ಜಮಖಂಡಿ ವಿಧಾನಸಭಾ ಉಪ ಚುನಾವಣೆಗೆ ಸಕಲ ಸಿದ್ಧತೆ

ಬಾಗಲಕೋಟೆ: ಜಮಖಂಡಿ ಮತಕ್ಷೇತ್ರದಲ್ಲಿ ತೆರವಾದ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಮಖಂಡಿ ಮತಕ್ಷೇತ್ರದಲ್ಲಿ ಒಟ್ಟು 7 ಅಭ್ಯಥರ್ಿಗಳು ಚುನಾವಣಾ ಕಣದಲ್ಲಿ ಇದ್ದಾರೆ. ಈ ಕ್ಷೇತ್ರದಲ್ಲಿ 102009 ಪುರುಷರು, 101370 ಮಹಿಳೆಯರು, 6 ಇತರೆ ಹಾಗೂ 316 ಗಂಡು, 5 ಮಹಿಳಾ ಸೇವಾ ಮತದಾರರು ಮತ ಚಲಾಯಿಸಲಿದ್ದಾರೆ. ಈ ಉಪ ಚುನಾವಣೆಗೆ ಒಟ್ಟು 222 ಮುಖ್ಯ ಮತಗಟ್ಟೆಗಳು ಇದ್ದು, ಗ್ರಾಮೀಣ ಪ್ರದೇಶದಲ್ಲಿ 1300 ಮತದಾರರಕ್ಕಿಂತ ಹೆಚ್ಚಿಗೆ ಇರುವ ಮತದಾರರು ಹಾಗೂ ನಗರ ಪ್ರದೇಶದಲ್ಲಿ 1400 ಮತದಾರರಕ್ಕಿಂತ ಹೆಚ್ಚಿಗೆ ಮತಗಟ್ಟೆಗಳಲ್ಲಿ ಒಂದು ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 1 ಗ್ರಾಮೀಣ ಹಾಗೂ 3 ನಗರ ಒಟ್ಟು 4 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಿರುವದರಿಂದ ಒಟ್ಟಾರೆಯಾಗಿ 226 ಮತಗಟ್ಟೆಗಳು ಇವೆ ಎಂದರು.

ಚುನಾವಣಾ ಕಾರ್ಯಕ್ಕೆ ಬೇರೆ ತಾಲುಕಿನ ಸಿಬ್ಬಂದಿಗಲು ನೇಮಕ ಮಾಡಲಾಗಿದೆ. ಬಾಗಲಕೊಟೆ 137, ಮುಧೋಳ 818 ಹಾಗೂ ಬೀಳಗಿ 450 ಸಿಬ್ಬಂದಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಅಂಗವೈಕಲ್ಯ ಹೊಂದಿರುವ ಮತಗಟ್ಟೆ ಅಧಿಕಾರಿಗಳು ಇರುವ 5 ಸಿಬ್ಬಂದಿಗಳನ್ನು ಹಾಗೂ ಪಿಂಕ್ ಮತಗಟ್ಟೆಗೆ 10 ಮಹಿಳಾ ಸಿಬ್ಬಂದಿಗಳು ಅಂದರೆ 15 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ನೇಮಿಸಿದೆ. ಮತಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಮತಗಟ್ಟೆಗಳ ಮತಗಟ್ಟೆ ಅಧಿಕಾರಿಗಳ (ಬಿ.ಎಲ್.ಓ) ಸಭೆಯನ್ನು ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸಭೆ ಜರುಗಿಸಿ ಮತದಾರರಿಗೆ ಚುನಾವಣಾ ಆಯೋಗದಿಂದ ಬಂದ ಮತದಾರರ ಪೋಟೊ ಸಹಿತ ಗುರುತಿನ ಚೀಟಿಯನ್ನು ಅಕ್ಟೋಬರ 27ರ ಒಳಗಾಗಿ ಸಂಪೂರ್ಣವಾಗಿ ಮನೆ ಮನೆಗೆ ತೆರಳಿ ತಲುಪಿಸುವಂತೆ ತಿಳಿಸಲಾಗಿದ್ದು, ಒಟ್ಟು 203385ರ ಪೈಕಿ 193000 ಮತದಾರರ ಚೀಟಿಗಳನ್ನು ವಿತರಿಸಲಾಗಿದೆ ಎಂದರು.

ಮತಗಟ್ಟೆ ಸಿಬ್ಬಂದಿಗಳನ್ನು ಸಂಬಂಧಿಸಿದ ಮತಗಟ್ಟೆಗಳಿಗೆ ರವಾನಿಸಲು ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಸ್ಥಳವನ್ನು ಜಿ.ಜಿ. ಕಾಲೇಜ್ ಜಮಖಂಡಿ ಗುರುತಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗಳು ಪ್ರಸ್ತುತ ಸ್ಥಳದಲ್ಲಿ ಬೆಳಗ್ಗೆ 8-00 ಗಂಟೆಗೆ ಹಾಜರಿರಲು ಸೂಚಿಸಿದೆ. ನವೆಂಬರ 3 ರಂದು ಜಮಖಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸಕರ್ಾರಿ ಕಚೇರಿಗಳ, ಶಾಲಾ ಕಾಲೇಜು(ಅನುದಾನಿತ ಶಿಕ್ಷಣ ಸಂಸ್ಥೆಗಳ ಒಳಗೊಂಡಂತೆ)ಗಳ ಸರಕಾರಿ ನೌಕರರಿಗೆ ಮಾನ್ಯ ಸರಕಾದ ಅಧೀನ ಕಾರ್ಯದಶರ್ಿ, ಸಿಆಸುಇ ಇಲಾಖೆ(ರಾಜ್ಯ ಶಿಷ್ಠಾಚಾರ-1) ಬೆಂಗಳೂರು ಇವರ ಆದೇಶದನ್ವಯ ರಜೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

ನವೆಂಬರ 3 ರಂದು ಜರುಗುವ ಮತದಾನ ದಿನದಂದು ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಿದ್ದಾಪೂರ, ಸಾವಳಗಿ, ಕವಟಗಿ, ಶೂರಪಾಲಿ, ನಾಗನೂರ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆಯನ್ನು ಬೆಳಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ನಿಷೇಧಿಸಿ ಆದೇಶಿಸಿದೆ. ಜಮಖಂಡಿ ಮತಕ್ಷೇತ್ರದಾದ್ಯಂತ 05 ವ್ಯಕ್ತಿಗಳಿಗಿಂತ ಹೆಚ್ಚಿನ ಜನರು ಜೊತೆಗೂಡಿ/ಗುಂಪಾಗಿ ಸಂಚರಿಸುವಂತಿಲ್ಲ. ರಾಜಕೀಯ ಪಕ್ಷಗಳು/ಅಭ್ಯಥರ್ಿಗಳು/ಬೆಂಬಲಿಗರು ಚುನಾವಣೆಯಲ್ಲಿ ಗೆದ್ದ ಅಭ್ಯಥರ್ಿಗಳ ಪರ ವಿಜಯೋತ್ಸವ/ಮೆರವಣಿಗೆ ಆಚರಿಸುವಂತಿಲ್ಲ. ಸಾರ್ವಜನಿಕ ಸಭೆ ನಡೆಸುವದು, ಸಿಡಿಮದ್ದು ಸುಡುವದು ಮಾಡುವಂತಿಲ್ಲ. ಶಾಂತತೆಗೆ ಭಂಗ ಉಂಟು ಮಾಡುವದು, ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ತರುವದು ಹಾಗೂ ಇತರೆ ಅಹಿತಕರ ಘಟಣೆ ಜರುಗದಂತೆ ದಿನಾಂಕ:-06/11/2018ರ ಬೆಳಗ್ಗೆ 06-00 ಗಂಟೆಯಿಂದ ದಿನಾಂಕ:-08/11/2018ರ ಬೆಳಗ್ಗೆ 06-00 ಗಂಟೆಯವರೆಗೆ ಸಿ.ಆರ.ಪಿ.ಸಿ 1973ರ ಕಲಂ 144 ನ್ನು ಜ್ಯಾರಿ ಮಾಡಲಾಗಿದೆ. 

ನವೆಂಬರ 3 ರಂದು ಜರುಗುವ ಮತದಾನ ಪ್ರಯುಕ್ತ ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ನವೆಂಬರ 1ರ ಸಾಯಂಕಾಲ 6-00 ಗಂಟೆಯಿಂದ ನವೆಂಬರ 4ರ ಬೆಳಗ್ಗೆ 6-00 ಗಂಟೆಯವರೆಗೆ ಹಾಗೂ ನವೆಂಬರ 6 ರಂದು ಜರುಗುವ ಮತ ಎಣಿಕೆ ಕಾರ್ಯದ ಪ್ರಯುಕ್ತ ನವೆಂಬರ 5ರ ಸಾಯಂಕಾಲ 6-00 ಗಂಟೆಯಿಂದ ನವೆಂಬರ 7ರ ಬೆಳಗ್ಗೆ 6-00 ಗಂಟೆಯವರೆಗೆ ಬೀರ, ಬ್ರ್ಯಾಂಡಿ ಹಾಗೂ ಐ.ಎಂ.ಎಲ್ ಲಿಕ್ಕರ್ ಮಾರಾಟ ಸಂಗ್ರಹಣೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಜಿ.ಪಂ ಸಿಇಒ ಗಂಗೂಬಾಯಿ ಮಾನಕರ, ಜಿ.ಪಂ ಉಪಕಾರ್ಯದಶರ್ಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಎಚ್.ಜಯ ಉಪಸ್ಥಿತರಿದ್ದರು.