ಲೋಕದರ್ಶನ ವರದಿ
ಯಲಬುಗರ್ಾ 18: ಜನೇವರಿ 21 ಸೋಮವಾರದಂದು ನಿಜಶರಣ ಅಂಬಿಗರ ಚೌಡಯ್ಯ ಹಾಗೂ 26 ರಂದು ಅದ್ಧೂರಿ ಗಣರಾಜ್ಯೋತ್ಸವ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸಿಲ್ದಾರ್ ರಮೇಶ ಅಳವಂಡಿಕರ್ ಹೇಳಿದರು.
ಪಟ್ಟಣದ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಕರೆಯಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಗಣರಾಜ್ಯೋತ್ಸವ ದಿನಾಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜ.21 ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಜ.26ರಂದು ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುವುದು. ಜಯಂತಿ ದಿನದಂದು ಪಟ್ಟಣದ ರಸ್ತೆಗಳನ್ನು ಸ್ವಚ್ಛಮಾಡಿ ಪ್ರಮುಖ ವೃತ್ತಗಳಿಗೆ ತಳಿರು_ತೋರಣಗಳಿಂದ ಶೃಂಗರಿಸಿ ವಿವಿಧ ವಾಧ್ಯೆ ಮೇಳಗಳೊಂದಿಗೆ ಭಾವಚಿತ್ರ ಮೆರವಣಿಗೆ ನೆಡೆಸಲಾಗುವುದು.ಇಲಾಖೆಯ ಅಧಿಕಾರಿಗಳು ಎಲ್ಲಾ ಸಕರ್ಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಮಹನೀಯರ ಭಾವಚಿತ್ರಗಳ ಪೂಜೆಯನ್ನು ನೆರವೇರಿಸಿ ಸ.ಪ.ಪೂ.ಕಲೇಜಿನ ಬಯಲುರಂಗ ಮಂದಿರದಲ್ಲಿ ರಾಷ್ರದ್ವಜಾರೋಹಣ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೂಳ್ಳಬೇಕು.
ತಹಸಿಲ್ದಾರ್ ರಮೇಶ ಅಳವಂಡಿಕರ್ ಅಧಿಕಾರಿಗಳಿಗೆ ಎಚ್ಚರಿಕೆ: ತಾಲೂಕ ಪ್ರತಿ ಜಯಂತಿಯ ಪೂರ್ವಭಾವಿ ಸಭೆಗಳಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು ಗೈರಾಗುತ್ತಿದ್ದರಿಂದ ಸಭೆಗೆ ಹಾಜರಾಗದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ತಾಲೂಕಾಡಳಿತದಿಂದ ನೋಟೀಸ್ ನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೂಳ್ಳಲುವುದು ಎಂದು ನೀಡಿದರು.
ಪಲ್ಸ್ ಪೋಲಿಯೋ ಜಾಗೃತಿ ಸಭೆ: ಇದೇ ಸಂದರ್ಭದಲ್ಲಿ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಮಂಜುನಾಥ ಬ್ಯಾಲಬುಣಿಸಿ ಮಾತಾನಾಡಿ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದಂತೆ ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವುಕೊಡಾ ಫೆ.3ರಿಂದ 6ರವರೆಗೆ ತಾಲೂಕ ಮಟ್ಟದ ಪಲ್ಸ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 2ದಿನ ಮುಂಚಿತವಾಗಿ ಡಂಗುರ ಸಾರುವುದಕ್ಕೆ ಎಲ್ಲಾ ಗ್ರಾಮ ಪಂಚಾಯತಿ ಕಾರ್ಯದಶರ್ಿಗಳಿಗೆ ಸೂಚಿಸಿ ಪಲ್ಸ ಪೋಲಿಯೋ ಮುಕ್ತ ತಾಲೂಕನ್ನಾಗಿ ಮಾಡಲು ಇಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರ ಅಗತ್ಯೆ ಎಂದು ಹೇಳಿದರು.
ಸಭೆಯಲ್ಲಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಡಾ.ಗುರಿಕಾರ್, ಪಪಂ ಸದಸ್ಯರಾದ ರೇವಣೆಪ್ಪ ಹಿರೇಕುರಬರ್, ಅಶೋಕ ಅರಕೇರಿ, ಸಿರೆಸ್ತದಾರ ನಾಗಪ್ಪ ಸಜ್ಜನ.ಅಧಿಕಾರಿಗಳಾದ ಎಮ್,ಎನ್, ಮಠಪತಿ, ಬಿಇಓ ಶರಣಪ್ಪ ವಟಗಲ್,ಸಿಡಿಪಿಓ ಶರಣಮ್ಮ, ಎಸ್,ವಿ, ಭಜಂತ್ರಿ.ಯಮನಪ್ಪ ಸುಣ್ಣಗಾರ್, ಕೃಷ್ಣಾ ಜಾಲಗಾರ್, ವೆಂಕಟೇಶ ಜಾಲಗಾರ,ಸುರೇಶ ಬಾರಕೇರ್, ರಾಜಶೇಖರ್ ಶ್ಯಾಗೋಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.