ಮರ್ದಾನಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಲಿದ್ದಾರೆ ರಾಣಿಮುಖರ್ಜಿ


ಮುಂಬೈ, ಏ 30 ಬಾಲಿವುಡ್ ಅಭಿನೇತ್ರಿ ರಾಣಿ ಮುಖರ್ಜಿ ತಮ್ಮ ಸೂಪರ್ ಹಿಟ್ "ಮರ್ದಾನಿ" ಚಿತ್ರದ ಎರಡನೇ ಭಾಗದಲ್ಲಿ ಅಭಿನಯಿಸುತ್ತಿದ್ದು, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 2014ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ "ಮರ್ದಾನಿ" ಚಿತ್ರದಲ್ಲಿನ ತಮ್ಮ ಅದ್ಭುತ ನಟನೆಯಿಂದ ರಾಣಿ ಮುಖರ್ಜಿ ಬಾಲಿವುಡ್ ನಲ್ಲಿ ಪ್ರಳಯ ಸೃಷ್ಟಿಸಿದ್ದರು. ಈ ಚಿತ್ರದಲ್ಲಿ ರಾಣಿ ಮುಖರ್ಜಿ, ಸಾಹಸಿ ಪೊಲೀಸ್ ಅಧಿಕಾರಿ ಶಿವಾನಿ ಶಿವಾಜಿ ರಾಯ್ ಅವರ ಪಾತ್ರ ಅಭಿನಯಿಸಿ ಮಕ್ಕಳ ಕಳ್ಳ ಸಾಗಾಟ ಮಾಡುವ ತಂಡವನ್ನು ಭೇದಿಸಿದ್ದರು. 

ಇದೀಗ "ಮರ್ದಾನಿ" ಚಿತ್ರದ ಎರಡನೇ ಭಾಗದಲ್ಲಿ ರಾಣಿ ಅಭಿನಯಿಸುತ್ತಿದ್ದು, 21 ವರ್ಷದ ದುರಾಚಾರಿ, ನಿರ್ದಯ ಹೊಂದಿರುವ ವಿಲನ್ ವಿರುದ್ಧ ಪೊಲೀಸ್ ಅಧಿಕಾರಿಯಾಗಿ ಹೋರಾಟ ನಡೆಸಲಿದ್ದಾರೆ. 

ಇತ್ತೀಗಷ್ಟೇ "ಮರ್ದಾನಿ 2" ಚಿತ್ರದ ಸೆಟ್ ನಲ್ಲಿ ಒಂದು ಪೋಸ್ಟರ್ ಬಿಡುಗಡೆಗೊಳಿಸಲಾಗಿದ್ದು, ಅದರಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಣಿ ಮುಖರ್ಜಿ ನಿರ್ಭಯವಾಗಿ ಕಾಣಿಸಲಿದ್ದು, ದುರಾಚಾರಿ ವಿಲನ್ ಜೊತೆ ಹೋರಾಡಲು ಸಿದ್ಧತೆ ನಡೆಸುತ್ತಿದ್ದಾರೆ.