ಅರಣ್ಯವಾಸಿಗಳಿಂದ ತಹಶೀಲ್ದಾರರಿಗೆ ಮನವಿ

ಲೋಕದರ್ಶನ ವರದಿ

ಮುಂಡಗೋಡ 23:  ಅತಿಕ್ರಮಣದಾರರಿಗೆ ಆದ ವಂಚನೆ ಮತ್ತು ಅನ್ಯಾಯದ ಕುರಿತು ತಾಲೂಕಿನ ಬೆಡಸಗಾಂವ ಗ್ರಾ.ಪಂ. ವ್ಯಾಪ್ತಿಯ ಕಂಚಿಕೊಪ್ಪ ಮತ್ತು ಅಟಬೈಲ್ ಗ್ರಾಮದ ಗ್ರಾಮಸ್ಥರು ಗುರುವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಕಂಚಿಕೊಪ್ಪ ಮತ್ತು ಅಟಬೈಲ್ ಗ್ರಾಮಗಳಲ್ಲಿ ಅರಣ್ಯ ಅತಿಕ್ರಮಣದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅತಿಕ್ರಮಣ ಜಮೀನು ಮಂಜೂರಿ ಪ್ರಕ್ರಿಯೆಯ ಭಾಗವಾಗಿ 2013ರಲ್ಲಿ ರಚನೆಯಾದ ಕಾನೂನು ರೀತಿಯ ಅರಣ್ಯ ಹಕ್ಕುಗಳ ಸಮಿತಿಗಳ ಮೂಲಕ 2015ರಲ್ಲಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಅಜರ್ಿಗಳನ್ನು ಸಲ್ಲಿಸಲಾಗಿತ್ತು. 

ಉಪ ವಿಭಾಗ ಮಟ್ಟದ ಸಮಿತಿ ಹಾಗೂ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯಿಂದ ಅಜರ್ಿಗಳು ಸಾರಾಸಗಟಾಗಿ ತಿರಸ್ಕೃತಗೊಂಡು ಅತಿಕ್ರಮಣದಾರರಿಗೆ ವಂಚನೆ ಮತ್ತು ಅನ್ಯಾಯ ಆಗಿರುತ್ತದೆ. ಆದ್ದರಿಂದ ಈ ಅನ್ಯಾಯದ ವಿರುದ್ಧ ಸರಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಕಂಚಿಕೊಪ್ಪ ಮತ್ತು ಅಟಬೈಲ್ ಗ್ರಾಮದ ಗ್ರಾಮಸ್ಥರೆಲ್ಲ ಸೇರಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಮತದಾನವನ್ನು ಸಾಮೂಹಿಕವಾಗಿ ಬಹಿಷ್ಕರಿಸಲು ಸವರ್ಾನುಮತದಿಂದ ತೀಮರ್ಾನಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಂಚಿಕೊಪ್ಪ ಮತ್ತು ಅಟಬೈಲ್ ಗ್ರಾಮದ ಗ್ರಾಮಸ್ಥರಾದ ಜಿ.ಎಂ. ವೀರೇಂದ್ರಸ್ವಾಮಿ, ಮಂಜುನಾಥ ನಾಯ್ಕ, ಪ್ರಶಾಂತ ಜೈನ್, ನಾರಾಯಣ ನಾಯ್ಕ, ಗೋವಿಂದ ನಾಯ್ಕ, ದತ್ತಾರಾಮ, ಗುರುಮೂತರ್ಿ ನಾಯ್ಕ, ಪ್ರಕಾಶ ದಾಸರ, ಸಂತೋಷ ದೇವಗಿರಿ, ಪರಮೇಶ್ವರ ನಾಯ್ಕ ರಾಘವೇಂದ್ರ ನಾಯ್ಕ, ಮಹಾಂತೇಶ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು ತಹಸೀಲ್ದಾರ ಅಶೋಕ ಗುರಾಣಿ ಮನವಿ ಸ್ವೀಕರಿಸಿದರು.