ರಾಮದುರ್ಗ ತಾಲೂಕ: ಮಲ್ಲಾಪೂರ ಶಾಲೆಗೆ ಜಿಲ್ಲಾ ಹಸಿರು ಶಾಲೆ ಪ್ರಶಸ್ತಿ

ರಾಮದುರ್ಗ 15: ತಾಲೂಕಿನ ಮಲ್ಲಾಪೂರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿಗೆ ಭಾಜನವಾಗಿದೆ. 

ಬೆಳಗಾವಿಯ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿವರ್ಷ ನಡೆಸುವ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲೆ ಕಾರ್ಯಕ್ರಮದಲ್ಲಿ 2018-19 ನೇ ಸಾಲಿನ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿಗೆ ಮಲ್ಲಾಪೂರ ಸರಕಾರಿ ಶಾಲೆ ಆಯ್ಕೆಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಪರಿಸರದ ಕಾಳಜಿಪರ ಕಾರ್ಯಕ್ರಮ, ಶಾಲಾ ಆವರಣದಲ್ಲಿ ಗಿಡಮರ ಬಳ್ಳಿಗಳನ್ನು ಬೆಳೆಸಿ ಪೋಷಿಸಿದ್ದನ್ನು ಪರಿಗಣಿಸಿ ಈ ಪ್ರಶಸ್ತಿ ದೊರೆತಿದೆ. ಇತ್ತಿಚೆಗೆ ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಮುಖ್ಯೋಪಾಧ್ಯಾಯ ಪಿ.ಎಚ್. ಅಮೀನನಾಯ್ಕ, ಶಾಲಾ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿ ಪ್ರಶಸ್ತಿ ಪಡೆದುಕೊಂಡರು.