ಗೋಕಾಕ: ಸಮೀಪದ ರಂಗಾಪೂರ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ಜರುಗಿತು, ನೂಡಲ್ ಅಧಿಕಾರಿಗಳಾಗಿ ಮೂಡಲಗಿ ಗ್ರೇಡ್-2 ತಹಶೀಲದಾರ ಎಲ್.ಎಚ್. ಭೋವಿ ಕಾರ್ಯನಿರ್ವಹಿಸಿದರು.
ಜನಸ್ಪಂದನಾ ಸಭೆಯಲ್ಲಿ ಗ್ರಾಮಸ್ಥರು ತಮ್ಮ ನೂರಾರು ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡರು. ನಮ್ಮೂರಿಗೆ ಸಮರ್ಪಕವಾದ ರಸ್ತೆ ಸಂಪರ್ಕ ಇಲ್ಲ, ಈಗಿರುವ ರಸ್ತೆಯಲ್ಲಿ ಅಲ್ಲಲ್ಲಿ ತೆಗ್ಗುಗಳು ಬಿದ್ದು ವಯಸ್ಸಾದವರು ಮಕ್ಕಳು ನಡೆದಾಡುವುದು ಕಷ್ಟವಾಗಿದೆ. ಬೀದಿ ದೀಪಗಳನ್ನು ಅಳವಡಿಸಿಲ್ಲವಾದ್ದರಿಂದ ಕತ್ತಲೆಯೊಂದಿಗೆ ನಾವು ನಮ್ಮ ಬಾಳು ಸಾಗಿಸುತ್ತಿದ್ದೇವೆ. ಒಳಚರಂಡಿ ವ್ಯವಸ್ಥೆಯಿಲ್ಲ, ನಮ್ಮ ಮಕ್ಕಳಿಗೆ ಆಟವಾಡಲು ಆಟದ ಮೈದಾನವಿಲ್ಲ, ಶೌಚಾಯಲಗಳು ಇಲ್ಲದ ಕಾರಣ ಮಹಿಳೆಯರು ಬಯಲು ಪ್ರದೇಶವನ್ನೇ ಅವಲಂಬಿಸಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ಚಿಕ್ಕದಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ತಳವಾರ ಹಾಗೂ ಬೀರನಗಡ್ಡಿ ತೋಟದಲ್ಲಿ ಬೊರವೆಲ್ಲ ಕೊರೆಸಿದರೂ ಅದಕ್ಕೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಸಕರ್ಾರದ ಹಣ ಪೋಲಾಗಿದೆ. ದೇವಸ್ಥಾನಗಳಿಗೆ ಕಂಪೌಂಡ ಗೋಡೆಗಳನ್ನು ನಿಮರ್ಿಸಲು ಹಲವಾರಿ ಬಾರಿ ಮನವಿ ಮಾಡಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಸಾರ್ವಜನಿಕ ಗ್ರಂಥಾಲಯವಿಲ್ಲ ಎಂಬ ಸಮಸ್ಯೆಗಳ ಸರಮಾಲೆಗಳನ್ನು ಸಭೆಯಲ್ಲಿ ಗ್ರಾಮಸ್ಥರು ದೂರಿದರು.
ಮೂಡಲಗಿ ಗ್ರೇಡ್-2 ತಹಶೀಲದಾರ ಎಲ್.ಎಚ್. ಭೋವಿ. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ, ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳಲಾಗುವುದು, ಸಕರ್ಾರದ ಎಲ್ಲ ಇಲಾಖೆಗಳು ತಮ್ಮ ಜೊತೆಗೆ ಇದ್ದು ತಾವು ಅವರೊಂದಿಗೆ ಸಹಕರಿಸಿ ತಮ್ಮ ತೊಂದರೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ, ಪರಿಹಾರ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ತಾ.ಪಂ ಸದಸ್ಯ ಮಲ್ಲಿಕಾಜರ್ುನ ಕಬ್ಬೂರ, ಹಣಮಂತ ತೇರದಾಳ, ಗ್ರಾ.ಪಂ ಸದಸ್ಯ ಎನ್.ಕೆ.ಆರೇರ, ಅರಭಾಂವಿ ಕಂದಾಯ ನಿರೀಕ್ಷಕ ಆರ್.ಆಯ್.ನೇಸರಗಿ, ಗ್ರಾಮಲೆಕ್ಕಾಧಿಕಾರಿ ಎಸ್.ಎ.ಕೋತ್ಯಾಗೋಳ, ವಿಷಯ ನಿವರ್ಾಹಕ ಪಿ.ಎಸ್.ಕುಂಬಾರ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಎಚ್.ಕೆ.ಜಮಾದಾರ, ಕೆ.ಎಸ್.ಪಡೆನ್ನವರ, ಎಸ್.ಎಸ್.ಯಲಿಗಾರ ಸೇರಿದಂತೆ ಅನೇಕರು ಇದ್ದರು.