ನ್ಯಾಸ ರೆಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ಹೊಸಪೇಟೆ 02:ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ನ್ಯಾಸ ರೆಡ್ಡಿ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ವಿಜಯನಗರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲೆ ಘಟಕ ಹಾಗೂ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಹೊಸಪೇಟೆ ಸಹಯೋಗದೊಂದಿಗೆ ಆಯೋಜಿಸಿದ ಭಾರತ ಗಣರಾಜ್ಯೋತ್ಸವ ದಿನಾಚರಣೆ ವಿಜೃಂಭಣೆಯಿಂದ ಜರುಗಿತು.
ಹೊಸಪೇಟೆ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನಾಕರ ಎಂ ವಿರೂಪಾಕ್ಷಯ್ಯ ಸ್ವಾಮಿ ಮಾತನಾಡಿ, ಮಕ್ಕಳೇ ಮುಂದಿನ ಪ್ರಜೆಗಳು ಪೌರರು ಮಕ್ಕಳು ಸಹಬಾಳ್ವೆ ಭಾವೈಕ್ಯತೆ ಮೈಗೂಡಿಸಿಕೊಂಡು ದೇಶ ಪ್ರೇಮಿಗಳಾಗಬೇಕೆಂದು ತಿಳಿ ಹೇಳಿದರು. ವಿಜಯನಗರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೆಂಕಟೇಶ್ ಬಡಿಗೇರ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿವಿಧ ಸಹ ಪಠ್ಯ ಚಟುವಟಿಕೆ ಜೊತೆಗೆ ದೇಶಪ್ರೇಮ ಸಹಬಾಳ್ವೆ ಸೋದರತ್ವ ರಾಷ್ಟ್ರೀಯ ಭಾವೈಕ್ಯತೆ ಜಾತಿ ಧರ್ಮ ಮೀರಿದ ಪ್ರೀತಿ ವಿಶ್ವ ಪಥದತ್ತ ಹೆಜ್ಜೆ. ಮಕ್ಕಳು ದೇವರ ಸ್ವರೂಪ ಅವರ ಬದುಕು ಸುಂದರ ಹೂ ತೋಟದಂತೆ ಇಡೋಣ ಎಂದರು. ಮಕ್ಕಳು ವಿವಿಧ ವೇಷ ಭೂಷಣ ಸ್ವಾತಂತ್ರ ಹೋರಾಟಗಾರರ ವೇಷ ಮನಸೂರಗೊಂಡಿತು. ಹೊಸಪೇಟೆ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವರಾಜ್ , ಮುಖ್ಯ ಶಿಕ್ಷಕರಾದ ಪರಮೇಶ್ವರ ನಾಯಕ್, ವಿದ್ಯಾರ್ಥಿಗಳು ಇದ್ದರು.