ಲೋಕದರ್ಶನ ವರದಿ
ಬ್ಯಾಡಗಿ: ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ ಕಚೇರಿಗೆ ತೆರಳಿದ ರೈತರು ರಾಜ್ಯದ ರೈತರ ಸಾಲಮನ್ನಾ ಸೇರಿದಂತೆ ಬೆಳೆವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುರಿಗೆಪ್ಪ ಶೆಟ್ಟರ, ಸಾಲಮನ್ನಾ ವಿಷಯದಲ್ಲಿ ಮುಖ್ಯಮತ್ರಿಗಳು ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ, ವಿಧಾನಸಭೆ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರಿಗೆ ರೈತರ ಮೇಲಿದ್ದ ಪ್ರೀತಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಮೇಲೆ ಎಲ್ಲವೂ ಮಾಯವಾಗಿದೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆ ಪ್ರಣಾಳಿಕೆಯಾಗದಿರಲಿ: ಅತೀವೃಷ್ಟಿ ಮತ್ತು ಅನಾವೃಷ್ಟಿಗಳಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅಧಿಕಾರಕ್ಕೆ 24 ಗಂಟೆಯೊಳಗೆ ಸಾಲಮನ್ನಾ ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡರು 4500 ಸಾವಿರ ಗಂಟೆಗಳಾದರೂ ಇನ್ನೂ ಯಾವುದೇ ನಿಧರ್ಾರ ತೆಗೆದುಕೊಳ್ಳದೇ ರೈತರನ್ನು ಬೀದಿಗಿಳಿದು ಹೋರಾಟ ನಡೆಸಲು ಕಾರಣವಾಗುತ್ತಿದ್ದಾರೆ.
ಅಳಮುಂಜಿ ಪಾತ್ರದಲ್ಲಿ ಮುಖ್ಯಮಂತ್ರಿ: ಸಾಲಮನ್ನಾ ವಿಷಯಕ್ಕೆ ಉತ್ತರ ಕೊಡಲಾಗದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಾರ್ವಜನಿಕ ಸಭೆ ಸಮಾರಂಭ ಸೇರಿದಂತೆ ಹಾದಿಬೀದಿಗಳಲ್ಲಿ ಹೋದ ಕಡೆಯಲ್ಲೆಲ್ಲಾ ಅಳುಮುಂಜಿ ಪಾತ್ರಗಳನ್ನು ಮಾಡುತ್ತಾ, ಸಾಲಮನ್ನಾ ವಿಷಯವನ್ನು ರೈತರು ಮರೆಯುವಂತೆ ಮಾಡುತ್ತಿದ್ದಾರೆ. ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮುಖ್ಯಮಂತ್ರಿಗಳು ನಮಗೆ ಬೇಡ ರಾಜೀನಾಮೆ ನೀಡಿ ಆರೋಗ್ಯ ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.
ಷರತ್ತುಗಳು ಬೇಡ: ರೈತರ ಸಾಲಮನ್ನಾ ಮಾಡಲು ಹತ್ತು ಹಲವು ಷರತ್ತುಗಳನ್ನು ವಿಧಿಸಲಾಗುತ್ತಿದ್ದು ಮೊದಲು ಇದನ್ನು ಕೈಬಿಡಬೇಕು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಇನ್ನೂ ನಡೆದಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶವನ್ನು ಮಾಡಬೇಕು, ಮತ್ತು ಬ್ಯಾಡಗಿ ತಾಲೂಕನ್ನು ಬರಪೀಡತವೆಂದು ಘೋಷಿಸಿ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಆಗ್ರಹಿಸಿದರು.
ಈರಪ್ಪ ಸಂಕಣ್ಣನವರ, ಹನುಮಂತಪ್ಪ ಮಾಗೋಡ, ಶಶಿಧರಸ್ವಾಮಿ ಗೊಲ್ಲರಹಳ್ಳಿಮಠ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. ತಹಶೀಲ್ಧಾರ ಕಚೇರಿಯ ಶಿರಸ್ತೇದಾರ ಶೆಟ್ಟರ ತಹಶೀಲ್ದಾರ ಪರವಾಗಿ ಮನವಿ ಸ್ವೀಕರಿಸಿ ತಮ್ಮ ಬೇಡಿಕೆಯನ್ನು ಸಕರ್ಾರದ ಗಮನಕ್ಕೆ ತರುವ ಭರವಸೆ ನೀಡಿದರು.