ಲೋಕದರ್ಶನ ವರದಿ
ಹೂವಿನಹಡಗಲಿ : ಬ್ರಿಟಿಷರ ವಿರುದ್ಧ ಸಮರ ಸಾರಿ ಹೋರಾಟ ಮಾಡಿದ ದೇಶದ ಮೊದಲ ವೀರಮಹಿಳೆ ರಾಣಿ ಕಿತ್ತೂರು ಚನ್ನಮ್ಮರನ್ನು ಸಕರ್ಾರ ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚನ್ನಮ್ಮ ಎಂದು ನಾಮಕರಣ ಮಾಡುವಂತೆ ಪಂಚಮಸಾಲಿ ಸಮಾಜದ ಕೂಡಲ ಸಂಗಮ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸಕರ್ಾರಗಳನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ವಿನೋಬನಗರದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮರ 195ನೇ ವಿಜಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಈಚೆಗೆ ಮಾತನಾಡಿದ ಅವರು ಶರಣರು,ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಮಾಡುವುದು ಸರಿಯಲ್ಲ. ಗ್ರಾಮಸ್ಥರು ವಿಜಯೋತ್ಸವ ಆಚರಿಸಿರುವದು ಶ್ಲಾಘನೀಯ ಎಂದರು.ಪೀಠದಿಂದ ನಿರಂತವಾಗಿ ಸಮಾಜದ ಒಳಿತಿಗಾಗಿ ಉದ್ಯೋಗ,ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಹೋರಾಟ ನಡೆಸುವುದು ಅಗತ್ಯವಿದೆ ಎಂದರು.ಇದಕ್ಕೂ ಮುನ್ನ ಕಿತ್ತೂರು ಚನ್ನಮ್ಮ ಭಾವಚಿತ್ರದ ಮೆರವಣಿಗೆ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಚಾಲನೆ ನೀಡಿದರು. ಪಂಚಮಸಾಲಿ ನೌಕರರ ಸಂಘದ ರಾಜ್ಯ ಕಾರ್ಯದಶರ್ಿ ರವಿಉತ್ತಂಗಿ, ಶಿಕ್ಷಕ ಯು.ಹಾಲೇಶ, ಬಸವನಗೌಡ ಪಾಟೀಲ ಮಾತನಾಡಿದರು. ತಾ.ಪಂ.ಮಾಜಿ ಅಧ್ಯಕ್ಷ ಸೋಗಿಹಾಲೇಶ, ರಾಣಿ ಚನ್ನಮ್ಮ ಬ್ಯಾಂಕ್ ಉಪಾಧ್ಯಕ್ಷ ಕೆ.ಪತ್ರೇಶ, ಗ್ರಾಮದ ಮುಖಂಡರಾದ ಕೊಟ್ರೇಶಪ್ಪ, ಶಿವಕುಮಾರಗೌಡ, ಟಿ.ಹನುಮಂತಪ್ಪ, ಹಣ್ಣಿ ಬಸವನಗೌಡ, ಮಹ್ಮದ್ರಫಿ ಇತರರಿದ್ದರು.