ಮುಷ್ಟೂರು ಗ್ರಾಮದಲ್ಲಿ ರಂಜಾನ್ ಇಫ್ತಾರ್ ಕೂಟ

ಲೋಕದರ್ಶನವರದಿ

ರಾಣೇಬೆನ್ನೂರು 4:  ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಮುಷ್ಟೂರು ಗ್ರಾಮದಲ್ಲಿ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಧರ್ಮ ಸಾಮರಸ್ಯದ ಉದ್ದೇಶದಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಸರ್ವಧಮರ್ಿಯರು ಪಾಲ್ಗೊಂಡಿದ್ದರು.

ಈ ವೇಳೆ ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಉಪಾಧ್ಯಕ್ಷ ಚಂದ್ರಪ್ಪ ಬೇಡರ್ ಅವರು ಮಾತನಾಡಿ, 'ಜಾತಿ-ಧರ್ಮ ಬೇಧವಿಲ್ಲದೆ ಜನರು ಹಬ್ಬಗಳನ್ನು ಒಟ್ಟಿಗೆ ಆಚರಿಸಬೇಕು. ಇದರಿಂದ ಸಾಮರಸ್ಯತೆ ಬೆಳೆಯುತ್ತದೆ. ಧರ್ಮದ ಹೆಸರಿನಲ್ಲಿ ಆಚರಿಸುವ ಹಬ್ಬಗಳಿಗೆ ರಾಜಕೀಯ ಲೇಪನ ಹಚ್ಚುವುದು ಸರಿಯಲ್ಲ ಎಂದು ಹೇಳಿದರು.

ಮುಸ್ಲಿಂರಿಗೆ ರಂಜಾನ್ ವಿಶಿಷ್ಟ ಹಬ್ಬವಾಗಿದ್ದು ಒಂದು ತಿಂಗಳ ಕಾಲ ಕಠಿಣ ರೋಜಾ ಪಾಲಿಸಿ ಪಾವಿತ್ರ್ಯತೆ ಹೊಂದುತ್ತಾರೆ. ಈ ನಿಟ್ಟಿನಲ್ಲಿ ಆಯೋಜಿಸುವ ಇಫ್ತಾರ್ ಕೂಟಗಳಿಂದ ಸಾಮಾಜಿಕ ಸಾಮರಸ್ಯತೆ ಹಾಗೂ ಸೌಹಾರ್ದತೆ ವೃದ್ಧಿಸುತ್ತದೆ ಎಂದರು.

    ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಮುಸ್ಲಿಂರು ಸಹಭೋಜನ ಕೂಟದಲ್ಲಿ ಪಾಲ್ಗೊಂಡು ಪರಸ್ಪರ ರಂಜಾನ್ ಹಬ್ಬದ ಶುಭ ಕೋರಿದರು.

       ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹರಿಹರಗೌಡ ಪಾಟೀಲ, ಮೌಲಾಸಾಬ್ ಶೇಕಸನದಿ, ಜಮಾಲಸಾಬ್ ಶೇಕಸನದಿ, ಮಂಜು ಮೂಲಿಮನಿ, ಬಿ.ಸಿ.ಯಲ್ಲಕ್ಕನವರ, ದಾದಪೀರ್ ಸಾಬ್, ಪರ್ವತಗೌಡ ಕುಸಗೂರ, ಬಸವನಗೌಡ ಪಾಟೀಲ, ಕುತ್ಬುದ್ದೀನ್ ಶೇಕಸನದಿ, ಅಕ್ಬರ್ ಸಾಬ್, ಸಾಬ್ಜಾನ್ ಸಾಬ್, ಯಲ್ಲರಡ್ಡಿ ಎರಿಶೀಮಿ, ಅಲ್ಲಾಭಕ್ಷ ರಾಣೆಬೆನ್ನೂರು, ನಜೀರ್ಸಾಬ್ ಶೇಕಸನದಿ, ಶಿವಕುಮಾರ್ ಜಾಧವ ಇದ್ದರು.