಸ್, ಎಮ್.ಕೆ.ಹುಬ್ಬಳ್ಳಿ ರಾಣಿ ಶುಗರ್ಸ್, ಮುನವಳ್ಳಿ ರೇಣುಕಾ ಶುಗರ್ಸ್ ಕಾಖರ್ಾನೆಗಳಿಗೆ ಕಬ್ಬು ಸರಬರಾಜು ಮಾಡಲಾಗುತ್ತದೆ.
ಈ ಭಾಗದ ಪ್ರವಾಸಿ ತಾಣಗಳಾದ ಶ್ರೀ ಕ್ಷೇತ್ರ ಸೊಗಲ, ಯಲಮ್ಮ ದೇವಸ್ಥಾನ, ನವಿಲುತೀರ್ಥ ಅಣೆಕಟ್ಟು, ವೀರರಾಣಿ ಕಿತ್ತೂರ ಚನ್ನಮ್ಮನ ಐಕ್ಯ ಸ್ಥಳ, ಸಂಗೊಳ್ಳಿ ರಾಯಣ್ಣನ ಸ್ಮಾರಕ ನೋಡಲು ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ ಸವದತ್ತಿ ಮತ್ತು ಬೈಲಹೊಂಗಲ ಪಟ್ಟಣಗಳ ಸುತ್ತಮುತ್ತಲಿನ ಗ್ರಾಮಗಳ ನೂರಾರು ಗ್ರಾಮಸ್ಥರು ತಮ್ಮ ದಿನನಿತ್ಯದ ವ್ಯವಹಾರಕ್ಕಾಗಿ ಈ ರಸ್ತೆಯನ್ನೇ ಅವಲಂಬಿಸಿದ್ದರಿಂದ ವಾಹನಗಳ ಮೂಲಕ ಬರುವಾಗ ಟೋಲ ನಾಕಾ ಆಳವಡಿಸಿದ್ದರಿಂದ ಆಥರ್ಿಕ ತೊಂದರೆ ಅನುಭವಿಸುತ್ತಾರೆ. ಈಗ ಈ ರಸ್ತೆ ಸುಧಾರಿಸಿದರೂ ಕೂಡ ಟೋಲ್ ನಾಕಾ ಮೂಲಕ ಆಥರ್ಿಕ ತೊಂದರೆಗೆ ಒಳಗಾಗುವದರಿಂದ ಮತ್ತು ಪ್ರವಾಸೋದ್ಯಮಕ್ಕೆ ಹೊಡೆತ ಬೀಳುವದರಿಂದ ತಕ್ಷಣ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಟೋಲ ನಾಕಾ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಬರುವ ದಿನಮಾನಗಳಲ್ಲಿ ಟೋಲ್ ನಾಕಾ ತೆರೆಯುವ ದುಸ್ಸಾಹಸಕ್ಕೆ ಕೈ ಹಾಕಿದರೆ ಈ ಭಾಗದ ಜನರು ಉಗ್ರ ಪ್ರತಿಭಟನೆ ಮಾಡುವದರೊಂದಿಗೆ ಟೋಲ ನಾಕಾ ಹಠಾವೋ ಚಳುವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೃಷಿಕ ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಮಹಾಂತೇಶ ಕಮತ, ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಈರಣ್ಣ ಹುಬ್ಬಳ್ಳಿ, ಬಸವರಾಜ ದುಗ್ಗಾಣಿ, ಸುರೇಶ ಹೊಳಿ, ಮಡಿವಾಳಪ್ಪ ಚಿಕ್ಕೋಪ್ಪ, ವಿಠ್ಠಲ ವಕ್ಕುಂದ, ಮಡಿವಾಳಪ್ಪ ಬುಳ್ಳಿ, ಆಯ್.ಡಿ.ಒಂಟಿ, ಭೀಮಪ್ಪ ಪೂಜೇರಿ,ರಂಗಪ್ಪ ಬೂದಿಹಾಳ, ಮೂಗಪ್ಪ ಕುರಬೇಟ, ಮಲ್ಲೇಶಪ್ಪ ಕರಡಿಗುದ್ದಿ ಮತ್ತಿತರರು ಇದ್ದರು.