ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ
ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ಸದಸ್ಯರು ಸೋಮವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಿದರು.
ರೈತರು ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಬೆಂಬಲ ಬೆಲೆ ನಿಗದಿ ಪಡಿಸುವುದು. ರಾಜ್ಯದಲ್ಲಿ ಅತೀಕ್ರಮಣ ರೈತರ ಸಮಸ್ಯೆಯನ್ನು ಬಗೆ ಹರಿಸುವುದು ಹಾಗೂ ರೈತರಿಗೆ ಸಮರ್ಪಕವಾಗಿ ಬೆಳೆ ಸಾಲ ನೀಡುವಂತೆ ರೈತ ಸಂಘದ ಸದಸ್ಯರು ಒತ್ತಾಯಿಸಿದರು.
ರಾಜ್ಯದಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ನೆರೆ ಸಂತ್ರಸ್ಥರಿಗೆ ನೆರವಾಗುವಂತೆ ಅವರ ಜೀವನೋಪಾಯಕ್ಕೆ ದಾರಿಯಾಗುವಂತೆ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಶಾಶ್ವತ ಪರಿಹಾರ ನೀಡಬೇಕು. ನೀಡಿದ ಪರಿಹಾರವು ನೇರವಾಗಿ ನಿಜವಾದ ಸಂತ್ರಸ್ತರ ಕೈ ಸೇರಬೇಕು. ಸೋಸೈಟಿ ಹಾಗೂ ಬ್ಯಾಂಕುಗಳಲ್ಲಿ ಸಕರ್ಾರದಿಂದ ಬಂದ ಬೆಳೆ ಸಾಲ ಮತ್ತು ಬೆಳೆ ವಿಮೆಯನ್ನು ನೀಡುವುದರಲ್ಲಿ ತಾರತಮ್ಯ ಆಗದಂತೆ ಕ್ರಮ ವಹಿಸಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು.
ರಾಜ್ಯವನ್ನು ಸರಾಯಿ ಮುಕ್ತ ಮಾಡಿ ಗಾಂಧಿಜಿಯವರ ಕನಸನ್ನು ನನಸಾಗಿ ಮಾಡಿ ಲಕ್ಷಾಂತರ ಬಡಕುಟುಂಬಗಳನ್ನು ರಕ್ಷಿಸಬೇಕು. ತಾಲೂಕಿನ ಸಿಟಿ ಫಾರ್ಮನಲ್ಲಿ ಬಡ ಕುಲಿ ಕಾಮರ್ಿಕರಿಗೆ ವಸತಿ ನಿಮರ್ಿಸಿಕೊಡಲು 1 ಗುಂಟೆಯಂತೆ ಕಾಲಿ ಜಾಗೆಯನ್ನು ನೀಡುವುದಾಗಿ ಬರವಸೆ ಕೊಟ್ಟಿದ್ದರು ಈ ವರೆಗು ಯಾವ ಸಕರ್ಾರವು ಈ ಸೌಲಭ್ಯವನ್ನು ಮಾಡಿಕೊಟ್ಟಿಲ್ಲಾ.
ಹೆಣ್ಣು ಮಕ್ಕಳ ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದಂತಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವುದರ ಮೂಲಕ ಇಂತಹ ಪ್ರಕರಣಗಳು ಆಗದಂತೆ ಕ್ರಮವಹಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕನರ್ಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಸುಂಕಪ್ಪ ಜಕ್ಕನಕಟ್ಟಿ, ಮಂಜುನಾಥ ಭಟ್ಟರು, ಲೋಹಿತ ಮಟ್ಟಿಮನಿ, ಮಾಟರ್ಿನ ಬಳ್ಳಾರಿ, ಕೆಮಣ್ಣಾ ಲಮಾಣಿ, ಜೈತುನಬಿ ಜಿಗಳೂರ, ಮಂಜುನಾಥ ಕುರ್ತಕೋಟಿ ಮುಂತಾದವರು ಉಪಸ್ಥಿತರಿದ್ದರು.