ಸಫಾಯಿ ಕರ್ಮಚಾರಿಗಳ ಬಾಹ್ಯಗುತ್ತಿಗೆ ಪದ್ಧತಿ ರದ್ಧತಿಗೆ ಶಿಫಾರಸ್ಸು: ಹಿರೇಮನಿ

ಧಾರವಾಡ  27; ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಸಫಾಯಿ ಕರ್ಮಚಾರಿಗಳನ್ನು ಬಾಹ್ಯಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವ ಪರಿಪಾಠವನ್ನು ಕೈಬಿಡಲು ರಾಜ್ಯ ಸರಕಾರಕ್ಕೆ ಕೋರಲಾಗಿದೆ. ಶೀಘ್ರದಲ್ಲಿಯೇ ಈ  ಪದ್ಧತಿ ಕೊನೆಗೊಂಡು ಸರಕಾರದಿಂದಲೇ ವೇತನ ಪಾವತಿಸುವ ಪದ್ಧತಿ ಜಾರಿಗೆ ಬರಲಿದೆ. ಈಗಾಗಲೇ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಈ ಪದ್ಧತಿ ಕಾರ್ಯರೂಪಕ್ಕೆ ಬಂದಿದೆ. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿಯೂ ಬರುವ ತಿಂಗಳಿನಿಂದ ಅನುಷ್ಠಾನಕ್ಕೆ ಬರಲಿದೆ. ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ,ವಸತಿ,ಶಿಕ್ಷಣ ಅವರ ಅವಲಂಬಿತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡುವ ಕಾರ್ಯ ನಡೆದಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ ಹಿರೇಮನಿ ಹೇಳಿದರು.

ಕನರ್ಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿಂದು ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ನಗರ,ಪಟ್ಟಣ ಹಾಗೂ ಗ್ರಾಮಗಳ ಸ್ವಚ್ಛತೆಗೆ ದುಡಿಯುವ ಸಫಾಯಿ ಕರ್ಮಚಾರಿಗಳ ಜೀವನ ಸ್ಥಿತಿಗತಿಗಳು ಚಿಂತಾಜನಕವಾಗಿವೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗವು ಭಾರತ ಸಕರ್ಾರ ಹಾಗೂ ಎಲ್ಲ ರಾಜ್ಯ ಸರಕಾರಗಳೊಂದಿಗೆ ಸಮನ್ವಯ ಸಾಧಿಸಿ ಸುಧಾರಣೆಗೆ ಶ್ರಮಿಸುತ್ತಿದೆ. ಕನರ್ಾಟಕ ರಾಜ್ಯದಲ್ಲಿ ಸುಮಾರು 45 ರಿಂದ 50 ಸಾವಿರ ಸಫಾಯಿ ಕಾಮರ್ಿಕರು ವಿವಿಧ ಸರಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. ರಾಜ್ಯ ಸರಕಾರವು ಈಗಾಗಲೇ 13 ಸಾವಿರ ನೌಕರರನ್ನು ಖಾಯಂಗೊಳಿಸಿದೆ.ಉಳಿದವರ ನೇಮಕಾತಿ ಪ್ರಕ್ರಿಯೆ ಬರುವ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಗುತ್ತಿಗೆದಾರರಿಂದ ಕರ್ಮಚಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳು ಆಯೋಗದ ಗಮನಕ್ಕೆ ಬಂದಿವೆ.ಗುತ್ತಿಗೆ ಪದ್ಧತಿ ನಿಮರ್ೂಲನೆ ಮಾಡಿ,ಅವರ ಸೇವೆ ಖಾಯಂಗೊಳಿಸಲು ಕೇಂದ್ರ ಸರಕಾರದಿಂದಲೂ ಅನುದಾನ ದೊರಕಿಸಿಕೊಡಲಾಗುವದು.

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಗುತ್ತಿಗೆದಾರರು 28 ಸಾವಿರ ಸಫಾಯಿ ಕರ್ಮಚಾರಿಗಳ ಸಂಖ್ಯೆ ತೋರಿಸಿ ಎಲ್ಲರ ವೇತನ ಪಡೆಯುತ್ತಿದ್ದರು.ಆಯೋಗವು ಮುತುವಜರ್ಿವಹಿಸಿ ಎಲ್ಲ ಕರ್ಮಚಾರಿಗಳಿಗೆ ಗುರುತಿನ ಚೀಟಿ,ಆಧಾರ ಕಾರ್ಡ ಸಂಪರ್ಕ ಹಾಗೂ ವೇತನ ಪತ್ರ ವಿತರಣೆ ಸೌಲಭ್ಯ ಕಲ್ಪಿಸಿದಾಗ.ವಾಸ್ತವವಾಗಿ 16 ಸಾವಿರ ಸಫಾಯಿ ಕರ್ಮಚಾರಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವ ಅಂಶ ಬೆಳಕಿಗೆ ಬಂದಿತು.ಉಳಿದ ನೌಕರರ ಹೆಸರುಗಳು ಬೇನಾಮಿ ಮತ್ತು ನಕಲಿಯಾಗಿದ್ದವು ಈ ಪ್ರಕರಣವನ್ನು ಎಸಿಬಿ ಬದಲಿಗೆ ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ.

ಹುಬ್ಬಳ್ಳಿಯ ಕಿಮ್ಸ್, ವಾಕರಸಾಸಂ ಹಾಗೂ ಧಾರವಾಡ ಕನರ್ಾಟಕ ವಿವಿಯಲ್ಲಿ ಸಭೆ ನಡೆಸಿ ಅಲ್ಲಿನ ಸಫಾಯಿ ಕರ್ಮಚಾರಿಗಳ ಅಹವಾಲು ಆಲಿಸಿ ಪರಿಹಾರ ಒದಗಿಸಲು ಸಮಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಗದೀಶ ಹಿರೇಮನಿ ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದರ್ೇಶಕ ಎನ್.ಮುನಿರಾಜು ಮತ್ತಿತರರು ಇದ್ದರು.