ಲೋಕದರ್ಶನ ವರದಿ
ತಾಳಿಕೋಟೆ 13: ಮುಸ್ಲೀಂ ಸಮಾಜದ ಆಸ್ತಿಗಳನ್ನು ವಕ್ಫ್ ಸಮಿತಿಯಲ್ಲಿ ನೊಂದಾಯಿಸದೆ ಇರುವದರಿದರಿಂದ ಎಷ್ಟೋ ಆಸ್ತಿಗಳು ಬೇರೆಯವರ ಪಾಲಾಗಿದೆ ಇದರಿಂದ ಸಮುದಾಯಕ್ಕೆ ಭಾರಿ ನಷ್ಟವಾಗಿದೆ ಎಂದು ಜಿಲ್ಲಾ ವಕ್ಪ ಉಪಾಧ್ಯಕ್ಷ ಸೈಯದ ಶಕೀಲಅಹ್ಮದ್ ಖಾಜಿ ತಿಳಿಸಿದರು.
ತಾಳಿಕೋಟೆ ಪಟ್ಟದ ಈದ್ಗಾ ಶಾದಿ ಮಹಲ್ನಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ವಿಜಯಪುರ ಹಾಗೂ ಈದ್ಗಾ ಶಾದಿ ಮಹಲ್ ಶಾಪಿಂಗ್ ಕಾಂಪ್ಲೆಕ್ಸ್ ಕಮೀಟಿ ತಾಳಿಕೋಟೆ ಇವರ ಸಹಯೋಗದಲ್ಲಿ ಆಯೋಜಿಸಿದ 'ವಕ್ಫ್ ಆಸ್ತಿಗಳ ಸಂರಕ್ಷಣೆ ಜಾಗೃತಾ ಸಮಾವೇಶ'ದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಗ್ರಾಮೀಣ ಭಾಗದಲ್ಲಿರವ ಮುಸ್ಲೀಂ ಸಮಾಜದ ಬಾಂಧವರು ವಕ್ಫ್ ಸಮಿತಿಯ ಸರಿಯಾದ ಪರಿಚಯ ಇಲ್ಲದ ಕಾರಣ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವರಿಗೆ ವಕ್ಫ್ ಕುರಿತು ಸರಿಯಾದ ಮಾಹಿತಿ ನೀಡುವುದೇ ಈ ಸಮಾವೇಶದ ಉದ್ದೇಶವಾಗಿದೆ ಎಂದರು.
ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಉಸ್ಮಾನ ಪಟೇಲ ಮಾತನಾಡಿ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ವ್ಯಾಪ್ತಿಗೆ ಒಳಪಡುವ ಸುಮಾರು 1.65 ಲಕ್ಷ ಎಕರೆ ಜಮೀನು ಇದೆ ಆದರೆ ಈಗ ವಕ್ಪ್ ಬಳಿ ಇರುವುದು ಕೇವಲ 25 ಸಾವಿರ ಮಾತ್ರ ಯಾವ ರೀತಿಯಾಗಿ ವಕ್ಫ್ ಆಸ್ತಿಗಳು ಹಾಳಾಗುತ್ತಿವೆ ಎಂದು ಮುಸ್ಲೀಂ ಸಮಾಜ ಇಂದು ಗಂಭೀರವಾಗಿ ಚಿಂತಿಸುವ ಅಗತ್ಯ ಇದೆ. ಜಿಲ್ಲೆಯಲ್ಲಿ ವಕ್ಫ್ ಸಮಿತಿ 1965 ರಲ್ಲಿಯೇ ಅಸ್ತಿತ್ವಕ್ಕೆ ಬಂದಿದೆಯಾದರೂ ಹಿಂದಿನ ಅವಧಿಯಲ್ಲಿ ಸಾಕಷ್ಟು ಕೆಲಸ ಆಗದಿರುವುದು ನೋವಿನ ಸಂಗತಿ ನನ್ನ ಅವಧಿ ಇರುವವರೆಗೂ ನಾನು ವಕ್ಫ್ ಆಸ್ತಿಗಳನ್ನು ರಕ್ಷಿಸುವದರ ಜೊತೆಗೆ ಗ್ರಾಮೀಣ ಭಾಗದ ಜನರ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ಈದ್ಗಾ ಕಮೀಟಿ ಉಪಾಧ್ಯಕ್ಷ ಅಬ್ದುಲ್ರಜಾಕ ಮನಗೂಳಿ ಹಿರಿಯ ಮುಖಂಡ ಮಾಗಿ ಮಾತನಾಡಿದರು.
ಈದ್ಗಾ ಕಮೀಟಿ ಅಧ್ಯಕ್ಷ ಖಾಜಾಹುಸೇನ ಡೋಣಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ರಹೆಮಾನ ಎಕೀನ, ವಕ್ಪ್ ಸಮೀತಿ ಉಪಾಧ್ಯಕ್ಷ ಖ್ವಾಜಾ ಬಂದೇನವಾಜ ಸಾಂಗಲೀಕರ್, ಸದಸ್ಯರಾದ ಅಕ್ಬರ್ ನಾಯಕ, ಅಲ್ಲಾಭಕ್ಷ ಉಕ್ಕಲಿ, ಮೌಲಾನಾ ಇಸ್ಹಾಕ್ಸಾಕ ಉಮ್ರಿ, ಅಂಜುಮನ್ ಇಸ್ಲಾಂ ಕಮೀಟಿ ಮುದ್ದೇಬಿಹಾಳ ಅಧ್ಯಕ್ಷ ಎ.ಎ.ನಾಯ್ಕೋಡಿ ಮೊದಲಾದವರು ಇದ್ದರು. ಈದ್ಗಾ ಕಮೀಟಿ ಕಾರ್ಯದಶರ್ಿ ಎ.ಡಿ.ಎಕೀನ ಸ್ವಾಗತಿಸಿದರು. ಅಬ್ದುಲಗನಿ ಮಕಾನದಾರ ನಿರೂಪಿಸಿ ವಂದಿಸಿದರು.