ಲೋಕದರ್ಶನ ವರದಿ
ಶಿಗ್ಗಾವಿ02: ತಾಲೂಕಿನ ಹಡಪದ ಅಪ್ಪಣ್ಣ ಸಮಾಜದ ಜಾತಿ ಪ್ರಮಾಣ ಪತ್ರಕ್ಕೆ ಸಂಬಂದಿಸಿದಂತೆ ಗ್ರಾಮಲೆಕ್ಕಾಧಿಕಾರಿಗಳು ನಡೆಸುತ್ತಿರುವ ಒಟಿಸಿ ಸವರ್ೇಯಲ್ಲಿ ಹಡಪದ ಸಮಾಜದ ಜಾತಿ ಪ್ರಮಾಣದಲ್ಲಿ 3ಬಿ ಎಂದು ಕಾಣಿಸುತ್ತಿದ್ದು 2ಎ ಎಂದು ನೀಡಲು ಒತ್ತಾಯಿಸಿ ತಾಲೂಕಾ ತಹಶೀಲ್ದಾರ ಶಿವಾನಂದ ರಾಣೆಯವರಿಗೆ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಶನಿವಾರ ಮನವಿ ಅಪರ್ಿಸಲಾಯಿತು.
ಮನವಿ ಅಪರ್ಿಸಿ ಮಾತನಾಡಿದ ಸಮಾಜದ ತಾಲೂಕಧ್ಯಕ್ಷ ಬಸವರಾಜ ಹಡಪದ, ತಾಲೂಕಿನಲ್ಲಿ ಹಡಪದ ಅಪ್ಪಣ್ಣ ಸಮಾಜದ ತೀರಾ ಹಿಂದುಳಿದ ಮತ್ತು ಬಡತನದಿಂದ ಕೂಡಿದ್ದು ಕ್ಷೌರಿಕ ವೃತ್ತಿಯನ್ನೇ ನಂಬಿ ಕಾರ್ಯ ಮಾಡುವವರ ಜೊತೆಗೆ ವಿವಿಧ ಕಾರ್ಯಗಳನ್ನು ಮಾಡುತ್ತಿರುವ ಹಡಪದ ಸಮಾಜದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಹಳ ಹಿನ್ನೆಡೆಯಾಗುತ್ತಿದೆ, ಹಾಗೇನಾದರೂ ತಮಗೆ ಅನುಮಾನಗಳಿದ್ದರೆ ಸ್ಥಳೀಯವಾಗಿ ಚೌಕಾಸಿ ಮೂಲಕ ದೃಢಪಡಿಸಿಕೊಳ್ಳಲು ಅವಕಾಶವಿದ್ದು ದೃಡ ಪಡಿಸಿಕೊಂಡು ಪ್ರಮಾಣ ಪತ್ರ ನೀಡಲು ಮನವಿ ಮಾಡಿದ್ದಾರೆ.
ಸಮಾಜದ ಉಪಾದ್ಯಕ್ಷ ಮುತ್ತುರಾಜ ಕ್ಷೌರದ, ಜಿಲ್ಲಾ ಸಮೀಟಿ ಸದಸ್ಯರಾದ ಶಿವಕುಮಾರ ಮಡ್ಲಿಕರ, ಮಾಲತೇಶ ಹಡಪದ, ತಾಲೂಕಾ ಖಜಾಂಚಿ ಶಿವರಾಜ ಕ್ಷೌರದ, ವೀರೇಶ ಹಡಪದ, ಶರಣಪ್ಪ ಕ್ಷೌರದ ಸೇರಿದಂತೆ ಇತರರು ಇದ್ದರು.