ಬಾಗಲಕೋಟೆ 04: ಬಾಗಲಕೋಟೆ ಜಿಲ್ಲಾ ಮಟ್ಟದ ರಾಣಿ ಚೆನ್ನಮ್ಮ ಜಯಂತಿಯನ್ನು ನವ್ಹಂಬರ್ ಅಥವಾ ಡಿಸೆಂಬರ ತಿಂಗಳಿನಲ್ಲಿ ಅದ್ದೂರಿಯಾಗಿ ಆಚರಿಸಲು ಇಂದಿಲ್ಲಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ನಿರ್ಧರಿಸಲಾಯಿತು.
ನವನಗರದಲ್ಲಿರುವ ಮಾಜಿ ಸಚಿವ, ಶಾಸಕ ಮುರುಗೇಶ್ ನಿರಾಣಿಯವರ ತೇಜಸ್ಸು ಇಂಟರ್ನ್ಯಾಷನಲ್ ಶಾಲೆಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳ ಸಾನಿಧ್ಯ, ಆರೋಗ್ಯ ಇಲಾಖೆಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ನಡೆದ ಜಿಲ್ಲಾ ಮಟ್ಟದ ಲಿಂಗಾಯತ ಪಂಚಮಸಾಲಿ ಈ ನಿಧರ್ಾರ ಕೈಗೊಳ್ಳಲಾಯಿತು.
ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಒಗ್ಗಟ್ಟಾಗಿ ಚನ್ನಮ್ಮನವರ ಜಯಂತಿಯನ್ನು ಹಾಗೂ ಜಿಲ್ಲಾ ಮಟ್ಟದ ಪಂಚಮಸಾಲಿ ಸಮಾವೇಶವನ್ನು ಯಶಸ್ವಿಯಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಶಿವಾನಂದ ಪಾಟೀಲ ಅವರು ದೀಪಾವಳಿಯ ನಂತರದಲ್ಲಿ ಜಿಲ್ಲಾ ಮುಖಂಡರಾದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ.ನಾಡಗೌಡ, ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರು ಹಾಗೂ ಉಳಿದ ಎಲ್ಲಾ ಮುಖಂಡರನ್ನು ಮತ್ತೊಮ್ಮೆ ಸೇರಿಸಿ ಸಮಾರಂಭದ ದಿನಾಂಕ ಹಾಗೂ ಜಯಂತಿ ಉತ್ಸವ ಸಮಿತಿಯನ್ನು ರಚಿಸೋಣ ಎಂದರು.
ಶಾಸಕ ಮುರುಗೆಶ್ ನಿರಾಣಿ ಮಾತನಾಡಿ ಉಭಯ ಪೀಠದ ಜಗದ್ಗುರುಗಳು ಹಾಗೂ ಎಲ್ಲಾ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಮಾಜದ ಒಗ್ಗಟ್ಟನ್ನು ಪ್ರದಶರ್ಿಸಬೇಕೆಂದು ಸಲಹೆ ನೀಡಿದರು.
ಎಂ.ಪಿ.ರವೀಂದ್ರರವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕಾರಣ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ಸಭೆಗೆ ಅಗಮಿಸಲು ಆಗಲಿಲ್ಲ. ಜಮಖಂಡಿ ಅಧ್ಯಕ್ಷ ಪಿ.ಎನ್.ಪಾಟೀಲ್, ಎಪಿಎಂಸಿ ಅಧ್ಯಕ್ಷ ಶಿವಾನಂದ ಅಬ್ದುಲ್ ಪುರ, ಜಿಲ್ಲಾ ಅಧ್ಯಕ್ಷ ಧರಿಯಪ್ಪ ಸಾಂಗ್ಲಿಕರ್ ಹಾಗೂ ಶಿವಾನಂದ ಗಬ್ಬೂರು, ಉದ್ಯಮಿ ಹಂಪನಗೌಡರು ಎಲ್ಲಾ ತಾಲೂಕಿನ ಮುಖಂಡರು ಉಪಸ್ಥಿತರಿದ್ದರು.