ರೇಣುಕಾಚಾರ್ಯ ಜಯಂತ್ಯೋತ್ಸವ
ಮಹಾಲಿಂಗಪುರ, 12 ; ವೀರಶೈವ ಧರ್ಮ ಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ-ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ವೀರಶೈವ ಧರ್ಮದ ಉತ್ತೇಜನಕ್ಕಾಗಿ ರೇಣುಕಾಚಾರ್ಯರು ಅವತರಿಸಿದ್ದಾರೆ ಎಂದು ಹುನ್ನೂರಿನ ವೇದಮೂರ್ತಿ ವಿಶ್ವನಾಥ ಕೊಣ್ಣೂರಮಠ ಹೇಳಿದರು. ಪಟ್ಟಣದ ಬರಗಿ ಬಡಾವಣೆಯಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡ ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಂಗಮನೇ ಜಗದೋದ್ಧಾರಕ. ಮಕ್ಕಳಿಗೆ ಉತ್ತಮ ಸಂಪ್ರದಾಯ, ಸಂಸ್ಕಾರ ನೀಡಿ ಬೆಳೆಸಬೇಕಿದೆ. ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸಿದರೆ ಅದನ್ನು ಬಸವಣ್ಣನವರು ಮುನ್ನಡೆಸಿದ್ದಾರೆ ಎಂದರು. ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಿ.ಎಂ.ಅಯ್ಯನಗೌಡರ ಮಾತನಾಡಿದರು. ಸಂಘದ ಅಧ್ಯಕ್ಷ ಗುರುಪಾದಯ್ಯ ಛಟ್ಟಿಮಠ ಅಧ್ಯಕ್ಷತೆ ವಹಿಸಿದ್ದರು. ಲೋಕಾಪುರದ ಮಂಜುಳಾ ಸಂಬಾಳಮಠ ಗಾಯನ ಪ್ರಸ್ತುತಪಡಿಸಿದರು. ರೇಣುಕಾಚಾರ್ಯರ ಕುರಿತು ಜಾಹ್ನವಿ ಮಠಪತಿ ಮಾತನಾಡಿದರು. ಸಾನ್ವಿ ಮಠಪತಿ ಭರತನಾಟ್ಯ ಪ್ರದರ್ಶಿಸಿದಳು. ಸಮಾಜದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಮಹಾಲಿಂಗಯ್ಯ ಗು.ಮನ್ನಯ್ಯನವರಮಠ, ಮಹಾದೇವಿ ಹಿರೇಮಠ, ವಿರುಪಾಕ್ಷಯ್ಯ ಪಂಚಕಟ್ಟಿಮಠ, ಬಸವರಾಜ ಹಿಟ್ಟಿನಮಠ, ಸಾಗರ ಮಠದ, ಎಂ.ಆರ್.ಹಿರೇಮಠ, ಎಸ್.ಟಿ.ಮಠಪತಿ, ಗುರುಲಿಂಗಯ್ಯ ಮಠಪತಿ, ಮಹಾಲಿಂಗಯ್ಯ ಸ. ಮನ್ನಯ್ಯನವರಮಠ, ಸದಾಶಿವಯ್ಯ ಹಿರೇಮಠ, ಪವನಕುಮಾರ ಮನ್ನಯ್ಯನವರಮಠ, ಬಸಯ್ಯ ಚಟ್ಟಿಮಠ, ಈರಣ್ಣ ಚಟ್ಟಿಮಠ, ಮಹಾಂತೇಶ ಮನ್ನಯ್ಯನವರಮಠ ಇದ್ದರು. ಸುಧಾರಾಣಿ ಮಠದ ಭಕ್ತಿ ಗೀತೆ ಹಾಡಿದರು. ಶಾಂತಾ ಸಾವಳಗಿಮಠ ಸ್ವಾಗತ ಗೀತೆ ಹಾಡಿದರು. ಶಿವಲೀಲಾ ಗಣಕುಮಾರಮಠ, ಜಯಶ್ರೀ ಮನ್ನಯ್ಯನವರಮಠ ವಿಭೂತಿ ಗೀತೆ ಹಾಡಿದರು. ಚನ್ನಯ್ಯ ಮಸಗುಪ್ಪಿಮಠ ನಿರೂಪಿಸಿದರು. ಮಹಾಲಿಂಗಯ್ಯ ಮಠ ವಂದಿಸಿದರು.