ರೈಲ್ವೆ ಮಾರ್ಗ, ಮುಂಡರಗಿ ಆಶ್ರಯ ನಿರ್ಗತಿಕರಿಗೆ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ವಸತಿ ನಿರ್ಮಾಣ ಮಾಡಿ ಕೊಡುವ ಬಗ್ಗೆ
ಗದಗ:06 ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ, ಮುಂಡರಗಿ ಆಶ್ರಯ ನಿರ್ಗತಿಕರಿಗೆ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ವಸತಿ ನಿರ್ಮಾಣ ಮಾಡಿ ಕೊಡುವ ಬಗ್ಗೆ, ಕೊಪ್ಪಳ-ಮುಂಡರಗಿ ಶಿಗ್ಗಾಂವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಪ್ರಾರಂಭಿಸಬೇಕು, ಮುಂಡರಗಿ ಅಂಚೆ ಕಛೇರಿ ಜಾಗೆಯಲ್ಲಿ ಹೊಸ ಅಂಚೆ ಕಛೇರಿ ಕಟ್ಟಡ ನಿರ್ಮಾಣ, ಮುಂಡರಗಿ ತಾಲೂಕ ವಿಧಾನಸಭಾ ಮತಕ್ಷೇತ್ರವೆಂದು ಘೋಷಣೆ ಮಾಡಬೇಕು, ಮುಂಡರಗಿ ಪಟ್ಟಣಕ್ಕೆ ಕಾನೂನು ಮಹಾವಿದ್ಯಾಲಯವನ್ನ ಮಂಜೂರು ಮಾಡಬೇಕು,ಮುಂಡರಗಿ ಪಟ್ಟಣಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು, ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂ ಗೊಳಿಸಬೇಕು, ಪಿಟಿಸಿಎಲ್ ಕಾಯ್ದೆ 1978 ಪುನರ್ ಸ್ಥಾಪನೆ ಆಗಬೇಕು, ಬಗರ ಹುಕುಂ ಹಕ್ಕು ಪತ್ರ ಹಂಚಿಕೆ ಮಾಡಬೇಕು, ಗದಗ ಜಿಲ್ಲೆಯ ಕಪ್ಪತ ಹಿಲ್ಸ್ ಸಂರಕ್ಷಣೆ ಹಾಗೂ ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡಬೇಕು, ಮುಂಡರಗಿ ತಾಲೂಕ ತಾಮ್ರಗುಂಡಿ ಗ್ರಾಮದ ಸಣ್ಣ ನೀರಾವರಿ ಕೆರೆ ಒಡ್ಡು ಒಡೆದು ಹಾಳಾದ ರೈತ ಜಮೀನುಗಳಿಗೆ ಪರಿಹಾರ ಮಂಜೂರು ಮಾಡಬೇಕು, ಅತಿವೃಷ್ಟಿ ಅನವೃಷ್ಟಿಗೆ ಒಳಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ಇತರೆ ಬೇಡಿಕೆಗಳ ಆಗ್ರಹವಿದೆ ಎಂದು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ಯಲ್ಲಪ್ಪ ನವಲಗುಂದ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಂಡರಗಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಹಾಗೂ ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ರಿ) ಮುಂಡರಗಿ,ದಲಿತ ಚಳುವಳಿಗಾರರು, ಡಾಽಽ ಬಿ.ಆರ್.ಅಂಬೆಡ್ಕರ್ ಅಭಿಮಾನಿ ಬಳಗದ ಚಳುವಳಿಗಾರರು,ರೈತ ಚಳುವಳಿಗಾರರು, ಕನ್ನಡ ಸಂಘಟನೆ ಚಳುವಳಿಗಾರರು, ರೈತ ಪರ ಚಳುವಳಿಗಾರರು ರೈಲ್ವೆ ಚಳುವಳಿಗಾರರು, ಕಾರ್ಮಿಕ ಚಳುವಳಿಗಾರರು, ಕಟ್ಟಡ ಕಾರ್ಮಿಕ ಚಳುವಳಿಗಾರರು ಸಾಹಿತಿಗಳು, ವರ್ತಕರು, ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರು, ಮಾದ್ಯಮ ಮಿತ್ರರು, ಕನ್ನಡ ಭಾಷೆ ಚಳುವಳಿಗಾರರು, ಕನ್ನಡ ಗಡಿ ರಕ್ಷಣಾ ಚಳುವಳಿಗಾರರು, ವಿವಿಧ ಪ್ರಗತಿಪರ ಸಂಘಟನೆಗಳು, ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲಿಸಬೇಕು.ಬಂಧುಗಳೇ, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆಬ್ರುವರಿ 12 2025 ರಂದು ಗದಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನಿರ್ದಿಷ್ಟ ಅವಧಿವರೆಗೂ ಧರಣಿ ಸತ್ಯಾಗ್ರಹ ಮಾಡಲಾಗುವುದಾಗಿ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ತಿಳಿಸಿದರು. ಪತ್ರಿಕಾ ಗೋಷ್ಠಿ ವೇಳೆ ಶಂಕರ ಜಯನಗೌಡ,ಶಿವಯೋಗಯ್ಯ ಶಶಿಮಠ, ಬಸವರಾಜ ವಡ್ಡರ, ಬಸಪ್ಪ ತಿ ವಡ್ಡರ, ಮಂಜುನಾಥ ಎಂ ವಡ್ಡರ,ರಿಯಾಜ ಹೊಸಪೇಟ ಸೇರಿದಂತೆ ಇತರರಿದ್ದರು.