ಬೆಳಗಾವಿ 6: ದಯವೇ ಧರ್ಮದ ಮೂಲವಯ್ಯ ಎಂಬುದರ ಮೂಲಕ ಬಸವಣ್ಣನವರು ಧರ್ಮದ ತಿರುಳನ್ನು ಎತ್ತಿಹಿಡಿದರು. ಅವರದು ಮಾನವಧರ್ಮವಾಗಿತ್ತೆಂದು ಆರ್.ಎಲ್.ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಡಿ.ಯಳಮಲಿ ಹೇಳಿದರು. ಅವರು ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭೆಯು ಆಯೋಜಿಸಿದ್ದ ಅನುಭಾವ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮವು ಮಾನವನ ಕಲ್ಯಾಣಕ್ಕಾಗಿ ಇದೆ. ಸಮಾಜ ಹಾಗೂ ಧರ್ಮಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಕಾಯುವುದೇ ಧರ್ಮದ ಮುಖ್ಯೋದ್ದೇಶವಾಗಿದೆ. ಸಮಾಜವನ್ನು ಧರ್ಮದ ಆಧಾರದಿಂದ ಒಡೆಯದೇ ಸಮನ್ವಯತೆಯನ್ನು ಕಾಪಾಡಿಕೊಂಡು ಹೋಗುವುದು ಅಷ್ಟೇ ಮುಖ್ಯವೆಂದು ಅವರು ಹೇಳಿದರು. ಬಸವಾದಿ ಶರಣರು ಮಾನವ ಕಲ್ಯಾಣಕ್ಕಾಗಿ ವಚನ ಸಾಹಿತ್ಯವನ್ನು ರಚಿಸಿದರು. ಅವರು ಸಾಹಿತ್ಯ ಲೋಕಮಾನ್ಯವೆನಿಸಿದೆ. ಅವುಗಳನ್ನು ನಮ್ಮ ಯುವ ಪೀಳಿಗೆ ಅಭ್ಯಾಸಿಸಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರವಚನ ನೀಡಿದ ಗಂದಿಗವಾಡದ ಮೃತ್ಯುಂಜಯ ಶಾಸ್ತ್ರಿ ಹಿರೇಮಠ 'ಬಸವಣ್ಣನವರ ಒಂದೊಂದು ವಚನದಲ್ಲಿಯೂ ಜೀವನದ ಮೌಲ್ಯಗಳು ಹಾಸುಹೊಕ್ಕಾಗಿವೆ. ಅವುಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳುವುದು ಅಷ್ಟೇ ಅಗತ್ಯ. ನಮ್ಮ ನಡೆ ನುಡಿ ಶುದ್ಧವಾಗಿ ಸಮಾಜವು ಶುದ್ಧವಾಗಿರುತ್ತದೆ. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವುದರ ಮೂಲಕ ನಮ್ಮ ಅಂತರಂಗವನ್ನು ಶುದ್ಧಗೊಳಿಸಿಕೊಳ್ಳಬೇಕಾಗಿದೆ. ಸಹನೆ, ಏಕನಿಷ್ಠೆ, ಸಂಯಮದ ಬದುಕು ಇಂದು ಅಗತ್ಯವಾಗಿದೆ. ಒತ್ತಡದಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಅಸಾಧ್ಯ. ಜೀವನದ ನೂರೆಂಟು ಜಂಜಡಗಳಿಂದ ಹೊರಬಂದು ಸುಂದರ ಬದುಕನ್ನು ಸವಿಯಬೇಕಾಗಿದೆ' ಎಂದು ಹೇಳಿದರು.
ಖ್ಯಾತ ವೈದ್ಯರಾದ ಡಾ.ಎಚ್.ಬಿ.ರಾಜಶೇಖರ ಅವರು ಮಾತನಾಡಿ, ನಮ್ಮ ಬದುಕಿಗೆ ಅಗತ್ಯವಾದುದನ್ನು ಮಾತ್ರ ನಾವು ಸಂಪಾದಿಸಬೇಕು. ಅದರಲ್ಲಿಯೂ ಆರೋಗ್ಯವು ಒಂದಾಗಿದೆ. ಶರಣರ ವಚನಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದು ಹೇರಳವಾಗಿದೆ. ಬಹಿಮರ್ುಖಿಯಾಗುವುದಕ್ಕಿಂತ ಅಂತಮರ್ುಖಿಯಾಗಿ ಜೀವನದ ಆಶಯವನ್ನು ಸಂಪಾದಿಸಿಕೊಳ್ಳುವುದು ಇಂದಿನ ಅಗತ್ಯವೆನಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆರ್ಟಿಓ ಅಧಿಕಾರಿಗಳಾದ ಶಿವಾನಂದ ಮಗದುಮ್ಮ ಅವರು ಮಾತನಾಡಿ, 'ಇಂದು ವೀರಶೈವ ಲಿಂಗಾಯತ ಸಮಾಜದ ತನ್ನ ಮೂಲ ಧ್ಯೇಯವನ್ನು ಮರೆದು ಹರಿದುಹಂಚಿ ಹೋಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಸಮಾಜ ಸಂಘಟನೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಮಹಾಸಭೆ ಅಧ್ಯಕ್ಷರಾದ ವಾಯ್.ಎಸ್.ಪಾಟೀಲ, ಕಲ್ಯಾಣರಾವ್ ಮುಚಳಂಬಿ, ಡಾ.ಸಿದ್ದನಗೌಡ ಪಾಟೀಲ, ಜಾವೂರ, ತರಗಾರ, ರತ್ನಪ್ರಭಾ ಬೆಲ್ಲದ, ಡಾ.ಗುರುದೇವಿ ಹುಲೆಪ್ಪನವರಮಠ ಮೊದಲಾದವರು ಉಪಸ್ಥಿತರಿದ್ದರು. ಆಶಾ ಯಮಕನಮರಡಿ ನಿರೂಪಿಸಿದರು. ವಿ.ಕೆ.ಪಾಟೀಲ ವಂದಿಸಿದರು. ನಂತರ ನಮ್ರತಾ ಜಾಗೀರದಾರ್ ಹಾಗೂ ಸಂಗಡಿಗರಿಂದ ವಚನ ಸಂಭ್ರಮ ಕಾರ್ಯಕ್ರಮ ಜರುಗಿತು.
ಬೆಳಗಾವಿಯ ವಿಜಯನಗರದ ಲೋಮ್ಯಾಕ್ಸ್ ವೃದ್ಧಾಶ್ರಮದಲ್ಲಿ ಇಂದು ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಬಸವ ಜಯಂತಿ ನಿಮಿತ್ತ ಹಣ್ಣುಹಂಪಲ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಹಾಸಭಾ ಅಧ್ಯಕ್ಷರಾದ ವಾಯ್.ಎಸ್.ಪಾಟೀಲ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ರಮೇಶ ಕಳಸಣ್ಣನವರ, ಆರ್.ಪಿ.ಪಾಟೀಲ, ಆಶಾ ಯಮಕನಮರಡಿ ಹಲವಾರು ಗಣ್ಯರು ಉಪಸ್ಥಿತರಿದ್ದರು.