ಲಖನೌ, ಏ 5 ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ವಿಜಯ ಮಂತ್ರವನ್ನು ಇದೇ 6 ರಂದು ಮೊಳಗಿಲು ಮುಂದಾಗಿದೆ; ಸೂರ್ಯನ ಮೊದಲ ಕಿರಣಗಳು ಭೂಮಿಗೆ ತಾಕುತ್ತಿದ್ದಂತೆ ದೇಶಾದ್ಯಂತ 13 ಅಕ್ಷರದ ಶ್ರೀ ರಾಮ ವಿಜಯಮಂತ್ರ ಮೊಳಗಲಿದೆ ಎಂದು ವಿಎಚ್ ಪಿ ಮುಖಂಡ ವಿಕ್ರಮ್ ಸಂವತ್ ಹೇಳಿದ್ದಾರೆ. ವಿಎಚ್ ಪಿ ಮೂಲಗಳ ಪ್ರಕಾರ, ರಾಷ್ಟ್ರವ್ಯಾಪಿ ಸಾಮೂಹಿಕ ಜಾಗೃತಿ ಕಾರ್ಯಕ್ರಮವಾದ 'ಅನುಷ್ಠನ್' ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. 13 ಕೋಟಿ ವಿಜಯ ಮಂತ್ರಗಳ ಪಠಣ, ಅಯೋಧ್ಯೆಯಲ್ಲಿ ರಾಮ ಮಂದಿರದ ನಿಮರ್ಾಣಕ್ಕೆ ಇರುವ ಎಲ್ಲ ಅಡೆತಡೆಗಳನ್ನು ತೆಗೆದುಹಾಕಲಿದೆ.
ಹಿಂದೂ ಹೊಸ ವರ್ಷದ ಮೊದಲ ದಿನ (ನವ್-ಸಂವತ್ಸರ ) ಮಂತ್ರಗಳನ್ನು ಪಠಿಸುವುದು ಬಹಳ ಮಹತ್ವದ್ದಾಗಿದೆ. ಜ್ಯೋತಿಷದ ಪ್ರಕಾರ, ಅತ್ಯಂತ ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗುವ "ಪುಷ್ಪ ಸಮೂಹ" ಆನಂದ ಸಂವತ್ಸರದ ಮೊದಲ ದಿನದ ಸೂಯರ್ೊದ ಸಮಯ ಸರ್ವ ಸಿದ್ಧಿ ಯೋಗ (ಎಲ್ಲರೂ ಸಾಧಿಸಲು ಸಾಧ್ಯವಾದ ಮಂಗಳಕರ ಸಮಯ) ಎಂದು ವಿಎಚ್ ಪಿ ನಾಯಕರು ಹೇಳಿದ್ದಾರೆ. ಈ ಶುದ್ಧ ಮತ್ತು ಸ್ವಚ್ಛ ಸಂದರ್ಭದ ಪ್ರಾರ್ಥನೆಯ ಆಶಯ ಈಡೇರಲಿದೆ ಎಂದು ಅವರು ಹೇಳಿದರು. ಹೀಗಾಗಿ ಧರ್ಮ ಸಂಸದ್ (ಧಾಮರ್ಿಕ ಸಭೆ) ಯನ್ನು ಈ ಸಮಯದಲ್ಲಿ ಆಯೋಜಿಸಿದ್ದು 13 ಕೋಟಿ ಬಾರಿ ವಿಜಯ ಮಂತ್ರ ಪಠಣಗೆ ಎಲ್ಲ ರಾಮ ಭಕ್ತರಿಗೂ ಆಹ್ವಾನ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬುದೇ 13 ಅಕ್ಷರದ ವಿಜಯ ಮಂತ್ರ. ಈ ಮಂತ್ರ ಪಠಣದಿಂದ ರಾಮಜನ್ಮಭೂಮಿ (ಜನ್ಮಸ್ಥಳ) ಮೇಲೆ ರಾಮ ದೇವಾಲಯದ ನಿಮರ್ಾಣ ಕಾರ್ಯಕ್ಕೆ ಎದುರಾಗುವ ಎಲ್ಲ ವಿಘ್ನಗಳನ್ನು ನಿವಾರಿಸಬಹುದಾಗಿದೆ. ರಾಮ ದೇವಾಲಯದ ನಿಮರ್ಾಣಕ್ಕಾಗಿ ಎಲ್ಲ ರಾಮಭಕ್ತರು ಇದೇ 6 ರಂದು ಸೂಯರ್ೊದಯವಾಗುತ್ತಿದ್ದಂತೆ 13 ಮಾಲೆ ರಾಮ ಮಂತ್ರ ಜಪಿಸುವಂತೆ ಫೆಬ್ರವರಿ 1 ರಂದು ಧರ್ಮ ಸಂಸದ್ ಸಭೆ ಕರೆ ನೀಡಿತ್ತು. ವಿಎಚ್ ಪಿ ಪ್ರಕಾರ, ಈ ವಿಜಯ ಮಂತ್ರಗಳ ಪಠಣಕ್ಕೆ ಯಾವುದೇ ವಿಶೇಷ ಧಾಮರ್ಿಕ ಸಿದ್ಧತೆಗಳು ಅಥವಾ ಪವಿತ್ರ ಸ್ಥಳಕ್ಕೆ ಬರಬೇಕು ಎಂದು ಕರೆ ನೀಡುವುದಿಲ್ಲ. ರಾಮ ಭಕ್ತರು ತಮ್ಮ ಮನೆಗಳಲ್ಲೂ ಸಹ ಸಂಪ್ರದಾಯವಾದಿ ಮಂತ್ರ ಪಠಣಗಳನ್ನು ಮಾಡಬಹುದು. ಆದರೆ, ದೇವಾಲಯಗಳು, ಉದ್ಯಾನವನಗಳು ಅಥವಾ ಸಾರ್ವಜನಿಕ
ಸ್ಥಳಗಳಲ್ಲಿ ಇದನ್ನು ನಡೆಸಿದರೆ, ಅದು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಸಮಾಜ, ಕುಟುಂಬ, ನೆರೆಹೊರೆಯವರು, ಸಂಬಂಧಿಕರು, ಸ್ನೇಹಿತರು, ಮಕ್ಕಳು, ವಯಸ್ಸಾದವರು, ಮಹಿಳೆಯರು ಮತ್ತು ಯುವಜನರು ಹೀಗೆ ಎಲ್ಲರೂ ಮುಂದೆ ಬಂದು ಧಾಮರ್ಿಕ ಕೆಲಸದಲ್ಲಿ ಪಾಲ್ಗೊಳ್ಳಬಹುದು ಎಂದು ಸಂತರು ಕರೆ ನೀಡಿದ್ದಾರೆ. ವಿಎಚ್ ಪಿ ಕಾರ್ಯಕರ್ತರು ಈಗಾಗಲೇ ರಾಮ ಭಕ್ತರನ್ನು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಹಾಯ ಮಾಡಿದ್ದಾರೆ. ಸರ್ವ ಸಿದ್ಧಿ ಯೋಗದ ಸಮಯದಲ್ಲಿ ವಿಜಯ ಮಂತ್ರಗಳ ಪಠಣದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿಮರ್ಾಣಕ್ಕಾಗಿನ ಅಡೆತಡೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮ ಬೀರಲಿದೆ ಎಂದು ಧರ್ಮ ಸಂಸತ್ ನಲ್ಲಿ ಅಂಗೀಕರಿಸಲಾದ ನಿರ್ಣಯ ದೃಢವಾಗಿ ನಂಬಿದೆ.