ರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಗಳಿಗೆ ಮನವಿ

ಲೋಕದರ್ಶನ ವರದಿ

ಮುಧೋಳ 30 : ನಗರದಲ್ಲಿ ರಮೇಶ ಗಡದನ್ನವರ ವೃತ್ತದಿಂದ ಬಂಡಿವಡ್ಡರ ಪೆಟ್ರೋಲ್ ಪಂಪ್ವರೆಗೆ 19.6 ಮೀಟರ ಅಗಲ ಇರುವ ರಸ್ತೆಯಲ್ಲಿ ಕೇವಲ 12 ಮೀಟರ ರಸ್ತೆ ಅಗಲೀಕರಣವನ್ನು ಡಿ.ಎಮ್.ಎಫ್. ಯೋಜನೆಯಡಿ ಕೈಗೊಂಡಿದ್ದು ಅದನ್ನು ಕನಿಷ್ಠ 15 ಮೀಟರವರೆಗೆ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮುಧೋಳ ನಗರಸಭೆಯ ನೂತನ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಅಪರ್ಿಸಿದರು.

      ನಗರದ ರಮೇಶ ಗಡದನ್ನವರ ವೃತ್ತದಿಂದ ಬಂಡಿವಡ್ಡರ ಪೆಟ್ರೋಲ್ ಪಂಪವರೆಗೆ ರಸ್ತೆ ಕಾಮಗಾರಿಯು ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶಗಳಲ್ಲಿನ ಅಭಿವೃದ್ಧಿಗಾಗಿ ಇರುವ ಡಿ.ಎಮ್.ಎಫ್.ಯೋಜನೆಯಡಿ ಮಂಜೂರಾಗಿದೆ. ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ಇಲ್ಲಿನ ನಾಗರಿಕರಿಗೆ ಇದರಿಂದ ಸ್ವಲ್ಪವಾದರೂ ನೆಮ್ಮದಿ ಖಂಡಿತ ದೊರೆಯುತ್ತದೆ. ಇದು ಜನರಲ್ಲಿ ಒಂದು ಪ್ರಮುಖ ಸಮಸ್ಯೆ ತಲೆದೋರಿದ್ದು ಅದನ್ನು ಸರಿಪಡಿಸುವ ಉದ್ದೇಶದಿಂದ ಮನವಿ ಸಲ್ಲಿಸಲಾಗಿದೆ.

      ರಸ್ತೆಯು ಒಟ್ಟು 19.6 ಮೀಟರ್ ಅಗಲವಿದ್ದು, ಪ್ರಸ್ತುತ ಇದರಲ್ಲಿ ಕೇವಲ 12 ಮೀಟರ್ ರಸ್ತೆಯನ್ನು ಅಗಲೀಕರಣದೊಂದಿಗೆ ಅಭಿವೃದ್ಧಿ ಮಾಡಲು ಮಂಜೂರಾತಿ ನೀಡಲಾಗಿದೆ. ಆದರೆ ಇದರಿಂದ ವಾಹನ ಹಾಗೂ ಪಾದಚಾರಿಗಳಿಗೆ ಕಿರಿಕಿರಿಯಾಗುವ ಸಂಭವ ಹೆಚ್ಚಾಗಿದೆ. ಅದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದಾದ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸದರಿ ರಸ್ತೆಯನ್ನು ಈಗಲೇ ಕನಿಷ್ಠ 15 ಮೀಟರ್ವರೆಗೆ ಅಗಲೀಕರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. 

ಈ ಹಿಂದೆ 2004-05ರಲ್ಲಿ ಬೆಳಗಾವಿಯಿಂದ ವಿಜಯಪುರದವರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯು ಮುಧೋಳ ನಗರದಲ್ಲಿ ಚತಷ್ಪತವಿದ್ಯಾಗ್ಯೂ ಕೆಲವು ಪಟಭದ್ರ ಹಿತಾಸಕ್ತಿಗಳ ಕೈವಾಡದಿಂದ ದ್ವಿಪಥ ರಸ್ತೆಯಾಗಿ ನಿಮರ್ಾಣಗೊಂಡ ಕಾರಣದಿಂದ ಸಾಕಷ್ಟು ಟ್ರಾಫಿಕ್ ಸಮಸ್ಯೆಗಳನ್ನು, ಸಾವು-ನೋವುಗಳನ್ನು ನಿತ್ಯ ಸಾರ್ವಜನಿಕರು ಈವರೆಗೂ ಅನುಭವಿಸುತ್ತಿದ್ದಾರೆ. ಸಾರ್ವಜನಿಕರು, ಶಾಲಾಮಕ್ಕಳು, ಹಿರಿಯ ನಾಗರಿಕರು, ವೃದ್ಧರು ಈ ರಸ್ತೆಯ ಅಕ್ಕಪಕ್ಕದಲ್ಲಿ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಹೋಗುವಂತಹ ಕೆಟ್ಟ ಸ್ಥಿತಿ ನಿಮರ್ಾಣವಾಗಿದೆ. ಅಲ್ಲದೇ ಅಂಬುಲೆನ್ಸ್ಗಳು ಸಹ ಟ್ರಾಫಿಕ್ನಲ್ಲಿ ಹತ್ತು ಹಲವು ಬಾರಿ ಸಿಲುಕಿ ರೋಗಿಗಳಿಗೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

      ನಗರಸಭೆ ಸದಸ್ಯರು ಹಾಗೂ ಪ್ರಮುಖರಾದ ಗುರುಪಾದ ಕುಳಲಿ, ಲಕ್ಷ್ಮೀಬಾಯಿ ಮಾನೆ, ಸುನಂದಾ ತೇಲಿ, ಲಕ್ಷ್ಮೀ ದಾಸರ, ಇಂದ್ರಾಬಾಯಿ ರಜಪೂತ, ಸದಾಶಿವ ಜೋಶಿ, ಸತೀಶ ಗಾಡಿ, ಭೀಮಪ್ಪ ಮೇತ್ರಿ, ಕುಮಾರ ಪಮ್ಮಾರ, ವಿನೋದ ಕಲಾಲ, ಶಾಂತಾ ಮಡಿವಾಳ, ಜುಬೇದಾ, ಯಲ್ಲಪ್ಪ ಅಂಬಿ, ಮೈಬೂಬಸಾಬ ಬಾಗವಾನ, ಪಾರ್ವತೆವ್ವ ಹರಗಿ, ಶಿವಾನಂದ ಡಂಗಿ, ರಾಜೇಸಾಬ ಬೇಪಾರಿ, ಸಂತೋಷ ಪಾತ್ರೋಟ,ಲತಾ ಗಾಯಕವಾಡ, ಬಸವರಾಜ ಮಹಾಲಿಂಗೇಶ್ವರಮಠ, ಕಲ್ಲೊಳ್ಳೆಪ್ಪ ಬಂಡಿವಡ್ಡರ, ಸುನೀಲ ನಿಂಬಾಳಕರ, ಬಸವರಾಜ ದಾಸರ, ಮಲ್ಲಿಕಾಜರ್ುನ ಮಾನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.