ರಾಯಬಾಗ : ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆಗೆ ಒತ್ತಾಯಿಸಿ ಮನವಿ

ರಾಯಬಾಗ 18: ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರ ಉದ್ಭವಿಸಿದ್ದು, ಕೂಡಲೇ ಟ್ಯಾಂಕರ್ ಮೂಲಕ ನೀರನ್ನು ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಶಾಸಕ ಡಿ.ಎಮ್.ಐಹೊಳೆ ಅವರ ನೇತೃತ್ವದಲ್ಲಿ ತಹಶೀಲ್ದಾರ ಡಿ.ಎಚ್.ಕೋಮರ್ ಅವರಿಗೆ ಶುಕ್ರವಾರ ಸಾಯಂಕಾಲ ಮನವಿ ಸಲ್ಲಿಸಿದರು. 

ಪಟ್ಟಣಕ್ಕೆ ನೀರು ಪೂರೈಸುವ ಹುಲ್ಯಾಳ ಕೆರೆ ಬತ್ತಿ ಹೋಗಿದ್ದು, ಪಟ್ಟಣದ ಶೇ.80ರಷ್ಟು ಕೊಳವೆ ಬಾವಿಗಳು ಸಹ ನೀರಿಲ್ಲದೇ ಬತ್ತಿ ಹೋಗಿವೆ. ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಪಟ್ಟಣದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಪಟ್ಟಣದ ಜನರಿಗೆ ನೀರು ಒದಗಿಸುವ ಹುಲ್ಯಾಳ ಕೆರೆಗೆ ಘಟಪ್ರಭಾ ಎಡದಂಡೆ ಕಾಲುವೆಯಿಂದ ನೀರು ಹರಿಸಲು ಸರಕಾರದ ಗಮನಕ್ಕೆ ತಂದು ಕೆರೆ ಭತರ್ಿ ಮಾಡಿಸಬೇಕು. ಅಲ್ಲಿವರೆಗೆ ತಾತ್ಕಾಲಿಕವಾಗಿ ನೀರಿನ ತೀವ್ರ ಸಮಸ್ಯೆ ಇರುವ ವಾರ್ಡಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೂಡಲೇ ಪಟ್ಟಣದ ಜನರಿಗೆ ನೀರಿನ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳದಿದ್ದರೆ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಶಾಸಕ ಡಿ.ಎಮ್.ಐಹೊಳೆ, ಸದಾಶಿವ ಹಳಿಂಗಳಿ, ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೆಮಲಾಪೂರೆ, ಅಣ್ಣಾಸಾಬ ಕುಲಗುಡೆ, ಡಾ.ಗಾಯತ್ರಿ ಬಾನೆ, ಅಪ್ಪಾಸಾಬ ಕುಲಗುಡೆ, ಜಿಯಾವುಲ್ಲಾ ಮುಲ್ಲಾ, ಸುರೇಶ ಮಾಳಿ ಸೇರಿದಂತೆಅನೇಕರು ಉಪಸ್ಥಿತರಿದ್ದರು.