ಸಂತ್ರಸ್ತರಿಗೆ ಹೊಸ ಮನೆ ನಿರ್ಮಿಸಲು ಸಿದ್ಧ: ಪಾಟೀಲ

ಲೋಕದರ್ಶನ ವರದಿ

ಕಾಗವಾಡ: ಕೃಷ್ಣಾ ನದಿಗೆ ಮಹಾಪೂರದ ನೀರು ನುಗ್ಗಿ ಅನೇಕ ಕುಟುಂಬಗಳ ಸಂಸಾರ ಬೀದಿಪಾಲವಾಗಿದೆ. ಇದು ಪ್ರಕೃತಿವಿಕೋಪ ಇದನ್ನು ಎಲ್ಲರು ಘಟ್ಟಿಯಾಗಿ ಎದುರಿಸೋಣ. ಸರಕಾರದಿಂದ ಬರುವ ಎಲ್ಲ ಅನುದಾನಗಳು ಹೊಸ ಮನೆಗಳು ನಿರ್ಮಿಸು ವ ವ್ಯವಸ್ಥೆ ನಾವು ನೀಡಲು ಸಿದ್ಧರಿದ್ದೇವೆ ಎಂದು ಶ್ರೀಮಂತ ಪಾಟೀಲ ಫೌಂಡೇಶನದ ಆಧ್ಯಕ್ಷರು, ಅಥಣಿ ಫಾರ್ಮರ್ಸ್  ಸಕ್ಕರೆ ಕಾರ್ಖಾ ನೆಯ ಎಂ.ಡಿ. ಶ್ರೀನಿವಾಸ ಶ್ರೀಮಂತ ಪಾಟೀಲ ಜುಗೂಳದಲ್ಲಿ ಹೇಳಿದರು.

  ಸೋಮವಾರ ರಂದು ಜುಗೂಳ ಗ್ರಾಮಕ್ಕೆ ಭೇಟಿನೀಡಿ ನದಿ ನೀರು ನುಗ್ಗಿ ಆಗಿರುವ ಹಾನಿ ವೀಕ್ಷಿಸಿದರು. ನೂರಾರು ಮನೆಗಳು ನೀರಿನಲ್ಲಿ ಉರುಳಿದ್ದು, ಆಸ್ತಿ-ಪಾಸ್ತಿ ನೀರಿನಲ್ಲಿ ಕೊಚ್ಚಿಕೊಂಡಿ ಹೋಗಿದೆ. ಈ ಕುಟುಂಬಗಳಿಗೆ ಧೈರ್ಯ ನೀಡುವುದು ಅವಶ್ಯಕತೆಯಿದೆ ಎಂದು ಶ್ರೀನಿವಾಸ ಪಾಟೀಲ ಹೇಳಿದರು.

  ಜುಗೂಳ ಗ್ರಾಮದ ಕುಟುಂಬಗಳಿಗೆ ಸರಕಾರದಿಂದ ಮಂಜೂರುಗೊಂಡ ಚೇಕ್ ಹಂಚಿದರು. ಈಗಾಗಲೇ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ನದಿ ಪ್ರವಾಹ ಪ್ರಾರಂಭವಾದ ಬಳಿಕ ನಿರಂತರವಾಗಿ ಅವರಿಗೆ ಅವಶ್ಯಕತೆಯಿರುವ ಉಡುಪಗಳು, ಪರಿಹಾರ ಕೀಟ್, ಊಟದ ವ್ಯವಸ್ಥೆ ಸತತವಾಗಿ ನೀಡಲಾಗಿದೆ. 

  ಈ ಮುಂದೆಯೂ ನಿಮ್ಮೊಂದಿಗೆ ಸದಾಯಿರುತ್ತೇವೆ. ನೀವು ಧೈರ್ಯ ಕಳೆದುಕೊಳ್ಳದೆ, ಘಟ್ಟಿಯಾಗಿ ಇರರ್ಿ ಎಂದು ಧೈರ್ಯ ತುಂಬಿದರು.

  ಅವರೊಂದಿಗೆ ಜುಗೂಳ ಗ್ರಾಮ ಪಂಚಾಯತಿ ಆಧ್ಯಕ್ಷ ಸಂಜಯ ಮಿಣಚೆ, ಅರುಣ ಗಣೇಶವಾಡಿ, ಸರದಾರ ಅತ್ತಾರ, ಸೇರಿದಂತೆ ಅನೇಕರು ಇದ್ದರು.